ಗುರುವಾರ , ಜನವರಿ 23, 2020
28 °C

ಪ್ರಿಯಂ ಗರ್ಗ್‌ ಶತಕ ಭಾರತ ಯುವ ತಂಡ ಜಯಭೇರಿ

ಪಿಟಿಐ Updated:

ಅಕ್ಷರ ಗಾತ್ರ : | |

ಡರ್ಬನ್‌: ನಾಯಕ ಪ್ರಿಯಂ ಗರ್ಗ್‌ 103 ಎಸೆತಗಳಲ್ಲಿ 110 ರನ್‌ ಬಾರಿಸಿ, ಭಾರತ 19 ವರ್ಷದೊಳಗಿನವರ ತಂಡ ನಾಲ್ಕು ರಾಷ್ಟ್ರಗಳ ಏಕದಿನ ಕ್ರಿಕೆಟ್‌ ಟೂರ್ನಿಯಲ್ಲಿ ಶುಭಾರಂಭ ಮಾಡಲು ನೆರವಾದರು. ಶುಕ್ರವಾರ ನಡೆದ ಈ ಪಂದ್ಯದಲ್ಲಿ ಭಾರತ ತಂಡ 66 ರನ್‌ಗಳಿಂದ ಆತಿಥೇಯ ದಕ್ಷಿಣ ಆಫ್ರಿಕಾ ತಂಡವನ್ನು ಸೋಲಿಸಿತು.

ಟಾಸ್‌ ಗೆದ್ದ ಭಾರತ ತಂಡ ಬ್ಯಾಟ್‌ ಮಾಡಿ 5 ವಿಕೆಟ್‌ಗೆ 264 ರನ್‌ಗಳ ಉತ್ತಮ ಮೊತ್ತ ಗಳಿಸಿತು. ಗರ್ಗ್ ಅವರಿಗೆ ಧ್ರುವ್ ಜುರೆಲ್‌ (65) ಮತ್ತು ತಿಲಕ್‌ ವರ್ಮಾ (42) ಬೆಂಬಲ ನೀಡಿದರು. ಗರ್ಗ್‌ ಎರಡು ಸಿಕ್ಸರ್‌, 9 ಬೌಂಡರಿಗಳನ್ನು ಬಾರಿಸಿದರು. ಇತ್ತೀಚಿನ ಐಪಿಎಲ್‌ ಹರಾಜಿನಲ್ಲಿ ಅವರು ₹ 1.90 ಕೋಟಿಗೆ ರಾಜಸ್ತಾನ್‌ ರಾಯಲ್ಸ್‌ ತಂಡದ ಪಾಲಾಗಿದ್ದರು.

ಪ್ರವಾಸಿ ತಂಡ ನಂತರ ದಕ್ಷಿಣ ಆಫ್ರಿಕಾ ತಂಡವನ್ನು (9 ವಿಕೆಟ್‌ಗೆ) 198 ರನ್‌ಗಳಿಗೆ ನಿಯಂತ್ರಿಸಿತು. ಎಡಗೈ ವೇಗದ ಬೌಲರ್‌ ಸುಶಾಂತ್‌ ಮಿಶ್ರಾ 48 ರನ್ನಿಗೆ 4 ವಿಕೆಟ್‌ ಪಡೆದರು. ನಾಯಕ ಬ್ರೈಸ್‌ ಪಾರ್ಸನ್ಸ್‌ 50 ಎಸೆತಗಳಲ್ಲಿ 57 ರನ್‌ ಬಾರಿಸಿ ಹೋರಾಟ ಪ್ರದರ್ಶಿಸಿದರು. ಲೋವ್‌ 45 ರನ್‌ ಗಳಿಸಿದರು.

ಭಾರತ ಭಾನುವಾರ ನಡೆಯುವ ಪಂದ್ಯದಲ್ಲಿ ಜಿಂಬಾಬ್ವೆ ತಂಡವನ್ನು ಎದುರಿಸಲಿದೆ. ನ್ಯೂಜಿಲೆಂಡ್‌ ಟೂರ್ನಿಯಲ್ಲಿರುವ ನಾಲ್ಕನೇ ತಂಡವಾಗಿದೆ.

ಸಂಕ್ಷಿಪ್ತ ಸ್ಕೋರು: (19 ವರ್ಷದೊಳಗಿನವರು) ಭಾರತ: 50 ಓವರುಗಳಲ್ಲಿ 5 ವಿಕೆಟ್‌ಗೆ 264 (ಎನ್‌.ಟಿ.ತಿಲಕ್‌ ವರ್ಮಾ  42, ಪ್ರಿಯಂ ಗರ್ಗ್‌ 110, ಧ್ರುವ್‌ ಜುರೆಲ್‌ 65; ಮೊಂಡ್ಲಿ 53ಕ್ಕೆ4); ನಾಯಕ ಪ್ರಿಯಂ ಗರ್ಗ್‌ 103 ಎಸೆತಗಳಲ್ಲಿ 110 ರನ್‌ ಬಾರಿಸಿ, ಭಾರತ 19 ವರ್ಷದೊಳಗಿನವರ ತಂಡ ನಾಲ್ಕು ರಾಷ್ಟ್ರಗಳ ಏಕದಿನ ಕ್ರಿಕೆಟ್‌ ಟೂರ್ನಿಯಲ್ಲಿ ಶುಭಾರಂಭ ಮಾಡಲು ನೆರವಾದರು.50 ಓವರುಗಳಲ್ಲಿ 9 ವಿಕೆಟ್‌ಗೆ 198 (ಎ.ಲೋವ್‌ 45, ಬ್ರೈಸ್‌ ಪಾರ್ಸನ್ಸ್‌ 57; ರವಿ ಬಿಷ್ಣೋಯಿ 29ಕ್ಕೆ2, ಸುಶಾಂತ್‌ ಮಿಶ್ರಾ48ಕ್ಕೆ4)

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು