ವಾಂಖೆಡೆ: ಇಲ್ಲಿ ನಡೆದ ಮುಂಬೈ ಇಂಡಿಯನ್ಸ್ ಹಾಗೂ ಲಖನೌ ಸೂಪರ್ ಜೈಂಟ್ಸ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡದ 33 ವರ್ಷದ ಸ್ಪಿನ್ನರ್ ರಘು ಶರ್ಮಾ, ಐಪಿಎಲ್ನಲ್ಲಿ ತಮ್ಮ ಚೊಚ್ಚಲ ವಿಕೆಟ್ ಪಡೆದುಕೊಂಡಿದ್ದಾರೆ. ಮಾತ್ರವಲ್ಲದೆ, ವಿಕೆಟ್ ಪಡೆದು ಸಂಭ್ರಮಿಸಿದ ರೀತಿಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಪಂಜಾಬ್ ಮೂಲದವರಾದ ರಘು ಶರ್ಮಾ ಬಿ.ಟೆಕ್ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ದೇಶೀಯ ಕ್ರಿಕೆಟ್ನಲ್ಲಿ ಪಂಜಾಬ್, ಪುದುಚೆರಿ ಹಾಗೂ ಉತ್ತರಾಖಂಡ ತಂಡಗಳನ್ನು ಪ್ರತಿನಿಧಿಸಿದ್ದರು.

2024-25ನೇ ಸಾಲಿನ ರಣಜಿ ಟ್ರೋಫಿಯಲ್ಲಿ ಹಿಮಾಚಲ ಪ್ರದೇಶ ವಿರುದ್ಧ 7 ವಿಕೆಟ್ ಪಡೆದು ಛಾಪು ಮೂಡಿಸಿದ್ದರು. ನಂತರ 2025ರ ಮೆಗಾ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯು ಇವರನ್ನು ಮೂಲಬೆಲೆ ₹30 ಲಕ್ಷಕ್ಕೆ ಖರೀದಿಸಿತ್ತು.

ಮುಂಬೈ ತಂಡಕ್ಕೆ ಸೇರಿದ ರಘು ಶರ್ಮಾ ನೆಟ್ ಬೌಲರ್ ಆಗಿ ಮಾತ್ರ ಕಾಣಿಸಿಕೊಂಡರು. ತಂಡಕ್ಕೆ ಸೇರಿದ ಮೊದಲ ಆವೃತಿಯಲ್ಲಿ ಆಡುವ 11ರ ಬಳಗದಲ್ಲಿ ಅವಕಾಶ ಸಿಕ್ಕಿರಲಿಲ್ಲ. ಬಳಿಕ 2026ರ ಐಪಿಎಲ್ ಆವೃತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಐಪಿಎಲ್ಗೆ ಪದಾರ್ಪಣೆ ಮಾಡಿ, ತಮ್ಮ ಚೊಚ್ಚಲ ಪಂದ್ಯವಾಡಿದರು. ಮೊದಲ ಪಂದ್ಯದಲ್ಲಿ ಸಾಧಾರಣ ಪ್ರದರ್ಶನ ನೀಡಿದ್ದ ಶರ್ಮಾ 2 ನೇ ಪಂದ್ಯದಲ್ಲಿ ಚೊಚ್ಚಲ ವಿಕೆಟ್ ಪಡೆದುಕೊಂಡಿದ್ದಾರೆ.

ಮುಂಬೈ ಇಂಡಿಯನ್ಸ್ ತಂಡದ ಕೋಚ್ ಮಹೇಲಾ ಜಯವರ್ಧನೆ ವಿಡಿಯೊ ಒಂದರಲ್ಲಿ ಶರ್ಮಾ ಅವರ ಬೌಲಿಂಗ್ ಕುರಿತು ಮಾತನಾಡುತ್ತ, ‘ನಿಮಗೆ ನೆನಪಿದೆಯಾ, 2025ರಲ್ಲಿ ಶರ್ಮಾ ನೆಟ್ ಬೌಲರ್ ಆಗಿ ತಂಡವನ್ನು ಸೇರಿಕೊಂಡರು. ಅವರು ಎಲ್ಲಾ ಕೆಲಸವನ್ನು ನಿಷ್ಠೆಯಿಂದ ಮಾಡುತ್ತಾರೆ. ಇಂದಿಗೂ ಕಷ್ಟಪಟ್ಟು ಅಭ್ಯಾಸ ಮಾಡುತ್ತಾರೆ. ಅವರ ಬೌಲಿಂಗ್ ಅನ್ನು ಇನ್ನಷ್ಟು ಪರಿಣಾಮಕಾರಿಯಾಗಿಸಿಕೊಳ್ಳಲು ಶ್ರೀಲಂಕಾಕ್ಕೆ ಬಂದಿದ್ದರು. ಕೊಲಂಬೊದ ಬಿರುಬಿಸಿಲಿನಲ್ಲಿ ಕಷ್ಟಪಟ್ಟು ಅಭ್ಯಾಸ ಮಾಡಿದ್ದರು’ ಎಂದು ಹೇಳಿಕೊಂಡಿದ್ದಾರೆ.

ಚೊಚ್ಚಲ ವಿಕೆಟ್ ಸಂಭಮ

ವಿಕೆಟ್ ಪಡೆದ ಸಂದರ್ಭದಲ್ಲಿ ಜೇಬಿನಲ್ಲಿದ್ದ ಪತ್ರವನ್ನು ತೆಗೆದು ಅದನ್ನು ಸ್ಟ್ಯಾಂಡ್ ಕಡೆ ತೋರಿಸಿ ಸಂಭ್ರಮಿಸಿದರು. ಪತ್ರದಲ್ಲಿ, 'ರಾಧೆ ರಾಧೆ. ಗುರುದೇವರ ಆಶೀರ್ವಾದದೊಂದಿಗೆ 15 ವರ್ಷಗಳ ನೋವು ಇಂದಿಗೆ ಕೊನೆಗೊಂಡಿತು. ಈ ಅವಕಾಶವನ್ನು ನನಗೆ ನೀಡಿದ್ದಕ್ಕಾಗಿ ಮುಂಬೈ ಇಂಡಿಯನ್ಸ್ಗೆ ಧನ್ಯವಾದಗಳು. ಎಂದೆಂದಿಗೂ ನಿಮಗೆ ಕೃತಜ್ಞರಾಗಿರುತ್ತೇನೆ. ಜೈ ಶ್ರೀ ರಾಮ್' ಎಂದು ಬರೆದಿತ್ತು. ಇವರ ಕ್ರಿಕೆಟ್ ಪಯಣದಲ್ಲಿ 70ಕ್ಕೂ ಅಧಿಕ ವಿಕೆಟ್ ಪಡೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.