ಧರ್ಮಶಾಲಾ (ಪಿಟಿಐ): ಮೊದಲ ಏಳೂ ಪಂದ್ಯಗಳಲ್ಲಿ ಅಜೇಯವಾಗಿ ಉಳಿದಿದ್ದ ಪಂಜಾಬ್ ಕಿಂಗ್ಸ್ ನಂತರ ಸತತ ನಾಲ್ಕು ಹಣಾಹಣಿಗಳಲ್ಲಿ ಮುಗ್ಗರಿಸಿದೆ. ಅಲ್ಲದೇ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ಕುಸಿದಿದೆ. ಈ ಸೋಲುಗಳಲ್ಲಿ ತಂಡದ ಫೀಲ್ಡಿಂಗ್ ಲೋಪಗಳ ಪಾತ್ರವೇ ದೊಡ್ಡದು.

ಆದ್ದರಿಂದ ಗುರುವಾರ ಇಲ್ಲಿ ನಡೆಯ ಲಿರುವ ಐಪಿಎಲ್ ಪಂದ್ಯದಲ್ಲಿ ಪಂಜಾಬ್ ತಂಡವು ಮುಂಬೈ ಇಂಡಿಯನ್ಸ್ ಎದುರು ತನ್ನ ಫೀಲ್ಡಿಂಗ್ ವಿಭಾಗದಲ್ಲಿ ಸುಧಾರಣೆಗಳನ್ನು ಮಾಡಿಕೊಂಡು ಕಣಕ್ಕಿಳಿಯುವ ಒತ್ತಡದಲ್ಲಿದೆ. ಈ ಹಂತದಲ್ಲಿಯೇ ಸೋಲಿನ ಸರಪಳಿ ಕಳಚಿಕೊಳ್ಳದಿದ್ದರೆ ‘ಹಾಲಿ ರನ್ನರ್ಸ್ ಅಪ್’ ಪಂಜಾಬ್ಗೆ ಪ್ಲೇಆಫ್ ಹಾದಿ ಕಡುಕಠಿಣವಾಗಬಹುದು.

ಶ್ರೇಯಸ್ ಅಯ್ಯರ್ ನಾಯಕತ್ವದ ತಂಡದಲ್ಲಿ ಬ್ಯಾಟಿಂಗ್ ಸರದಿ ಉತ್ತಮವಾಗಿದೆ. ಆದರೆ ಬೌಲಿಂಗ್ ವಿಭಾಗದಲ್ಲಿ ಅಸ್ಥಿರತೆ ಇದೆ. ಎಡಗೈ ವೇಗಿ ಅರ್ಷದೀಪ್ ಸಿಂಗ್ ಅವರ ಅತಿ ಹೆಚ್ಚು ರನ್ ಕೊಟ್ಟಿರುವ ಬೌಲರ್ ಆಗಿದ್ದಾರೆ. ಟೂರ್ನಿಯ ಮೊದಲಾರ್ಧ ದಲ್ಲಿ ಅರ್ಷದೀಪ್ ಮತ್ತು ಝೇವಿಯರ್ ಬಾರ್ಟ್ಲೆಟ್ ಅವರು ಉತ್ತಮ ಆರಂಭ ನೀಡಿದ್ದರು. ಆದರೆ ಇತ್ತೀಚಿನ ಪಂದ್ಯಗಳಲ್ಲಿ ವೈಫಲ್ಯ ಅನುಭವಿಸುತ್ತಿದ್ದಾರೆ. ಕಳೆದ ಪಂದ್ಯದಲ್ಲಿ ಮೂರನೇ ಎಡಗೈ ವೇಗಿಯಾಗಿ ಬೆನ್ ದ್ವಾರಶಿಯಸ್ ಆಡಿದ್ದರು. ಅವರೂ ದುಬಾರಿಯಾದರು. ಅರ್ಷದೀಪ್ ಅವರು ಕಳೆದ 11 ಪಂದ್ಯಗಳಲ್ಲಿ ಓವರ್ಗೆ 10 ರನ್ ಸರಾಸರಿಯಲ್ಲಿ ರನ್ ಕೊಟ್ಟಿದ್ದಾರೆ. ಅನುಭವಿ ಸ್ಪಿನ್ನರ್ ಯಜುವೇಂದ್ರ ಚಾಹಲ್ ತಂಡದಲ್ಲಿದ್ಧರೆ.

ಬ್ಯಾಟಿಂಗ್ ವಿಭಾಗದಲ್ಲಿ ಪ್ರಭಸಿಮ್ರನ್ ಸಿಂಗ್, ಪ್ರಿಯಾಂಶ್ ಆರ್ಯ, ಕೂಪರ್ ಕೊನೊಲಿ, ಶ್ರೇಯಸ್ ಮತ್ತು ಮಾರ್ಕಸ್ ಸ್ಟೊಯಿನಿಸ್ ಅವರು ತಮ್ಮ ಬೀಸಾಟವನ್ನು ಮುಂದುವರಿಸಿದರೆ ದೊಡ್ಡ ಮೊತ್ತ ಗಳಿಸಲು ತಂಡಕ್ಕೆ ಸಾಧ್ಯವಾಗಲಿದೆ.

ಏಕೆಂದರೆ; ಈಗಾಗಲೇ ಪ್ಲೇ ಆಫ್ ಹಾದಿಯಿಂದ ಹೊರಬಿದ್ದಿರುವ ಮುಂಬೈ ಇಂಡಿಯನ್ಸ್ ತಂಡಕ್ಕೆ ಕಳೆದು ಕೊಳ್ಳುವಂತಹದ್ದು ಏನೂಇಲ್ಲ. ಕಳೆದೆರಡೂ ಪಂದ್ಯಗಳಲ್ಲಿ ಹಾರ್ದಿಕ್ ಪಾಂಡ್ಯ ಅವರು ತಮ್ಮ ಗಾಯದ ಸಮಸ್ಯೆಯಿಂದಾಗಿ ಆಡಿರಲಿಲ್ಲ. ಇಲ್ಲಿಯೂ ಕಣಕ್ಕಿಳಿಯುವುದು ಅನುಮಾನ. ರಿಯಾನ್ ರಿಕೆಲ್ಟನ್ ಮತ್ತು ರೋಹಿತ್ ಶರ್ಮಾ ಅವರು ಉತ್ತಮ ಆರಂಭ ನೀಡಬಲ್ಲರು. ಆದರೆ ಸೂರ್ಯಕುಮಾರ್ ಯಾದವ್ ಅವರು ಲಯದಲ್ಲಿ ಇಲ್ಲದಿರುವುದು ತಂಡಕ್ಕೆ ಚಿಂತೆಯ ವಿಷಯ. ತಿಲಕ್ ವರ್ಮಾ, ವಿಲ್ ಜ್ಯಾಕ್ಸ್ ಮತ್ತು ನಮನ್ ಧೀರ್ ಅವರು ಭರವಸೆಯ ಆಟಗಾರರು. ಮಧ್ಯಮ ಕ್ರಮಾಂಕಕ್ಕೆ ಶಕ್ತಿ ತುಂಬುವ ಸಮರ್ಥರೂ ಹೌದು.

ಬೌಲಿಂಗ್ ವಿಭಾಗದಲ್ಲಿ ಜಸ್ಪ್ರೀತ್ ಬೂಮ್ರಾ, ಅಲ್ಲಾ ಘಜನ್ಫರ್ ಮತ್ತು ಕಾರ್ಬಿನ್ ಬಾಷ್ ಮಾತ್ರ ಪಂದ್ಯ ಜಯಿಸಿಕೊಡಬಲ್ಲ ಸಮರ್ಥರು. ಆದರೆ, ಅಂಗದ್ ರಾಜ್ ಬಾವಾ, ವಿಲ್ ಜ್ಯಾಕ್ಸ್ ಅವರೂ ಪರಿಣಾಮಕಾರಿ ದಾಳಿ ನಡೆಸಿದರೆ ಪಂಜಾಬ್ ತಂಡಕ್ಕೆ ಕಠಿಣ ಸವಾಲು ಎದುರಾಗುವುದು ಖಚಿತ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260514-51-471784967

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.