ಶುಕ್ರವಾರ, ಡಿಸೆಂಬರ್ 6, 2019
19 °C

ರಬಾಡ ’ಸೂಪರ್‌’ ಓವರ್‌: ಗೆದ್ದ ಡೆಲ್ಲಿ

Published:
Updated:

ನವದೆಹಲಿ: ರೋಚಕತೆ ರಸದೌತಣ ಉಣಬಡಿಸಿದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡವು ಸೂಪರ್ ಓವರ್‌ನಲ್ಲಿ ಜಯವನ್ನು ಒಲಿಸಿಕೊಂಡಿತು. ಧಕ್ಷಿಣ ಆಫ್ರಿಕಾದ ವೇಗಿ ಕಗಿಸೊ ರಬಾಡ ಅವರು ಡೆಲ್ಲಿ ತಂಡದ ಪಾಲಿಗೆ ಸೂಪರ್ ಹೀರೊ ಆದರು.

ಶನಿವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಕೋಲ್ಕತ್ತ ನೈಟ್ ರೈಡರ್ಸ್‌ ತಂಡವು ಆ್ಯಂಡ್ರೆ ರಸೆಲ್ (61; 28ಎ, 4ಬೌಂಡರಿ, 6 ಸಿಕ್ಸರ್‌) ಮತ್ತು ದಿನೇಶ್ ಕಾರ್ತಿಕ್ (50; 36ಎ, 5ಬೌಂ, 2ಸಿ) ಅವರ ಅರ್ಧಶತಕಗಳ ಬಲದಿಂದ   20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 185 ರನ್‌ಗಳನ್ನು ಗಳಿಸಿತು. ಗುರಿ ಬೆನ್ನಟ್ಟಿದ ಡೆಲ್ಲಿ ತಂಡವು ಪೃಥ್ವಿ ಶಾ (99 ರನ್) ಅವರ ಅಬ್ಬರದ ಬ್ಯಾಟಿಂಗ್ ಬಲದಿಂದ  20 ಓವರ್‌ಗಳಲ್ಲಿ 6 ವಿಕೆಟ್‌ಗೆ 185 ರನ್‌ ಗಳಿಸಿ ಪಂದ್ಯವನ್ನು ಟೈ ಮಾಡಿಕೊಂಡಿತು.

ಸೂಪರ್ ಓವರ್‌ನಲ್ಲಿ ಫಲಿತಾಂಶ ಪಡೆಯಲು ನಿರ್ಧರಿಸಲಾಯಿತು. ಢೆಲ್ಲಿ ತಂಡವು ಒಂದು ಓವರ್‌ನಲ್ಲಿ 10 ರನ್ ಗಳಿಸಿತು. ಕೆಕೆಆರ್‌ನಲ್ಲಿರುವ ಕನ್ನಡಿಗ ಪ್ರಸಿದ್ಧ ಕೃಷ್ಣ ಅವರು ಈ ಓವರ್‌ ಬೌಲ್ ಮಾಡಿದರು. ಒಂದು ವಿಕೆಟ್ ಕಬಳಿಸಿದರು. ಗುರಿ ಬೆನ್ನಟ್ಟಿದ ಕೆಕೆಆರ್ ರಸೆಲ್ ಮತ್ತು ದಿನೇಶ್ ಅವರನ್ನು ಕಣಕ್ಕಿಳಿಸಿತು. ಕಗಿಸೊ ರಬಾಡ ಹಾಕಿದ ಓವರ್‌ನಲ್ಲಿ ಮೊದಲ ಎಸೆತವನ್ನೇ ರಸೆಲ್‌ ಬೌಂಡರಿಗೆ ಅಟ್ಟಿದರು. ಎರಡನೇ ಎಸೆತದಲ್ಲಿ ರನ್ ಗಳಿಸಲು ಸಾಧ್ಯವಾಗಲಿಲ್ಲ. ಮೂರನೇ ಎಸೆತದಲ್ಲಿ ರಬಾಡ ಪ್ರಯೋಗಿಸಿದ ಯಾರ್ಕರ್‌ಗೆ ರಸೆಲ್ ಕ್ಲೀನ್‌ಬೌಲ್ಡ್‌ ಆದರು. ನಂತರದ ಮೂರು ಎಸೆತಗಳಲ್ಲಿ ಕೇವಲ ಮೂರು ರನ್ ನೀಡಿದ ರಬಾಡ ಸಂಭ್ರಮಿಸಿದರು.

ಸಂಕ್ಷಿಪ್ತ ಸ್ಕೋರು:

ಕೋಲ್ಕತ್ತ ನೈಟ್ ರೈಡರ್ಸ್: 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 185 (ದಿನೇಶ್ ಕಾರ್ತಿಕ್ 50, ಆ್ಯಂಡ್ರೆ ರಸೆಲ್ 62,  ಹರ್ಷಲ್ ಪಟೇಲ್ 36ಕ್ಕೆ2)

ಡೆಲ್ಲಿ ಕ್ಯಾಪಿಟಲ್ಸ್‌: 20 ಓವರ್‌ಗಳಲ್ಲಿ  6 ವಿಕೆಟ್‌ಗಳಿಗೆ 185 (ಪೃಥ್ವಿ ಶಾ 99,   ಶ್ರೇಯಸ್ ಅಯ್ಯರ್ 43, ಕುಲದೀಪ್ ಯಾದವ್ 41ಕ್ಕೆ2,  ಆ್ಯಂಡ್ರೆ ರಸೆಲ್ 28ಕ್ಕೆ1)

ಸೂಪರ್ ಓವರ್

ಡೆಲ್ಲಿ ಕ್ಯಾಪಿಟಲ್ಸ್‌: ಒಂದು ಓವರ್‌ನಲ್ಲಿ ಒಂದು ವಿಕೆಟ್‌ಗೆ 10 (ರಿಷಭ್ ಪಂತ್ ಔಟಾಗದೆ 6, ಶ್ರೇಯಸ್ ಅಯ್ಯರ್ 4, ಪ್ರಸಿದ್ಧ ಕೃಷ್ಣ 10ಕ್ಕೆ1),

ಕೆಕೆಆರ್: ಒಂದು ಓವರ್‌ನಲ್ಲಿ ಒಂದು ವಿಕೆಟ್‌ಗೆ 7 (ಆ್ಯಂಡ್ರೆ ರಸೆಲ್ 4, ದಿನೇಶ್ ಕಾರ್ತಿಕ್ ಔಟಾಗದೆ 2, ರಾಬಿನ್ ಉತ್ತಪ್ಪ ಔಟಾಗದೆ 1, ಕಗಿಸೊ ರಬಾಡ 7ಕ್ಕೆ1)  ಫಲಿತಾಂಶ: ಪಂದ್ಯ ಟೈ (ಡೆಲ್ಲಿ ಕ್ಯಾಪಿಟಲ್ಸ್‌ಗೆ ಸೂಪರ್‌ ಓವರ್‌ನಲ್ಲಿ ಜಯ)

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು