ಐಪಿಎಲ್‌ ನಿಯಮ ಉಲ್ಲಂಘನೆ: ರಹಾನೆಗೆ ₹12 ಲಕ್ಷ ದಂಡ

ಗುರುವಾರ , ಏಪ್ರಿಲ್ 25, 2019
21 °C

ಐಪಿಎಲ್‌ ನಿಯಮ ಉಲ್ಲಂಘನೆ: ರಹಾನೆಗೆ ₹12 ಲಕ್ಷ ದಂಡ

Published:
Updated:
Prajavani

ಚೆನ್ನೈ: ರಾಜಸ್ಥಾನ್‌ ರಾಯಲ್ಸ್‌ ತಂಡದ ಅಜಿಂಕ್ಯ ರಹಾನೆಗೆ ಸೋಮವಾರ ₹ 12 ಲಕ್ಷ ದಂಡ ವಿಧಿಸಲಾಗಿದೆ.

ಭಾನುವಾರ ನಡೆದಿದ್ದ ಚೆನ್ನೈ ಸೂಪರ್‌ ಕಿಂಗ್ಸ್‌ ಎದುರಿನ ಪಂದ್ಯದಲ್ಲಿ ರಾಯಲ್ಸ್‌ ತಂಡ ನಿಗದಿತ ಅವಧಿಯೊಳಗೆ ತನ್ನ ಪಾಲಿನ ಓವರ್‌ಗಳನ್ನು ಮುಗಿಸಿರಲಿಲ್ಲ. ಹೀಗಾಗಿ ನಾಯಕ ರಹಾನೆಗೆ ದಂಡ ಹಾಕಲಾಗಿದೆ.

‘ರಾಜಸ್ಥಾನ್ ತಂಡ ಈ ಬಾರಿಯ ಲೀಗ್‌ನಲ್ಲಿ ಮೊದಲ ಬಾರಿ ಐಪಿಎಲ್‌ ನಿಮಯ ಉಲ್ಲಂಘಿಸಿದೆ. ಹೀಗಾಗಿ ನಾಯಕನಿಗೆ ದಂಡ ವಿಧಿಸಿದ್ದೇವೆ’ ಎಂದು ಐಪಿಎಲ್‌ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ರಾಜಸ್ಥಾನ್‌ ತಂಡ ಭಾನುವಾರದ ಹೋರಾಟದಲ್ಲಿ ಎಂಟು ರನ್‌ಗಳಿಂದ ಆತಿಥೇಯ ಚೆನ್ನೈ ಸೂಪರ್‌ ಕಿಂಗ್ಸ್‌ ಎದುರು ಮಣಿದಿತ್ತು.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 1

  Frustrated
 • 3

  Angry

Comments:

0 comments

Write the first review for this !