ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2020| ಒಂದೇ ಪಂದ್ಯ, ಕನ್ನಡಿಗ ಕೆ.ಎಲ್‌ ರಾಹುಲ್‌ ಬರೆದಿದ್ದು ಹಲವು ದಾಖಲೆ

Last Updated 25 ಸೆಪ್ಟೆಂಬರ್ 2020, 2:51 IST
ಅಕ್ಷರ ಗಾತ್ರ

ದುಬೈ: ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಅಮೋಘ ಗೆಲವು ಸಾಧಿಸಿದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಾಯಕ ಕೆ. ಎಲ್. ರಾಹುಲ್ ಗುರುವಾರ ಹಲವು ದಾಖಲೆಗಳನ್ನು ಬರೆದಿದ್ದಾರೆ.

ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಕೆ.ಎಲ್‌ ರಾಹುಲ್‌ 132(69) ಗಳಿಸಿದರು. ಇದು ಐಪಿಎಲ್ ಇತಿಹಾಸದಲ್ಲಿ ಭಾರತೀಯ ಬ್ಯಾಟ್ಸ್‌ಮನ್‌ವೊಬ್ಬರು ಗಳಿಸಿದ ಗರಿಷ್ಠ ಸ್ಕೋರ್. ಅಷ್ಟೇ ಅಲ್ಲದೇ, 2020ರ ಋತುಮಾನದ ಮೊದಲ ಶತಕ. ಅದೂ ಈ ಕೂಟದಲ್ಲಿ ಭಾರತೀಯ ಆಟಗಾರನೊಬ್ಬನ ಮೊದಲ ಶತಕವೂ ಆಗಿತ್ತು.

2020ರ ಐಪಿಎಲ್‌ ಟೂರ್ನಿಯದಲ್ಲಿ ಮೂಡಿಬಂದ ಈ ದಾಖಲೆಗೂ ಮೊದಲು ರಾಹುಲ್ ಎರಡು ಬಾರಿ ಜೀವದಾನ ಪಡೆದರು. ರಾಹುಲ್‌ 83 ರನ್‌ ಗಳಿಸಿ ಆಡುವಾಗ ಮತ್ತು 89 ರನ್‌ನಲ್ಲಿ ಇದ್ದಾಗ ವಿರಾಟ್‌ ಕೊಹ್ಲಿ ಎರಡು ಬಾರಿ ಕ್ಯಾಚ್‌ ಕೈಚೆಲ್ಲಿದರು. ಇದು ಆರ್‌ಸಿಬಿಗೆ ದುಬಾರಿಯಾಗಿ ಪರಿಣಮಿಸಿತು. ಅಷ್ಟೇ ಅಲ್ಲ, ಕೆಎಲ್‌ ರಾಹುಲ್‌ ದಾಖಲೆಗಳನ್ನು ಬರೆಯಲು ಅನುವು ಮಾಡಿಕೊಟ್ಟಿತು.

ರಾಹುಲ್‌ ಅವರ 132 ರನ್‌ ಐಪಿಎಲ್‌ನಲ್ಲಿ ತಂಡವೊಂದರ ಕ್ಯಾಪ್ಟನ್‌ವೊಬ್ಬ ಗಳಿಸಿದ ಗರಿಷ್ಠ ಸ್ಕೋರ್‌ ಕೂಡ ಆಗಿದೆ. ಇದೇ ವೇಳೆ ರಾಹುಲ್‌ ಅವರು ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಮುರಿದು ಸಂಭ್ರಮಿಸಿದ್ದಾರೆ. ಸಚಿನ್‌ ಐಪಿಎಲ್‌ನಲ್ಲಿ ಅತಿವೇಗವಾಗಿ 2,000 ರನ್‌ ಗಳಿಸಿದ ಮೊದಲ ಭಾರತೀಯ ಆಟಗಾರ. ಈ ದಾಖಲೆ ಬರೆಯಲು ಸಚಿನ್‌ಗೆ 63 ಇನ್ನಿಂಗ್ಸ್‌ ಬೇಕಾಯಿತು. ಆದರೆ, ರಾಹುಲ್‌ 60 ಇನ್ನಿಂಗ್ಸ್‌ಗಳಲ್ಲೇ 2000 ರನ್‌ ಮುಟ್ಟಿ ದಾಖಲೆ ಬರೆದಿದ್ದಾರೆ.

ಎರಡನೇ ದೊಡ್ಡ ಗೆಲುವು

ಈ ಐಪಿಎಲ್‌ ಋತುಮಾನದಲ್ಲಿ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ತಂಡ ಆರ್‌ಸಿಬಿ ವಿರುದ್ದ 97ರನ್‌ಗಳ ಜಯ ದಾಖಲಿಸಿದೆ. ಇದು ಆರ್‌ಸಿಬಿ ವಿರುದ್ಧ ಪಂಜಾಬ್‌ ತಂಡ ದಾಖಲಿಸಿದ ಎರಡನೇ ಅತಿದೊಡ್ಡ ಗೆಲುವು. 2011ರಲ್ಲಿ ಪಂಜಾಬ್‌ ತಂಡ ಆರ್‌ಸಿಬಿ ವಿರುದ್ಧ 111 ರನ್‌ಗಳ ಜಯ ದಾಖಲಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT