ಕ್ರೀಡಾಂಗಣದ ಹೊರಗೆ ಕಾದ ರಹಾನೆ

ಬುಧವಾರ, ಏಪ್ರಿಲ್ 24, 2019
27 °C

ಕ್ರೀಡಾಂಗಣದ ಹೊರಗೆ ಕಾದ ರಹಾನೆ

Published:
Updated:

ಜೈಪುರ: ರಾಜಸ್ಥಾನ ರಾಯಲ್ಸ್‌ ತಂಡದ ನಾಯಕ ಅಜಿಂಕ್ಯ ರಹಾನೆ, ಸವಾಯಿ ಮಾನ್‌ ಸಿಂಗ್‌ ಕ್ರೀಡಾಂಗಣದ ಹೊರಗೆ ಕಾದು ನಿಂತ ಪ್ರಸಂಗ ಶನಿವಾರ ನಡೆದಿದೆ.

ರಹಾನೆ ಅವರು ಅಭ್ಯಾಸ ನಡೆಸಲು ಸಹ ಆಟಗಾರರೊಂದಿಗೆ ಮೈದಾನಕ್ಕೆ ಬಂದಾಗ ಮುಖ್ಯದ್ವಾರಕ್ಕೆ ಬೀಗ ಹಾಕಲಾಗಿತ್ತು. ಹೀಗಾಗಿ ಸುಮಾರು 20 ನಿಮಿಷ ಅವರು ಕ್ರೀಡಾಂಗಣದ ಹೊರಗೆ ಕಾಯುತ್ತಿದ್ದರು. ರಾಯಲ್ಸ್‌ ಫ್ರಾಂಚೈಸ್‌ನ ಅಧಿಕಾರಿಗಳು ಮೈದಾನದ ಸಿಬ್ಬಂದಿ ಜೊತೆ ಮಾತುಕತೆ ನಡೆಸಿದ ನಂತರ ಆಟಗಾರರನ್ನು ಒಳಗೆ ಬಿಡಲಾಯಿತು.

ಸವಾಯಿ ಮಾನ್‌ಸಿಂಗ್‌ ಕ್ರೀಡಾಂಗಣವು ರಾಜಸ್ಥಾನ ರಾಜ್ಯ ಕ್ರೀಡಾ ಕೌನ್ಸಿಲ್‌ನ (ಆರ್‌ಎಸ್‌ಎಸ್‌ಸಿ) ಅಧೀನಕ್ಕೊಳಪಟ್ಟಿದೆ. ಇಲ್ಲಿ ಪಂದ್ಯಗಳನ್ನು ನಡೆಸಬೇಕಾದರೆ ರಾಜಸ್ಥಾನ ಕ್ರಿಕೆಟ್‌ ಸಂಸ್ಥೆಯು (ಆರ್‌ಸಿಎ) ಕ್ರೀಡಾ ಕೌನ್ಸಿಲ್‌ಗೆ ಶುಲ್ಕ ಪಾವತಿಸಬೇಕು. ಆರ್‌ಸಿಎಯು ಬಾಕಿ ಉಳಿಸಿಕೊಂಡಿದ್ದ ಮೊತ್ತವನ್ನು ಕಟ್ಟಲು ಮೀನಮೇಷ ಎಣಿಸುತ್ತಿದ್ದ ಕಾರಣ ಆರ್‌ಎಸ್‌ಎಸ್‌ಸಿ ಸಿಬ್ಬಂದಿ ಶನಿವಾರ ಮುಖ್ಯದ್ವಾರಕ್ಕೆ ಬೀಗ ಹಾಕಿದ್ದರು.

ಬರಹ ಇಷ್ಟವಾಯಿತೆ?

 • 2

  Happy
 • 3

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !