ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎರಡನೇ ಟ್ವೆಂಟಿ–20 ಪಂದ್ಯ: ಭಾರತದ ಆಸೆಗೆ ತಣ್ಣೀರು ಸುರಿದ ಮಳೆ

ಭುವನೇಶ್ವರ್‌, ಖಲೀಲ್‌ಗೆ ತಲಾ ಎರಡು ವಿಕೆಟ್‌ಗಳು
Last Updated 23 ನವೆಂಬರ್ 2018, 14:28 IST
ಅಕ್ಷರ ಗಾತ್ರ

ಮೆಲ್ಬರ್ನ್‌: ಪರಿಣಾಮಕಾರಿ ಬೌಲಿಂಗ್ ದಾಳಿ ಸಂಘಟಿಸಿದ ಭಾರತ ತಂಡ ಆತಿಥೇಯ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿ ಹಾಕುವಲ್ಲಿ ಯಶಸ್ವಿಯಾದರು. ಆದರೆ ಧಾರಾಕಾರ ಮಳೆ ವಿರಾಟ್ ಕೊಹ್ಲಿ ಬಳಗದ ಆಸೆಗೆ ತಣ್ಣೀರು ಸುರಿಯಿತು.

ಮೆಲ್ಬರ್ನ್ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಎರಡನೇ ಟ್ವೆಂಟಿ–20 ಕ್ರಿಕೆಟ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ 19 ಓವರ್‌ಗಳಲ್ಲಿ ಏಳು ವಿಕೆಟ್ ಕಳೆದುಕೊಂಡು 132 ರನ್‌ ಗಳಿಸಿದ್ದಾಗ ಮಳೆ ಸುರಿದ ಕಾರಣ ಆಟವನ್ನು ಸ್ಥಗಿತಗೊಳಿಸಲಾಯಿತು.

ಒಂದು ತಾಸು 10 ನಿಮಿಷಗಳ ನಂತರ ಪಂದ್ಯವನ್ನು ಪುನರಾರಂಭಿಸಲು ನಿರ್ಧರಿಸಲಾಯಿತು. ಈ ಸಂದರ್ಭದಲ್ಲಿ ಭಾರತಕ್ಕೆ 11 ಓವರ್‌ಗಳಲ್ಲಿ 90 ರನ್‌ಗಳ ಪರಿಷ್ಕೃತ ಗುರಿ ನೀಡಲಾಯಿತು. ಆದರೆ ಆಟಗಾರರು ಅಂಗಣಕ್ಕೆ ಇಳಿಯಬೇಕು ಎನ್ನುವಷ್ಟರಲ್ಲಿ ಮತ್ತೆ ಧಾರಾಕಾರ ಮಳೆ ಸುರಿಯಿತು. 25 ನಿಮಿಷಗಳ ನಂತರ ಪಂದ್ಯವನ್ನು ರದ್ದುಗೊಳಿಸಲು ನಿರ್ಧರಿಸಲಾಯಿತು.

ಸಂಕ್ಷಿಪ್ತ ಸ್ಕೋರು: ಆಸ್ಟ್ರೇಲಿಯಾ: 19 ಓವರ್‌ಗಳಲ್ಲಿ 7ಕ್ಕೆ 132 (ಗ್ಲೆನ್‌ ಮ್ಯಾಕ್ಸ್‌ವೆಲ್‌ 19, ಗ್ಲೆನ್‌ ಮೆಕ್‌ಡೆಮಾಟ್‌ ಅಜೇಯ 32, ಆ್ಯಂಡ್ರ್ಯೂ ಟೈ ಅಜೇಯ 12; ಭುವನೇಶ್ವರ್ ಕುಮಾರ್ 20ಕ್ಕೆ2, ಖಲೀಲ್ ಅಹಮ್ಮದ್ 32ಕ್ಕೆ2, ಜಸ್‌ಪ್ರೀತ್ ಬೂಮ್ರಾ 20ಕ್ಕೆ1, ಕುಲದೀಪ್ ಯಾದವ್‌ 23ಕ್ಕೆ1, ಕೃಣಾಪ್ ಪಾಂಡ್ಯ 26ಕ್ಕೆ1). ಮಳೆಯಿಂದಾಗಿ ಪಂದ್ಯ ರದ್ದು; 3 ಪಂದ್ಯಗಳ ಸರಣಿಯಲ್ಲಿ ಆಸ್ಟ್ರೇಲಿಯಾಗೆ 1–0 ಮುನ್ನಡೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT