ಶುಕ್ರವಾರ, ಸೆಪ್ಟೆಂಬರ್ 20, 2019
27 °C

 ಜಲವಾಡ ರಾಯಲ್ಸ್‌ ಪಾಲಾದ ಪೂಜಾರ 

Published:
Updated:
Prajavani

ರಾಜ್‌ಕೋಟ್‌: ಚೇತೇಶ್ವರ ಪೂಜಾರ ಸೌರಾಷ್ಟ್ರ ಪ್ರೀಮಿಯರ್‌ ಲೀಗ್‌‌ನಲ್ಲಿ (ಎಸ್‌ಪಿಎಲ್‌) ಜಲವಾಡ ರಾಯಲ್ಸ್‌ ಪರ ಆಡಲಿದ್ದಾರೆ. ಸೌರಾಷ್ಟ್ರ ಕ್ರಿಕೆಟ್‌ ಸಂಸ್ಥೆಯು ಈ ವಿಷಯವನ್ನು ಖಚಿತ ಪಡಿಸಿದೆ. ಇದು ಚೊಚ್ಚಲ ಆವೃತ್ತಿಯ ಎಸ್‌ಪಿಎಲ್‌ ಟೂರ್ನಿಯಾಗಿದೆ.

ಮೇ 4ರಂದು ಆಟಗಾರರ ಕರಡು ಪಟ್ಟಿಯನ್ನು ಸಿದ್ಧಪಡಿಸಲಾಗಿತ್ತು. ಡ್ರಾ ಪ್ರಕ್ರಿಯೆಯ ಮೂಲಕ ಪೂಜಾರ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲು ಎಸ್‌ಪಿಎಲ್ ಆಡಳಿತ ಮಂಡಳಿಯು ನಿರ್ಧರಿಸಿತು. ಬಿಸಿಸಿಐನ ಮಾಜಿ ಕಾರ್ಯರ್ಶಿ ನಿರಂಜನ್‌ ಶಾ, ಸ್ವತಃ ಚೇತೇಶ್ವರ ಪೂಜಾರ ಸೇರಿದಂತೆ ಹಲವು ಪದಾಧಿಕಾರಿಗಳ ಸಮ್ಮುಖದಲ್ಲಿ ಡ್ರಾ ನಡೆಸಲಾಯಿತು.

ತಾರಾ ಆಟಗಾರ ಜಯದೇವ್‌ ಉನದ್ಕತ್‌ ಅವರನ್ನು ಹೊಂದಿದ್ದ ಕಚ್‌ ವಾರಿಯರ್ಸ್ ಕ್ರೀಡಾಸ್ಫೂರ್ತಿ ತೋರಿ ಡ್ರಾ ಪ್ರಕ್ರಿಯೆಯಿಂದ ಹಿಂದೆ ಸರಿಯಿತು ಎಂದು ನಿರಂಜನ್‌ ಶಾ ಮಾಹಿತಿ ನೀಡಿದರು.

Post Comments (+)