ಮಂಗಳವಾರ, ಜುಲೈ 27, 2021
28 °C

ಚೇತೇಶ್ವರ್‌ ಪೂಜಾರಗೆ ಬೌಲಿಂಗ್‌ ಮಾಡುವುದು ಕಷ್ಟ: ಪ್ಯಾಟ್‌ ಕಮಿನ್ಸ್‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮೆಲ್ಬರ್ನ್‌: ‘ಟೆಸ್ಟ್‌ ಮಾದರಿಯಲ್ಲಿ ಭಾರತದ ಬ್ಯಾಟ್ಸ್‌ಮನ್‌ ಚೇತೇಶ್ವರ್‌ ಪೂಜಾರ ಅವರಿಗೆ ಬೌಲಿಂಗ್‌ ಮಾಡುವುದು ತುಂಬಾ ಕಷ್ಟ’ ಎಂದು ಆಸ್ಟ್ರೇಲಿಯಾದ ವೇಗದ ಬೌಲರ್‌ ಪ್ಯಾಟ್‌ ಕಮಿನ್ಸ್‌ ಹೇಳಿದ್ದಾರೆ.

ಆಸ್ಟ್ರೇಲಿಯಾ ಕ್ರಿಕೆಟಿಗರ ಸಂಸ್ಥೆ (ಎಸಿಎ) ಆಯೋಜಿಸಿದ್ದ ಪ್ರಶ್ನೋತ್ತರ ಕಾರ್ಯಕ್ರಮದಲ್ಲಿ ಅವರು ಹೀಗೆ ಅಭಿಪ್ರಾಯಪಟ್ಟಿದ್ದಾರೆ.

2018–19ರಲ್ಲಿ ಭಾರತವು ಆಸ್ಟ್ರೇಲಿಯಾ ನೆಲದಲ್ಲಿ ಐತಿಹಾಸಿಕ ಸರಣಿ ಗೆಲ್ಲುವಲ್ಲಿ ಪೂಜಾರ ಪಾತ್ರ ಮಹತ್ವದ್ದೆನಿಸಿತ್ತು. 74ರ ಸರಾಸರಿಯಲ್ಲಿ ಅವರು 521ರನ್‌ಗಳನ್ನು ದಾಖಲಿಸಿದ್ದರು. ಇದರಲ್ಲಿ ಮೂರು ಶತಕಗಳೂ ಸೇರಿದ್ದವು.

‘ಆ ಸರಣಿಯಲ್ಲಿ ಪೂಜಾರ ಅಮೋಘ ಆಟ ಆಡಿದ್ದರು. ಅವರ ವಿಕೆಟ್‌ ಪಡೆಯಲು ನಾವು ಹರಸಾಹಸ ಪಟ್ಟಿದ್ದೆವು. ನನ್ನ ಪ್ರಕಾರ ಟೆಸ್ಟ್‌ನಲ್ಲಿ ಅವರಿಗೆ ಬೌಲಿಂಗ್‌ ಮಾಡುವುದು ಸವಾಲಿನ ಕೆಲಸ’ ಎಂದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು