ಶುಕ್ರವಾರ, ಡಿಸೆಂಬರ್ 13, 2019
26 °C

ಶಿಕ್ಷೆ ಮುಗಿಸಿ ಮರಳಿದ ಪೃಥ್ವಿ ಅರ್ಧಶತಕದ ಮಿಂಚು

ಪಿಟಿಐ Updated:

ಅಕ್ಷರ ಗಾತ್ರ : | |

ಮುಂಬೈ: ಉದ್ದೀಪನ ಮದ್ದು ಸೇವನೆ ಮಾಡಿ ಶಿಕ್ಷೆ ಪೂರೈಸಿದ ಮರಳಿ ಬಂದ ನಂತರ ಆಡಿದ ಮೊದಲ ಪಂದ್ಯದಲ್ಲಿಯೇ ಪೃಥ್ವಿಶಾ ಅರ್ಧಶತಕ ಬಾರಿಸಿ ಗಮನ ಸೆಳೆದರು. 

ವಾಂಖೆಡೆ ಕ್ರೀಡಾಂಗಣದಲ್ಲಿ ಭಾನುವಾರ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟ್ವೆಂಟಿ–20 ಕ್ರಿಕೆಟ್ ಟೂರ್ನಿಯಲ್ಲಿ ಪೃಥ್ವಿ (63; 39ಎಸೆತ) ಅವರ ಬ್ಯಾಟಿಂಗ್ ಬಲದಿಂದ ಮುಂಬೈ ತಂಡವು 83 ರನ್‌ ಗಳಿಂದ ಅಸ್ಸಾಂ ವಿರುದ್ಧ ಗೆದ್ದಿತು.

ಪೃಥ್ವಿ ಅವರೊಂದಿಗೆ ಉತ್ತಮ ಜೊತೆಯಾಟವಾಡಿದ ಆದಿತ್ಯ ತಾರೆ (82; 48ಎಸೆತ) ಕೂಡ ಅರ್ಧಶತಕ ಬಾರಿಸಿದರು. ಇದರಿಂದಾಗಿ ತಂಡವು 20 ಓವರ್‌ಗಳಲ್ಲಿ 5ಕ್ಕೆ 206 ರನ್ ಗಳಿಸಿತು. ಅದಕ್ಕುತ್ತರವಾಗಿ ಅಸ್ಸಾಂ ತಂಡವು 20 ಓವರ್‌ಗಳಲ್ಲಿ 8ಕ್ಕೆ 123 ರನ್ ಗಳಿಸಿ ಸೋತಿತು. 

ಪೃಥ್ವಿಯು ನಿಷೇಧಿತ ಉದ್ದೀಪನ ಮದ್ದು ಸೇವಿಸಿದ್ದು ಸಾಬೀತಾಗಿತ್ತು. ಆದ್ದರಿಂದ ಬಿಸಿಸಿಐ ಅವರಿಗೆ ಎಂಟು ತಿಂಗಳ ನಿಷೇಧ ಶಿಕ್ಷೆ ವಿಧಿಸಿತ್ತು.

ಸಂಕ್ಷಿಪ್ತ ಸ್ಕೋರು: ಮುಂಬೈ: 20 ಓವರ್‌ಗಳಲ್ಲಿ 5ಕ್ಕೆ206 (ಆದಿತ್ಯ ತಾರೆ 82, ಪೃಥ್ವಿ ಶಾ 63, ರಿಯಾನ್ ಪರಾಗ್ 30ಕ್ಕೆ3), ಅಸ್ಸಾಂ: 20 ಓವರ್‌ಗಳಲ್ಲಿ 8ಕ್ಕೆ123 (ರಿಯಾನ್ ಪರಾಗ್ 38, ಶಿವಶಂಕರ್ ರಾಯ್ 22, ಶಿವಂ ದುಬೆ 3ಕ್ಕೆ2) ಫಲಿತಾಂಶ: ಮುಂಬೈ ತಂಡಕ್ಕೆ 83 ರನ್‌ಗಳ ಜಯ.

ಪ್ರತಿಕ್ರಿಯಿಸಿ (+)