4
ಫೈನಲ್‌ ಪ್ರವೇಶಿಸಿದ ಭಾರತ ‘ಎ’

‘ಎ’ ತಂಡ ತ್ರಿಕೋನ ಏಕದಿನ ಸರಣಿ: ಪೃಥ್ವಿ, ಹನುಮವಿಹಾರಿ ಶತಕ

Published:
Updated:
ಭಾರತದ ಹನುಮ ವಿಹಾರಿ ಬ್ಯಾಟಿಂಗ್‌ ವೈಖರಿ

ನಾರ್ಥಾಂಪ್ಟನ್‌ : ಆರಂಭಿಕ ಆಟಗಾರ ಪೃಥ್ವಿ ಶಾ (102; 90ಎ, 16ಬೌಂ) ಮತ್ತು ಹನುಮ ವಿಹಾರಿ (147; 131ಎ, 13ಬೌಂ, 5ಸಿ) ಅವರ ಶತಕಗಳ ಬಲದಿಂದ ಭಾರತ ‘ಎ’ ತಂಡ ತ್ರಿಕೋನ ಏಕದಿನ ಕ್ರಿಕೆಟ್‌ ಸರಣಿಯ ಪಂದ್ಯದಲ್ಲಿ 203ರನ್‌ಗಳಿಂದ ವೆಸ್ಟ್‌ ಇಂಡೀಸ್‌ ‘ಎ’ ತಂಡವನ್ನು ಮಣಿಸಿದೆ.

ಇದರೊಂದಿಗೆ ಶ್ರೇಯಸ್‌ ಅಯ್ಯರ್‌ ಬಳಗ ಫೈನಲ್‌ಗೆ ಲಗ್ಗೆ ಇಟ್ಟಿದೆ. ನಾಳೆ ನಡೆಯುವ ಪ್ರಶಸ್ತಿ ಸುತ್ತಿನ ಪೈಪೋಟಿಯಲ್ಲಿ ಭಾರತ ತಂಡ ಇಂಗ್ಲೆಂಡ್‌ ‘ಎ’ ಸವಾಲು ಎದುರಿಸಲಿದೆ.

ಕೌಂಟಿ ಮೈದಾನದಲ್ಲಿ ಮೊದಲು ಬ್ಯಾಟ್‌ ಮಾಡಿದ ಭಾರತ ‘ಎ’ 50 ಓವರ್‌ಗಳಲ್ಲಿ 6 ವಿಕೆಟ್‌ಗೆ 354ರನ್‌ ದಾಖಲಿಸಿತು. ಗುರಿ ಬೆನ್ನಟ್ಟಿದ ಡೆವೊನ್‌ ಥಾಮಸ್‌ ನೇತೃತ್ವದ ವಿಂಡೀಸ್‌ 37.4 ಓವರ್‌ಗಳಲ್ಲಿ 151ರನ್‌ಗಳಿಗೆ ಹೋರಾಟ ಮುಗಿಸಿತು.

ಸಂಕ್ಷಿಪ್ತ ಸ್ಕೋರ್‌: ಭಾರತ ‘ಎ’, 50 ಓವರ್‌ಗಳಲ್ಲಿ 6 ವಿಕೆಟ್‌ಗೆ 354 (ಪೃಥ್ವಿ ಶಾ 102, ಹನುಮವಿಹಾರಿ 147, ದೀಪಕ್‌ ಹೂಡಾ 21, ವಿಜಯ್‌ ಶಂಕರ್‌ 28, ಇಶಾನ್‌ ಕಿಶನ್‌ ಔಟಾಗದೆ 21; ಚೇಮರ್‌ ಹೋಲ್ಡರ್‌ 70ಕ್ಕೆ3, ಒಶಾನೆ ಥಾಮಸ್‌ 57ಕ್ಕೆ1, ರಹಕೀಮ್‌ ಕಾರ್ನ್‌ವಾಲ್‌ 43ಕ್ಕೆ1).

ವೆಸ್ಟ್‌ ಇಂಡೀಸ್‌ ‘ಎ’: 37.4 ಓವರ್‌ಗಳಲ್ಲಿ 151 (ಚಂದ್ರಪಾಲ್‌ ಹೇಮರಾಜ್‌ 43, ಸುನಿಲ್‌ ಆ್ಯಂಬ್ರಿಸ್‌ 32, ರೇಮನ್‌ ರೀಫರ್‌ 26, ರಹಕೀಮ್‌ ಕಾರ್ನ್‌ವಾಲ್‌ 18; ಅಕ್ಷರ್‌ ಪಟೇಲ್‌ 34ಕ್ಕೆ4, ದೀಪಕ್‌ ಚಾಹರ್‌ 21ಕ್ಕೆ2, ವಿಜಯ್‌ ಶಂಕರ್‌ 29ಕ್ಕೆ1, ಕೆ.ಗೌತಮ್‌ 28ಕ್ಕೆ1, ದೀಪಕ್‌ ಹೂಡಾ 3ಕ್ಕೆ1).

ಫಲಿತಾಂಶ: ಭಾರತ ‘ಎ’ ತಂಡಕ್ಕೆ 203 ರನ್‌ ಗೆಲುವು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !