ರೋಹಿತ್ ಅನುಕರಣೆ ಸಾಧ್ಯವಿಲ್ಲ: ರಾಹುಲ್

ಸೋಮವಾರ, ಜೂಲೈ 22, 2019
27 °C

ರೋಹಿತ್ ಅನುಕರಣೆ ಸಾಧ್ಯವಿಲ್ಲ: ರಾಹುಲ್

Published:
Updated:
Prajavani

ಬರ್ಮಿಂಗಂ: ‘ರೋಹಿತ್ ಶರ್ಮಾ ವಿಶಿಷ್ಟ ಶೈಲಿಯ ಬ್ಯಾಟ್ಸ್‌ಮನ್ ಆಗಿದ್ದು ಅವರನ್ನು ಅನುಕರಿಸಲು ಸಾಧ್ಯವಿಲ್ಲ. ಹಾಗೇನಾದರೂ ಮಾಡುತ್ತೇನೆ ಎಂದರೆ ಅದು ಮೂರ್ಖತನವಾದೀತು..’

ರೋಹಿತ್ ಜೊತೆ ಭಾರತದ ಇನಿಂಗ್ಸ್ ಆರಂಭಿಸಿದ ಕೆ.ಎಲ್‌.ರಾಹುಲ್ ಆಡಿದ ಮಾತು ಇದು.

ಶಿಖರ್ ಧವನ್ ಗಾಯಗೊಂಡು ಮರಳಿದ ನಂತರ ರಾಹುಲ್ ಅವರು ಆರಂಭ ಬ್ಯಾಟ್ಸ್‌ಮನ್ ಪಾತ್ರ ನಿರ್ವಹಿಸುತ್ತಿದ್ದಾರೆ. ಬಾಂಗ್ಲಾದೇಶ ಎದುರು ಮಂಗಳವಾರ ನಡೆದ ಪಂದ್ಯದಲ್ಲಿ ರೋಹಿತ್ ಮತ್ತು ರಾಹುಲ್ ಮೊದಲ ವಿಕೆಟ್‌ಗೆ 180 ರನ್ ಸೇರಿಸಿದ್ದರು. ಉಪನಾಯಕ ರೋಹಿತ್ ಶತಕ ಸಿಡಿಸಿ ಒಂದೇ ವಿಶ್ವಕಪ್‌ನಲ್ಲಿ ನಾಲ್ಕು ಬಾರಿ ಮೂರಂಕಿ ಮೊತ್ತ ದಾಟಿದ ಮೊದಲ ಬ್ಯಾಟ್ಸ್‌ಮನ್‌ ಎಂಬ ದಾಖಲೆ ಮಾಡಿದ್ದರು.  

‘ವೈಯಕ್ತಿಕವಾಗಿ ನನ್ನ ಫಾರ್ಮ್‌ ಬಗ್ಗೆ ಖುಷಿ ಇದೆ. ಆದರೂ ಪೂರ್ಣ ತೃಪ್ತಿ ಇಲ್ಲ. ಮುಂದಿನ ಪಂದ್ಯದಲ್ಲಿ ನನ್ನ ಬ್ಯಾಟಿಂಗ್ ಇನ್ನಷ್ಟು ಉತ್ತಮಪಡಿಸಲು ಪ್ರಯತ್ನಿಸಲಿದ್ದೇನೆ.ಆ ಮೂಲಕ ತಂಡಕ್ಕೆ ನೆರವಾಗಲು ಬಯಸಿದ್ದೇನೆ’ ಎಂದು ರಾಹುಲ್ ಹೇಳಿದರು.

ಬರಹ ಇಷ್ಟವಾಯಿತೆ?

 • 3

  Happy
 • 1

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !