ಕ್ಯಾಪ್ಟನ್‌ ತಿಮ್ಮಪ್ಪಯ್ಯ ಸ್ಮಾರಕ ಕ್ರಿಕೆಟ್‌: ಅಧ್ಯಕ್ಷರ ಇಲೆವನ್‌ಗೆ ಸೋಲು

7

ಕ್ಯಾಪ್ಟನ್‌ ತಿಮ್ಮಪ್ಪಯ್ಯ ಸ್ಮಾರಕ ಕ್ರಿಕೆಟ್‌: ಅಧ್ಯಕ್ಷರ ಇಲೆವನ್‌ಗೆ ಸೋಲು

Published:
Updated:
Deccan Herald

ಬೆಂಗಳೂರು: ಆದಿತ್ಯ ಸೋಮಣ್ಣ (ಔಟಾಗದೆ 135; 156ಎ, 7ಬೌಂ, 7ಸಿ) ಮತ್ತು ಶರತ್‌ ಶ್ರೀನಿವಾಸ್‌ (69) ಅವರ ಛಲದ ಹೋರಾಟಕ್ಕೆ ಫಲ ಸಿಗಲಿಲ್ಲ.

ಸೌರಭ್‌ ಕುಮಾರ್‌ (126ಕ್ಕೆ4) ಮತ್ತು ಶಿವಂ ಚೌಧರಿ (60ಕ್ಕೆ4) ಅವರ ಪರಿಣಾಮಕಾರಿ ದಾಳಿಗೆ ಕಂಗಾಲಾದ ಕೆಎಸ್‌ಸಿಎ ಅಧ್ಯಕ್ಷರ ಇಲೆವನ್‌ ತಂಡ ಕ್ಯಾಪ್ಟನ್‌ ತಿಮ್ಮಪ್ಪಯ್ಯ ಸ್ಮಾರಕ ಕ್ರಿಕೆಟ್‌ ಟೂರ್ನಿಯ ಸೆಮಿಫೈನಲ್‌ ಪಂದ್ಯದಲ್ಲಿ 9 ವಿಕೆಟ್‌ಗಳಿಂದ ಉತ್ತರ ‍ಪ್ರದೇಶ ಸಂಸ್ಥೆ ಎದುರು ಸೋತಿತು.

ಜಸ್ಟ್‌ ಕ್ರಿಕೆಟ್‌ ಮೈದಾನದಲ್ಲಿ 4 ವಿಕೆಟ್‌ಗೆ 136ರನ್‌ಗಳಿಂದ ಮಂಗಳವಾರ ಆಟ ಮುಂದುವರಿಸಿದ ಅಧ್ಯಕ್ಷರ ಇಲೆವನ್‌, ದ್ವಿತೀಯ ಇನಿಂಗ್ಸ್‌ನಲ್ಲಿ 86.5 ಓವರ್‌ಗಳಲ್ಲಿ 381ರನ್‌ಗಳಿಗೆ ಆಲೌಟ್‌ ಆಯಿತು.

ಶರತ್‌ ಮತ್ತು ಆದಿತ್ಯ ಅವರು ಏಳನೇ ವಿಕೆಟ್‌ ಜೊತೆಯಾಟದಲ್ಲಿ 174ರನ್‌ ಕಲೆಹಾಕಿ ಗಮನ ಸೆಳೆದರು.

91ರನ್‌ಗಳ ಗೆಲುವಿನ ಗುರಿಯನ್ನು 18 ಓವರ್‌ಗಳಲ್ಲಿ 1 ವಿಕೆಟ್‌ ಕಳೆದುಕೊಂಡು ಮುಟ್ಟಿದ ಉತ್ತರ ಪ್ರದೇಶ ತಂಡ ಫೈನಲ್‌ಗೆ ಲಗ್ಗೆ ಇಟ್ಟಿತು.

ಕ್ಷಿತಿಜ್‌ ದ್ವಿಶತಕ: ಆಲೂರಿನ ಮೂರನೆ ಮೈದಾನದಲ್ಲಿ ನಡೆಯುತ್ತಿರುವ ಛತ್ತೀಸಗಡ ಕ್ರಿಕೆಟ್‌ ಸಂಘದ ಎದುರಿನ ಮತ್ತೊಂದು ಸೆಮಿಫೈನಲ್‌ನಲ್ಲಿ ಗುಜರಾತ್‌ ಸಂಸ್ಥೆ ತಂಡ ಬೃಹತ್‌ ಮೊತ್ತ ಪೇರಿಸಿದೆ.

3 ವಿಕೆಟ್‌ಗೆ 399ರನ್‌ಗಳಿಂದ ಮಂಗಳವಾರ ಆಟ ಮುಂದುವರಿಸಿದ ಗುಜರಾತ್‌ ಸಂಸ್ಥೆ 150 ಓವರ್‌ಗಳಲ್ಲಿ 527ರನ್‌ ದಾಖಲಿಸಿತು.

ಈ ತಂಡದ ಕ್ಷಿತಿಜ್‌ ‍ಪಟೇಲ್‌ (215; 360ಎ, 24ಬೌಂ, 4ಸಿ) ದ್ವಿಶತಕ ಸಿಡಿಸಿ ಮಿಂಚಿದರು.

ದ್ವಿತೀಯ ಇನಿಂಗ್ಸ್‌ ಶುರುಮಾಡಿರುವ ಛತ್ತೀಸಗಡ ಸಂಘ ದಿನದಾಟದ ಅಂತ್ಯಕ್ಕೆ 45 ಓವರ್‌ಗಳಲ್ಲಿ 5 ವಿಕೆಟ್‌ಗೆ 158ರನ್‌ ಪೇರಿಸಿದೆ.

ಸಂಕ್ಷಿಪ್ತ ಸ್ಕೋರ್‌: ಕೆಎಸ್‌ಸಿಎ ಅಧ್ಯಕ್ಷರ ಇಲೆವನ್‌: ಮೊದಲ ಇನಿಂಗ್ಸ್‌, 45.3 ಓವರ್‌ಗಳಲ್ಲಿ 135 ಮತ್ತು ಎರಡನೆ ಇನಿಂಗ್ಸ್‌: 86.5 ಓವರ್‌ಗಳಲ್ಲಿ 381 (ಶರತ್‌ ಶ್ರೀನಿವಾಸ್‌ 69, ಆದಿತ್ಯ ಸೋಮಣ್ಣ ಔಟಾಗದೆ 135; ಸೌರಭ್‌ ಕುಮಾರ್‌ 126ಕ್ಕೆ4, ಶಿವಂ ಚೌಧರಿ 60ಕ್ಕೆ4, ಜೀಶನ್‌ ಅನ್ಸಾರಿ 75ಕ್ಕೆ2).

ಉತ್ತರ ಪ್ರದೇಶ ‌ಸಂಸ್ಥೆ: ಪ್ರಥಮ ಇನಿಂಗ್ಸ್‌, 100.3 ಓವರ್‌ಗಳಲ್ಲಿ 425 ಮತ್ತು ಎರಡನೆ ಇನಿಂಗ್ಸ್‌: 18 ಓವರ್‌ಗಳಲ್ಲಿ 1 ವಿಕೆಟ್‌ಗೆ 93 (ಶಿವಂ ಚೌಧರಿ 41, ಉಮಂಗ್‌ ಶರ್ಮಾ ಔಟಾಗದೆ 37).

ಫಲಿತಾಂಶ: ಉತ್ತರ ಪ್ರದೇಶ ಸಂಸ್ಥೆಗೆ 9 ವಿಕೆಟ್‌ ಜಯ.

ಎರಡನೆ ಸೆಮಿಫೈನಲ್‌: ಛತ್ತೀಸಗಡ ಕ್ರಿಕೆಟ್‌ ಸಂಘ: ಮೊದಲ ಇನಿಂಗ್ಸ್‌, 70.1 ಓವರ್‌ಗಳಲ್ಲಿ 241 ಮತ್ತು 45 ಓವರ್‌ಗಳಲ್ಲಿ 5 ವಿಕೆಟ್‌ಗೆ 158 (ವಿಕ್ರಾಂತ್‌ ಸಿಂಗ್‌ ರಜಪೂತ್‌ 40, ಅಜಯ್‌ ಮಂಡಲ್‌ 26, ಅಮನ್‌ದೀಪ್‌ ಖರೆ 29, ಮನೋಜ್‌ ಸಿಂಗ್‌ 24; ಕರಣ್‌ ಪಟೇಲ್‌ 74ಕ್ಕೆ3).

ಗುಜರಾತ್‌ ಸಂಸ್ಥೆ: ಪ್ರಥಮ ಇನಿಂಗ್ಸ್‌, 150 ಓವರ್‌ಗಳಲ್ಲಿ 527 (ಭಾರ್ಗವ್‌ ಮೆರಾಯ್‌ 91, ಕ್ಷಿತಿಜ್‌ ಪಟೇಲ್‌ 215, ಮನ್‌ಪ್ರೀತ್‌ ಜುನೇಜಾ 83; ಅಜಯ್‌ ಮಂಡಲ್‌ 98ಕ್ಕೆ4, ಅಭಿಷೇಕ್‌ ಖರೆ 139ಕ್ಕೆ3).

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !