ಮುಂಬೈ : ರಾಜಸ್ಥಾನ ರಾಯಲ್ಸ್ ತಂಡವು, ಭಾನುವಾರ ನಡೆಯಲಿರುವ ಐಪಿಎಲ್ನ ನಿರ್ಣಾಯಕ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದ್ದು, ಗೆದ್ದರೆ ಯಾವುದೇ ಲೆಕ್ಕಾಚಾರದ ಅಗತ್ಯವಿಲ್ಲದೇ ಪ್ಲೇ ಆಫ್ ಸ್ಥಾನ ತನ್ನದಾಗಿಸಿಕೊಳ್ಳಲಿದೆ.

ಮಧ್ಯಾಹ್ನದ ಉರಿ ಬಿಸಿಲು–ಸೆಕೆಯ ವಾತಾವರಣದಲ್ಲಿ ನಡೆಯಲಿರುವ ಈ ಪಂದ್ಯ ಎರಡೂ ತಂಡಗಳ ಆಟಗಾರರ ಫಿಟ್ನೆಸ್ಗೆ ಸವಾಲಾಗಲಿದೆ. ಈ ಪಂದ್ಯ ಸೋತರೆ ರಾಜಸ್ಥಾನ ರಾಯಲ್ಸ್ನ ಪ್ಲೇ ಆಫ್ ಕನಸು ಇತರ ತಂಡಗಳ ಸೋಲು–ಗೆಲುವಿನ ಮೇಲೆ ಅವಲಂಬನೆಯಾಗಲಿದೆ. ಮುಂಬೈ ಇಂಡಿಯನ್ಸ್ ತಂಡ ಗೆದ್ದರೆ ನಿರಾಶಾಯಾದಕ ಋತುವನ್ನು ಸಕಾರಾತ್ಮಕವಾಗಿ ಮುಗಿಸಿದ ಸಮಾಧಾನಕ್ಕೆ ಪಾತ್ರವಾಗಲಿದೆ.

ರಿಯಾನ್ ಪರಾಗ್ ನೇತೃತ್ವದ ತಂಡ ಪ್ರಸ್ತುತ 14 ಪಾಯಿಂಟ್ಸ್ ಗಳಿಸಿದ್ದು, ಗೆದ್ದರೆ 16ಕ್ಕೆ ಏರಲಿದೆ. ಆಗ ಪಂಜಾಬ್ ಮತ್ತು ಕೋಲ್ಕತ್ತ ನೈಟ್ರೈಡರ್ಸ್ ಹೊರಬೀಳಲಿದೆ.

ರಾಯಲ್ಸ್ ತಂಡ ಕೊನೆಯ ಐದು ಪಂದ್ಯಗಳಲ್ಲಿ ಎರಡು ಗೆದ್ದು, ಮೂರು ಸೋತಿದೆ. ಆದರೆ ಫಾರ್ಮ್, ಮುಂಬೈನ ಪಿಚ್, ವಾತಾವರಣ ಬಲ್ಲ ರಾಯಲ್ಸ್ ಗೆಲ್ಲುವ ನೆಚ್ಚಿನ ತಂಡವಾಗಿದೆ.

ಏಕಾಂಗಿಯಾಗಿ ಪಂದ್ಯ ಗೆಲ್ಲಿಸಬಲ್ಲ ವೈಭವ್ ಸೂರ್ಯವಂಶಿ ಅವರಷ್ಟೇ ಅಪಾಯವನ್ನು ಯಶಸ್ವಿ ಜೈಸ್ವಾಲ್ ಕೂಡ ಮುಂಬೈಗೆ ಒಡ್ಡಬಲ್ಲರು. ಗುವಾಹಟಿಯಲ್ಲಿ ನಡೆದ ಪಂದ್ಯದಲ್ಲಿ ಜೈಸ್ವಾಲ್ ಅವರು ಜಸ್ಪ್ರೀತ್ ಬೂಮ್ರಾ ನೇತೃತ್ವವ ಮುಂಬೈ ದಾಳಿಯನ್ನು ಹಿಗ್ಗಾಮುಗ್ಗಾ ದಂಡಿಸಿದ್ದರು. 32 ಎಸೆತಗಳಲ್ಲಿ 77 ರನ್ ಬಾರಿಸಿ ಗೆಲುವಿಗೆ ಅಡಿಪಾಯ ಹಾಕಿದ್ದರು. ಮುಂಬೈ ಅವರಿಗೆ ತವರು ಕೂಡ.

ಆದರೆ ಪರಾಗ್ ಮತ್ತು ಧ್ರುವ್ ಜುರೇಲ್ ಅವರಿಂದ ತಂಡ ಸ್ಥಿರ ಬ್ಯಾಟಿಂಗ್ ನಿರೀಕ್ಷಿಸುತ್ತಿದೆ. ಕೆಲವು ಸಂದರ್ಭಗಳಲ್ಲಿ ಜುರೆಲ್ ಸಪ್ಪೆಯಾಗಿ ಕಂಡಿದ್ದಾರೆ. ಈ ಋತುವಿನಲ್ಲಿ ಪರಾಗ್ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಆಡಿದ್ದು ಕಡಿಮೆ. ಆದರೆ ಬೌಲರ್ಗಳು ಪ್ರದರ್ಶನ ಗಮನಾರ್ಹವಾಗಿದೆ.

ಮುಂಬೈ ಇಂಡಿಯನ್ಸ್ ಸಹ ಕೊನೆಯ ಐದು ಪಂದ್ಯಗಳಲ್ಲಿ ಮೂರು ಸೋತರು, ಎರಡು ಗೆದ್ದಿದೆ. ಆದರೆ ಈಗ ಮಾನವುಳಿಸಲು ಅದು ಸಕಾರಾತ್ಮಕ ಫಲಿತಾಂಶದೊಡನೆ ಮುಗಿಸಲು ಅಭಿಯಾನ ಮುಗಿಸಲು ಯತ್ನಿಸುವುದು ಖಚಿತ. ಭಾರತ ಟಿ20 ತಂಡದ ನಾಯಕ ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ ಮತ್ತು ತಿಲಕ್ ವರ್ಮಾ ಅವರಿಗೆ ಸಾಮರ್ಥ್ಯ ತೋರಲು ಇದು ಕೊನೆಯ ಅವಕಾಶ.

ಪಂದ್ಯ ಆರಂಭ: ಮಧ್ಯಾಹ್ನ 3.30.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.