ನವದೆಹಲಿ: ಸಿಕ್ಸರ್, ಬೌಂಡರಿಗಳ ಆರ್ಭಟ. ರನ್ಗಳ ಭೋರ್ಗರೆತದ ನಡುವೆ ಪಂಜಾಬ್ ಕಿಂಗ್ಸ್ ತಂಡವು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಐಪಿಎಲ್ ಪಂದ್ಯದಲ್ಲಿ ಜಯಿಸಿ ದಾಖಲೆ ಬರೆಯಿತು.

265 ರನ್ಗಳ ಗುರಿ ಬೆನ್ನಟ್ಟಿದ ಪಂಜಾಬ್ ತಂಡವು ಆರು ವಿಕೆಟ್ಗಳ ವಿಜಯದೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಮುಂದುವರಿಯಿತು. ಟೂರ್ನಿಯಲ್ಲಿ ಅಜೇಯವಾಗಿಯೂ ಉಳಿಯಿತು.

ಶನಿವಾರ ಮಧ್ಯಾಹ್ನ ಆರಂಭವಾದ ಪಂದ್ಯದಲ್ಲಿ ಕೆ.ಎಲ್. ರಾಹುಲ್ (151 ರನ್) ಅವರ ಸೊಗಸಾದ ಶತಕದಿಂದಾಗಿ ಡೆಲ್ಲಿ ತಂಡವು 20 ಓವರ್ಗಳಲ್ಲಿ 2 ವಿಕೆಟ್ಗಳಿಗೆ 264 ರನ್ ಗಳಿಸಿತು. ಪಂಜಾಬ್ ತಂಡದ ಆರಂಭಿಕ ಜೋಡಿ ಪ್ರಭಸಿಮ್ರನ್ ಸಿಂಗ್ (76 ರನ್) ಮತ್ತು ಪ್ರಿಯಾಂಶ್ ಆರ್ಯ
(73 ರನ್) ಅವರು ಮೊದಲ ವಿಕೆಟ್ ಜೊತೆಯಾಟದಲ್ಲಿ ಕೇವಲ 41 ಎಸೆತಗಳಲ್ಲಿ 126 ರನ್ ಸೇರಿಸಿದರು. ಪವರ್ಪ್ಲೇ
ಹಂತದಲ್ಲಿಯೇ 116 ಗಳಿಸಿದ ಇಬ್ಬರೂ ಬ್ಯಾಟರ್ಗಳು ತಂಡದ ಗೆಲುವಿಗೆ ಮುನ್ನುಡಿ ಬರೆದರು.

ಆದರೂ ಡೆಲ್ಲಿ ತಂಡವನ್ನು ಗೆಲುವಿನತ್ತ ಮರಳಿ ತರುವ ಪ್ರಯತ್ನವನ್ನು ಒಂದು ಹಂತದಲ್ಲಿ ಬೌಲರ್ಗಳು ಮಾಡಿದರು. ಬ್ಯಾಟರ್ಗಳಿಂದ ವಿಪರೀತ ದಂಡನೆಗೊಳಗಾದರೂ ಎದೆಗುಂದದ ಸ್ಪಿನ್ನರ್ ಅಕ್ಷರ್ ಪಟೇಲ್ ಅವರು ಪ್ರಿಯಾಂಶ್ ವಿಕೆಟ್ ಗಳಿಸಿ ಜೊತೆಯಾಟ ಮುರಿದರು.

ಆದರೆ ಪಂಜಾಬ್ ತಂಡದ ನಾಯಕ ಶ್ರೇಯಸ್ ಅಯ್ಯರ್ ಅವರನ್ನು ಕಟ್ಟಿಹಾಕಿದ್ದರೆ ಡೆಲ್ಲಿಗೆ ಗೆಲ್ಲುವ ಅವಕಾಶದ ಬಾಗಿಲು ತೆರೆಯುತ್ತಿತ್ತು. ಆದರೆ ಅವರ ಎರಡು ಕ್ಯಾಚ್ಗಳನ್ನು ಕರುಣ್ ನಾಯರ್ (ಬದಲೀ ಫೀಲ್ಡರ್) ಅವರು ಕೈಚೆಲ್ಲಿದರು. ಇದರಿಂದಾಗಿ ಶ್ರೇಯಸ್ ಅಜೇಯ 71 ರನ್ ಗಳಿಸಿದ್ದೂ ಅಲ್ಲದೇ ತಮ್ಮ ತಂಡವನ್ನು ಗೆಲುವಿನ ದಡ ಸೇರಿಸಿದರು.

2024ರಲ್ಲಿ ಪಂಜಾಬ್ ತಂಡವು ಕೋಲ್ಕತ್ತ ನೈಟ್ ರೈಡರ್ಸ್ ಎದುರು 262 ರನ್ಗಳ ಗುರಿಯನ್ನು ಯಶಸ್ವಿ ಯಾಗಿ ಸಾಧಿಸಿದ್ದು ಇದುವರೆಗಿನ ಟಿ20 ಕ್ರಿಕೆಟ್ ಚೇಸಿಂಗ್ ದಾಖಲೆಯಾಗಿತ್ತು. ತನ್ನ ದಾಖಲೆಯನ್ನು ಪಂಜಾಬ್ ತಂಡವು ಇಲ್ಲಿ ಮತ್ತಷ್ಟು ಉತ್ತಮಪಡಿಸಿಕೊಂಡಿತು. ಒಟ್ಟು 13 ಅಂಕ ಗಳಿಸಿರುವ ಶ್ರೇಯಸ್ ಬಳಗವು ಪ್ಲೇ ಆಫ್ ಹೊಸ್ತಿಲಿಗೆ ಬಂದು ನಿಂತಿತು. ತಂಡವು ಲೀಗ್ ಹಂತದಲ್ಲಿ ಇನ್ನೂ ಏಳು ಪಂದ್ಯಗಳನ್ನು ಆಡಬೇಕಿದೆ.

ಈ ಪಂದ್ಯದಲ್ಲಿ ಒಟ್ಟು 49 ಬೌಂಡರಿ ಮತ್ತು 33 ಸಿಕ್ಸರ್ಗಳು ದಾಖಲಾದವು. ಕೇವಲ ಆರು ವಿಕೆಟ್ಗಳು ಮಾತ್ರ ಪತನವಾದವು. ಪಂಜಾಬ್ ಆರಂಭಿಕ ಬ್ಯಾಟರ್ ಪ್ರಭಸಿಮ್ರನ್ ಸಿಂಗ್ ಅವರು ವೇಗಿ ಮುಕೇಶ್ ಕುಮಾರ್ ಅವರ ಒಂದೇ ಓವರ್ನಲ್ಲಿ ಎಲ್ಲ ಆರು ಎಸೆತಗಳನ್ನೂ ಬೌಂಡರಿಗಟ್ಟಿದರು. ಐಪಿಎಲ್ನಲ್ಲಿ ಈ ಸಾಧನೆ ಮಾಡಿದ 3ನೇ ಆಟಗಾರನೆಂಬ ಹೆಗ್ಗಳಿಕೆಗೆ ಪಾತ್ರರಾದರು. ಡೆಲ್ಲಿ ತಂಡದ ಲುಂಗಿ ಎನ್ಗಿಡಿ ಅವರು ಫೀಲ್ಡಿಂಗ್ ಮಾಡುವಾಗ ಕ್ಯಾಚ್ ಪಡೆಯುವ ಭರದಲ್ಲಿ ಬಿದ್ದು ತೆಲೆಗೆ ಪೆಟ್ಟಾಯಿತು. ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಇದರಿಂದಾಗಿ ಡೆಲ್ಲಿ ತಂಡದ ಬೌಲಿಂಗ್ ವಿಭಾಗಕ್ಕೆ ಕೊರತೆ ಕಾಡಿತು.

ರಾಹುಲ್ ಶತಕ: ಕನ್ನಡಿಗ ರಾಹುಲ್ ಅವರು 67 ಎಸೆತಗಳಲ್ಲಿ 152 ರನ್ ಗಳಿಸಿದರು. ಕ್ರಿಕೆಟ್ ಕಾಪಿ ಪುಸ್ತಕದ ಕಲಾತ್ಮಕವಾದ ಹೊಡೆತಗಳನ್ನು ಪ್ರಯೋಗಿಸಿದ ರಾಹುಲ್ ಆಟದ ಸೊಬಗು ಕಣ್ಮನ ಸೆಳೆಯಿತು.

ನಿಖರವಾದ ಟೈಮಿಂಗ್ ಮತ್ತು ಸೊಗಸಾದ ಡ್ರೈವ್ಗಳನ್ನು ಆಡಿದರು. ತಮ್ಮ ಇನಿಂಗ್ಸ್ ಉದ್ದಕ್ಕೂ ರಾಹುಲ್ ಅವರು 200ಕ್ಕಿಂತ ಹೆಚ್ಚಿನ ಸ್ಟ್ರೈಕ್ರೇಟ್ ನಲ್ಲಿ ರನ್ ಗಳಿಸಿದರು.

ಇದರೊಂದಿಗೆ ಅವರು ಅತಿ ದೊಡ್ಡ ವೈಯಕ್ತಿಕ ಸ್ಕೋರ್ ದಾಖಲಿಸಿದ ಐಪಿಎಲ್ನ ಮೂರನೇ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಕ್ರಿಸ್ ಗೇಲ್ (175) ಮತ್ತು ಬ್ರೆಂಡನ್ ಮೆಕ್ಲಮ್ (158) ಅವರು ಕ್ರಮವಾಗಿ ಮೊದಲೆರಡು ಸ್ಥಾನಗಳಲ್ಲಿದ್ದಾರೆ.

ರಾಹುಲ್ ಅವರ ಎರಡು ಕ್ಯಾಚ್ ಗಳನ್ನು ಫೀಲ್ಡರ್ಗಳನ್ನು ಕೈಚೆಲ್ಲಿದರು. ಇದನ್ನು ಸಮರ್ಥವಾಗಿ ಬಳಸಿಕೊಂಡ ಅವರು ನಿತೀಶ್ ರಾಣಾ ಅವರೊಂದಿಗೆ ಎರಡನೇ ವಿಕೆಟ್ ಜೊತೆಯಾಟದಲ್ಲಿ 220 (95ಎಸೆತ) ರನ್ ಸೇರಿಸಿದರು. ರಾಣಾ 11 ಬೌಂಡರಿ ಮತ್ತು 4 ಸಿಕ್ಸರ್ಗಳಿಂದ 91 ರನ್ ಗಳಿಸಿದರು. ಕೇವಲ 44 ಎಸೆತಗಳನ್ನು ಅವರು ಆಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.