ಗಿರೀಶ ದೊಡ್ಡಮನಿ

ರಾಯಪುರ: ದೃಷ್ಟಿ ಹಾಯಿಸಿದಷ್ಟು ದೂರ ಒಣಭೂಮಿ, ತಳದಲ್ಲಿ ಒಂದಿಷ್ಟು ನೀರು ಇರುವ ಕೆರೆ, ಕುಂಟೆಗಳು ಮತ್ತು ಬೆಳಿಗ್ಗೆ ಏಳರಿಂದಲೇ ಚುರುಕು ಮುಟ್ಟಿಸುವ ಬಿಸಿಲಿನ ಕಾವು. ಆದರೂ ಜನರ ಮುಖದ ಮೇಲೆ ಜೀವಂತಿಕೆಯ ಪ್ರತೀಕವೆಂಬಂತೆ ಕಾಣುವ ನಗುವಿನ ಜೊತೆಗೆ ಹಣೆ ಮೇಲೆ ಬಸಿಯುವ ಬೆವರಿನ ಹನಿಗಳು...

ಇಂತಹ ರಾಯಪುರದಲ್ಲಿ ಕ್ರಿಕೆಟ್ ಆಟಕ್ಕೆ ದೊಡ್ಡ ಇತಿಹಾಸವೇನೂ ಇಲ್ಲ. ಬೆಂಗಳೂರು, ಮುಂಬೈ, ದೆಹಲಿ, ಇಂದೋರ್, ಹೈದರಾಬಾದ್, ಕೋಲ್ಕತ್ತದಿಂದ ಬಂದಂತೆ ದೊಡ್ಡ ದಿಗ್ಗಜರೂ ಇಲ್ಲಿಲ್ಲ. ಆದರೆ ಇಲ್ಲಿಯ ಜನರ ಕ್ರಿಕೆಟ್ ಪ್ರೀತಿ ಮಾತ್ರ ಅಸಾಧಾರಣವಾದದ್ದು. ಭಾನುವಾರ ರಾತ್ರಿ ಅಂತಹ ಕ್ರಿಕೆಟ್ ಪ್ರಿಯರ ಮನಗೆಲ್ಲುವಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡ ಯಶಸ್ವಿಯಾಯಿತು. ತನ್ನ ಎರಡನೇ ತವರು ಶಹೀದ್ ವೀರನಾರಾಯಣ ಸಿಂಗ್ ಕ್ರೀಡಾಂಗಣದಲ್ಲಿ ಆರ್ಸಿಬಿ ಮುಂಬೈ ಇಂಡಿಯನ್ಸ್ ಎದುರಿನ ಪಂದ್ಯದಲ್ಲಿ 2 ವಿಕೆಟ್ಗಳ ರೋಚಕ ಜಯ ಸಾಧಿಸಿತು. ರಾತ್ರಿ 11.40ರ ಆಸುಪಾಸಿನಲ್ಲಿ ಈ ಪಂದ್ಯ ಮುಗಿದಾಗಲೂ ಜನರು ಕ್ರೀಡಾಂಗಣ ಬಿಟ್ಟು ತೆರಳಲಿಲ್ಲ. ಈ ಪಂದ್ಯದ ಗೆಲುವಿನ ರೂವಾರಿ ಭುವನೇಶ್ವರ್ ಕುಮಾರ್, ಕೃಣಾಲ್ ಪಾಂಡ್ಯ ಹಾಗೂ ದಿಗ್ಗಜ ವಿರಾಟ್ ಕೊಹ್ಲಿ ಅವರನ್ನು ಹತ್ತಿರದಿಂದ ನೋಡುವುದಕ್ಕಾಗಿ ಅಲ್ಲಲ್ಲಿ ನಿಂತಿದ್ದರು. ನಗರದಿಂದ ಸುಮಾರು 25 ಕಿ.ಮೀ ದೂರವಿರುವ ಕ್ರೀಡಾಂಗಣದ ಸುತ್ತಮುತ್ತ ಜನ ದಟ್ಟಣೆಯೇ ನೆರೆದಿತ್ತು.

167 ರನ್ಗಳ ಗುರಿ ಬೆನ್ನಟ್ಟಿದ್ದ ಆರ್ಸಿಬಿಯ ಅಗ್ರಕ್ರಮಾಂಕದಬ್ಯಾಟರ್ಗಳು ವಿಫಲರಾಗಿ ತಂಡ ಸೋಲಿನತ್ತ ಸಾಗಿತ್ತು. ಆ ಹಂತದಲ್ಲಿ ಕೃಣಾಲ್ ಪಾಂಡ್ಯ ತಮ್ಮ ಎಡಗಾಲಿನ ಸ್ನಾಯುಸೆಳೆತದ ನೋವಿನಲ್ಲಿಯೂ ಅಮೋಘ ಬ್ಯಾಟಿಂಗ್ ಮಾಡಿದರು. ಒಂಟಿ, ಎರಡು ರನ್ ಓಡುವುದಕ್ಕೂ ನೋವು ಅನುಭವಿಸಿದ ಅವರು ಸಿಕ್ಸರ್, ಬೌಂಡರಿಗಳನ್ನು ಬಾರಿಸಿ ತಂಡದ ಗೆಲುವಿನ ಆಸೆ ಜೀವಂತವಾಗಿಟ್ಟರು. 46 ಎಸೆತಗಳಲ್ಲಿ73 ರನ್ ಬಾರಿಸಿದರು. ಅದರಲ್ಲಿ ಐದು ಸಿಕ್ಸರ್ಗಳೂ ಇದ್ದವು. ಅವರ ಈ ಆಟದಿಂದಾಗಿ ಹಾಲಿ ಚಾಂಪಿಯನ್ ಆರ್ಸಿಬಿಯು ಪ್ಲೇ ಆಫ್ ಹಂತಕ್ಕೆ ಮತ್ತಷ್ಟು ಸನಿಹಕ್ಕೆ ಬಂದು ನಿಂತಿತು.

‘ನನ್ನ ಆಲ್ರೌಂಡ್ ಆಟ ಸುಧಾರಣೆಗೊಳ್ಳಲು ದಿನೇಶ್ ಕಾರ್ತಿಕ್ (ಮೆಂಟರ್) ಮತ್ತು ತಂಡದ ನೆರವು ಸಿಬ್ಬಂದಿಯ ಪಾತ್ರ ಬಹಳಷ್ಟಿದೆ. ತಂಡದ ಗೆಲುವಿನಲ್ಲಿ ಇಂತಹ ಪಾತ್ರ ನಿರ್ವಹಿಸಿದಾಗ ಅಪಾರ ಸಂತೃಪ್ತಿ ದೊರೆಯುತ್ತದೆ’ ಎಂದು ಪಂದ್ಯದ ನಂತರ ಕೃಣಾಲ್ ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ಪ್ರಾಮಾಣಿಕವಾಗಿ ಹೇಳುತ್ತೇನೆ. ಸವಾಲಿನ ಸಂದರ್ಭದಲ್ಲಿ ನಾನು ಹೆಚ್ಚು ಪರಿಣಾಮಕಾರಿಯಾಗಿ ಆಡಬಲ್ಲೆ. ಅದು ನನ್ನ ಆತ್ಮವಿಶ್ವಾಸ’ ಎಂದೂ ಕೃಣಾಲ್ ಹೇಳಿದರು.

ಕೃಣಾಲ್ ಅವರ ಆಟವು ಇಲ್ಲಿಯ ಜನರ ಮನಗೆದ್ದಿದೆ. ಅದೇ ರೀತಿ ಹೆಚ್ಚು ಐಪಿಎಲ್ ಪಂದ್ಯಗಳು ನಡೆಯಬೇಕು ಎನ್ನುವ ಬೇಡಿಕೆಯೂ ಇಲ್ಲಿ ಅಭಿಮಾನಿಗಳಿಂದ ಸಾಮಾಜಿಕ ಜಾಲತಾಣ ಗಳಲ್ಲಿ ವ್ಯಕ್ತವಾಗುತ್ತಿದೆ. ಈ ನಗರದಲ್ಲಿ ಈಗ ಕ್ರಿಕೆಟ್ನ ಹೊಸ ಅಧ್ಯಾಯದ ಆರಂಭದ ಲಕ್ಷಣಗಳೂ ಗೋಚರಿಸುತ್ತಿವೆ.

ಆರ್ಸಿಬಿಯು ತನ್ನ ಎರಡನೇ ತವರಿನ ಅಂಗಳದಲ್ಲಿ ನಡೆದ ಮೊದಲ ಪಂದ್ಯದಲ್ಲಿ ರೋಚಕ ಜಯಸಾಧಿಸಿದೆ. 13ರಂದು ಇನ್ನೊಂದು ಪಂದ್ಯವನ್ನು ಇಲ್ಲಿ ಆಡಲಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260512-51-1776767999

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.