ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಹುಲ್–ಮನೀಷ್ ಪಾಂಡೆ ಜೊತೆಯಾಟಕ್ಕೆ ಒಲಿದ ಜಯ

ಮುಷ್ತಾಕ್ ಅಲಿ ಟ್ರೋಫಿ: ತಮಿಳುನಾಡು ತಂಡಕ್ಕೆ ನಿರಾಸೆ
Last Updated 21 ನವೆಂಬರ್ 2019, 20:26 IST
ಅಕ್ಷರ ಗಾತ್ರ

ಸೂರತ್: ಕೆ.ಎಲ್. ರಾಹುಲ್ ಮತ್ತು ಮನೀಷ್ ಪಾಂಡೆ ಭರ್ಜರಿ ಬ್ಯಾಟಿಂಗ್‌ ಅಬ್ಬರದ ಮುಂದೆ ತಮಿಳುನಾಡು ತಂಡದ ಸದ್ದು ಅಡಗಿತು.

ಇಲ್ಲಿಯ ಲಾಲ್‌ಭಾಯಿ ಕಂಟ್ರ್ಯಾಕ್ಟರ್ ಕ್ರೀಡಾಂಗಣದಲ್ಲಿ ಗುರುವಾರ ರಾತ್ರಿ ನಡೆದ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಕ್ರಿಕೆಟ್ ಟೂರ್ನಿಯ ಸೂಪರ್ ಲೀಗ್ ಪಂದ್ಯದಲ್ಲಿ ಕರ್ನಾಟಕವು 9 ವಿಕೆಟ್‌ಗಳಿಂದ ಗೆದ್ದಿತು.

ಟಾಸ್ ಗೆದ್ದ ಕರ್ನಾಟಕ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ತಮಿಳುನಾಡು ತಂಡವು ದಿನೇಶ್ ಕಾರ್ತಿಕ್ (43; 29ಎ, 5ಬೌಂ, 1ಸಿ) ಮತ್ತು ವಾಷಿಂಗ್ಟನ್ ಸುಂದರ್ (39; 25ಎ, 3ಬೌಂ, 1ಸಿ) ಅವರಿಬ್ಬರ ಬ್ಯಾಟಿಂಗ್ ಬಲದಿಂದ 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 158 ರನ್‌ ಗಳಿಸಿತು. ಆದರೆ ಈ ಹೋರಾಟದ ಮೊತ್ತದ ಬಲದಿಂದ ತಂಡಕ್ಕೆ ಜಯ ಕೊಡಿಸುವಲ್ಲಿ ಬೌಲರ್‌ಗಳು ಎಡವಿದರು.

ವೆಸ್ಟ್ ಇಂಡೀಸ್ ಎದುರಿನ ಕ್ರಿಕೆಟ್ ಸರಣಿಯಲ್ಲಿ ಆಡುವ ಭಾರತ ತಂಡದಲ್ಲಿ ಸ್ಥಾನ ಪಡೆದ ಖುಷಿಯಲ್ಲಿದ್ದ ಕೆ.ಎಲ್. ರಾಹುಲ್ ಕೆ.ಎಲ್. ರಾಹುಲ್ (ಔಟಾಗದೆ 69; 46ಎಸೆತ, 6ಬೌಂಡರಿ, 2ಸಿಕ್ಸರ್)ಮತ್ತು ನಾಯಕ ಮನೀಷ್ ಪಾಂಡೆ (52;33ಎ,5ಬೌಂ,3ಸಿ)ಮುರಿಯದ ಎರಡನೇ ವಿಕೆಟ್ ಜೊತೆಯಾಟದಲ್ಲಿ 91 ರನ್‌ಗಳನ್ನು ಸೇರಿಸಿದರು.

ಇದರಿಂದಾಗಿ ತಂಡವು 16.2 ಓವರ್‌ಗಳಲ್ಲಿ 1 ವಿಕೆಟ್ ಕಳೆದುಕೊಂಡು 161 ರನ್‌ ಗಳಿಸಿ ಗೆದ್ದಿತು. ರಾಹುಲ್ ಅವರು ಮೊದಲ ವಿಕೆಟ್ ಜೊತೆಯಾಟದಲ್ಲಿ ದೇವದತ್ತ ಪಡಿಕ್ಕಲ್ (36; 20ಎ,5ಬೌಂ, 2ಸಿ) 70 ರನ್ ಸೇರಿಸಿದರು. ಮುರುಗನ್ ಅಶ್ವಿನ್ ಎಸೆತದಲ್ಲಿ ದೇವದತ್ತ ಔಟಾದರು. ಕ್ರೀಸ್‌ಗೆ ಬಂದ ಮನೀಷ್ ಪಾಂಡೆ ಕೂಡ ಬೀಸಾಟವಾಡಿದರು. ಇದರಿಂದಾಗಿ ಗೆಲುವು ಸುಗಮವಾಯಿತು. ಈ ನಡುವೆ ತಮಿಳುನಾಡು ತಂಡದ ನಾಯಕ ದಿನೇಶ್ ಮತ್ತು ಅಂಪೈರ್ ನಡುವೆ ಮಾತಿನ ಚಕಮಕಿ ನಡೆಯಿತು. ಸ್ವಲ್ಪ ಹೊತ್ತಿನ ನಂತರ ದಿನೇಶ್ ಅವರು ಪಾಂಡೆ ಜೊತೆಗೂ ವಾಗ್ವಾದ ನಡೆಸಿದರು. ಅಂಪೈರ್ ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.

ಸಂಕ್ಷಿಪ್ತ ಸ್ಕೋರು:ತಮಿಳುನಾಡು: 20 ಓವರ್‌ಗಳಲ್ಲಿ 7ಕ್ಕೆ158 (ದಿನೇಶ್ ಕಾರ್ತಿಕ್ 43, ವಾಷಿಂಗ್ಟನ್ ಸುಂದರ್ 39, ವಿಜಯಶಂಕರ್ 25, ವಿ. ಕೌಶಿಕ್ 23ಕ್ಕೆ2, ರೋನಿತ್ ಮೋರೆ 25ಕ್ಕೆ 2, ಜೆ. ಸುಚಿತ್ 25ಕ್ಕೆ1) ಕರ್ನಾಟಕ: 16.2 ಓವರ್‌ಗಳಲ್ಲಿ 1 ವಿಕೆಟ್‌ಗೆ 161 (ಕೆ.ಎಲ್. ರಾಹುಲ್ ಔಟಾಗದೆ 69, ದೇವದತ್ತ ಪಡಿಕ್ಕಲ್ 36, ಮನೀಷ್ ಪಾಂಡೆ ಔಟಾಗದೆ 52, ಮುರುಗನ್ ಅಶ್ವಿನ್ 27ಕ್ಕೆ1) ಫಲಿತಾಂಶ: ಕರ್ನಾಟಕ ತಂಡಕ್ಕೆ 9 ವಿಕೆಟ್‌ಗಳ ಜಯ. ಶುಕ್ರವಾರದ ಪಂದ್ಯ: ಕರ್ನಾಟಕ–ಜಾರ್ಖಂಡ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT