ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಕ್ಸಿಂಗ್ ಡೇ ಟೆಸ್ಟ್: ಭಾರತ ತಂಡ ಐವರು ಬೌಲರ್‌ಗಳೊಂದಿಗೆ ಕಣಕ್ಕೆ

Last Updated 24 ಡಿಸೆಂಬರ್ 2021, 20:28 IST
ಅಕ್ಷರ ಗಾತ್ರ

ಸೆಂಚುರಿಯನ್:ದಕ್ಷಿಣ ಆಫ್ರಿಕಾ ಎದುರಿನ ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ಭಾರತ ತಂಡವು ಐವರು ಬೌಲರ್‌ಗಳೊಂದಿಗೆ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ.

ಆದರೆ ಬ್ಯಾಟಿಂಗ್‌ ವಿಭಾಗದಲ್ಲಿ ಅಜಿಂಕ್ಯ ರಹಾನೆ ಮತ್ತು ಶ್ರೇಯಸ್ ಅಯ್ಯರ್ ಅವರಲ್ಲಿ ಒಬ್ಬರನ್ನು ಆಯ್ಕೆ ಮಾಡುವ ಒತ್ತಡದಲ್ಲಿ ತಂಡವಿದೆ.

ಶುಕ್ರವಾರ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ತಂಡದ ಉಪನಾಯಕ ಕೆ.ಎಲ್. ರಾಹುಲ್ ಈ ಬಗ್ಗೆ ಸೂಚ್ಯವಾಗಿ ಹೇಳಿದರು.

‘ಟೆಸ್ಟ್ ಪಂದ್ಯಗಳಲ್ಲಿ ಪ್ರತಿಯೊಂದು ತಂಡವು 20 ವಿಕೆಟ್‌ಗಳನ್ನು ಪಡೆಯಲು ಪ್ರಯತ್ನಿಸುತ್ತವೆ. ನಾವು ಕೂಡ ಬಹಳಷ್ಟು ಟೆಸ್ಟ್‌ಗಳಲ್ಲಿ ಜಯಿಸಲು ಇದೇ ತಂತ್ರಗಾರಿಕೆ ಅನುಸರಿಸಿದ್ದು ಫಲ ನೀಡಿದೆ’ ಎಂದು ರಾಹುಲ್ ಹೇಳಿದರು.

ಮಧ್ಯಮವೇಗಿ ಶಾರ್ದೂಲ್ ಠಾಕೂರ್ ಬ್ಯಾಟಿಂಗ್ ಕೂಡ ಚೆನ್ನಾಗಿ ಮಾಡಬಲ್ಲರು. ಆದ್ದರಿಂದ ಐದನೇ ಬೌಲರ್‌ ಆಗಿ ಅವರು ಅವಕಾಶ ಪಡೆಯುವ ಸಾಧ್ಯತೆ ಇದೆ.

‘ಅಜಿಂಕ್ಯ, ಹನುಮವಿಹಾರಿ ಮತ್ತು ಶ್ರೇಯಸ್ ಅಯ್ಯರ್ ಅವರಲ್ಲಿ ಒಬ್ಬರನ್ನು ಆಯ್ಕೆ ಮಾಡಿಕೊಳ್ಳುವುದು ಸ್ವಲ್ಪ ಕ್ಲಿಷ್ಟಕರ. ಅಜಿಂಕ್ಯ ಅನುಭವಿ ಆಟಗಾರ. ಶ್ರೇಯಸ್ ತಮ್ಮ ಪದಾರ್ಪಣೆಯಲ್ಲಿಯೇ ಶತಕ ಬಾರಿಸಿದ್ದಾರೆ. ಹನುಮವಿಹಾರಿ ಕೂಡ ತಂಡದ ಗೆಲುವುಗಳಲ್ಲಿ ಹಲವು ಬಾರಿ ಕಾಣಿಕೆ ನೀಡಿದ್ದಾರೆ. ಈ ಕುರಿತು ತಂಡದ ವ್ಯವಸ್ಥಾಪಕರು ನಿರ್ಧಾರ ಕೈಗೊಳ್ಳುವರು’ ಎಂದು ರಾಹುಲ್ ಹೇಳಿದರು.

‘ದಕ್ಷಿಣ ಆಫ್ರಿಕಾದ ಪಿಚ್‌ಗಳಲ್ಲಿ ಚೆಂಡು ಬೌನ್ಸ್‌ ಆಗುವ ರೀತಿ ತುಸು ವಿಭಿನ್ನವಾಗಿದೆ. ಸರಣಿಗೂ ಕೆಲವು ದಿನಗಳ ಮುಂಚೆಯೇ ಇಲ್ಲಿ ಬಂದು ಪಿಚ್‌ ಮತ್ತು ವಾತಾವರಣಕ್ಕೆ ಹೊಂದಾಣಿಕೆಯಾಗಲು ಪ್ರಯತ್ನಿಸುತ್ತಿದ್ದೇವೆ‘ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT