ಮುಂಬೈ: ಇಲ್ಲಿನ ವಾಂಖೆಡೆ ಕ್ರಿಕೆಟ್ ಮೈದಾನದಲ್ಲಿ ಮುಕ್ತಾಯವಾದ ಇಂಡಿಯನ್ ಪ್ರೀಮಿಯರ್ ಲೀಗ್ನ 47ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವು ಲಖನೌ ಸೂಪರ್ಜೈಂಟ್ಸ್ ತಂಡವನ್ನು ಸೋಲಿಸುವ ಮೂಲಕ ಗೆಲುವಿನ ಹಳಿಗೆ ಮರಳಿತು. ಈ ಪಂದ್ಯದಲ್ಲಿ ಮುಂಬೈ ಬೌಲರ್ ರಘು ಶರ್ಮಾ ಅವರ ಸಂಭ್ರಮದ ವಿಡಿಯೊ ಒಂದು ವ್ಯಾಪಕವಾಗಿ ಹರಿದಾಡುತ್ತಿದೆ.

ಸೋಮವಾರ ನಡೆದ ಪಂದ್ಯದಲ್ಲಿ ತಮ್ಮ ಚೊಚ್ಚಲ ಐಪಿಎಲ್ ವಿಕೆಟ್ ಪಡೆದ ಮುಂಬೈ ಇಂಡಿಯನ್ಸ್ ಸ್ಪಿನ್ನರ್ ರಘು ಶರ್ಮಾ ಪತ್ರವೊಂದನ್ನು ತೆಗೆದು ವಿಭಿನ್ನವಾಗಿ ಸಂಭ್ರಮಾಚರಣೆ ಮಾಡಿದ್ದಾರೆ.

ಲಖನೌ ಸೂಪರ್ಜೈಂಟ್ಸ್ ವಿರುದ್ಧದ ಪಂದ್ಯದ ಮೂಲಕ ಐಪಿಎಲ್ಗೆ ಪದಾರ್ಪಣೆ ಮಾಡಿದ ಅವರು, ಎಲ್ಎಸ್ಜಿ ಇನಿಂಗ್ಸ್ನ 13 ನೇ ಓವರ್ನಲ್ಲಿ ಅಕ್ಷತ್ ರಘುವಂಶಿ ಅವರನ್ನು ಕ್ಯಾಚ್ ಅಂಡ್ ಬೌಲ್ಡ್ ಮಾಡುವ ಮೂಲಕ ವಿಕೆಟ್ ಪಡೆದುಕೊಂಡರು. ಈ ಸಂದರ್ಭದಲ್ಲಿ ಅವರು ತಮ್ಮ ಜೇಬಿನಲ್ಲಿದ್ದ ಒಂದು ಪತ್ರವನ್ನು ತೆಗೆದು ಅದನ್ನು ಸ್ಟ್ಯಾಂಡ್ ಕಡೆ ತೋರಿಸಿ ಸಂಭ್ರಮಿಸಿದರು.

ಅವರು ತೆಗೆದು ತೋರಿಸಿದ ಪತ್ರದಲ್ಲಿ, ‘ರಾಧೆ ರಾಧೆ. ಗುರುದೇವರ ಆಶೀರ್ವಾದದೊಂದಿಗೆ 15 ವರ್ಷಗಳ ನೋವು ಇಂದಿಗೆ ಕೊನೆಗೊಂಡಿತು. ಈ ಅವಕಾಶವನ್ನು ನನಗೆ ನೀಡಿದ್ದಕ್ಕಾಗಿ ಮುಂಬೈ ಇಂಡಿಯನ್ಸ್ಗೆ ಧನ್ಯವಾದಗಳು. ಎಂದೆಂದಿಗೂ ನಿಮಗೆ ಕೃತಜ್ಞರಾಗಿರುತ್ತೇನೆ. ಜೈ ಶ್ರೀ ರಾಮ್’ ಎಂಬ ಪತ್ರವನ್ನು ಪ್ರದರ್ಶಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.