ರಾಜರ ಆಳ್ವಿಕೆಯ ಕಾಲದಲ್ಲಿ ಯುದ್ಧಗಳು ಸಂಭವಿಸಿದಾಗ, ರಾಜನಾದವರು ಮುಂದೆ ನಿಂತು ಎದುರಾಳಿಗಳ ವಿರುದ್ಧ ಹೋರಾಟ ಮಾಡಬೇಕಿತ್ತು. ಸೈನಿಕರು ಹಿಂದಿನಿಂದ ರಾಜನನ್ನು ಅನುಸರಿಸುತ್ತಿದ್ದರು.

ಅಂತೆಯೇ ಕ್ರಿಕೆಟ್ನಲ್ಲಿಯೂ ನಾಯಕ ಎನಿಸಿಕೊಂಡವರು ಉತ್ತಮ ಪ್ರದರ್ಶನ ನೀಡಿದಾಗ ಮಾತ್ರ ತಂಡದ ಸಹ ಆಟಗಾರರು ಆತನನ್ನು ಅನುಸರಿಸುತ್ತಾರೆ. ಅದಕ್ಕೆ ಉದಾಹರಣೆಯಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ನಾಯಕ ಎಂ.ಎಸ್. ಧೋನಿ, ಮುಂಬೈ ತಂಡದ ಮಾಜಿ ನಾಯಕ ರೋಹಿತ್ ಶರ್ಮಾ ಇದ್ದಾರೆ. ಇವರು ಐಪಿಎಲ್ನ ಅತ್ಯಂತ ಯಶಸ್ವಿ ನಾಯಕರುಗಳಾಗಿದ್ದಾರೆ. ಇವರು, ನಾಯಕತ್ವದ ಜೊತೆಗೆ ತಾವು ಜವಾಬ್ದಾರಿ ಅರಿತು ಆಡಿದ್ದರ ಪರಿಣಾಮ ಯಶಸ್ವಿ ನಾಯಕರು ಎನಿಸಿಕೊಂಡಿದ್ದಾರೆ.

ಕ್ರಿಕೆಟ್ ಆಡುವ ಪ್ರತಿಯೊಬ್ಬರೂ, ಇಂಡಿಯನ್ ಪ್ರೀಮಿಯರ್ ಲೀಗ್ ಆಡಬೇಕು ಎಂಬ ಕಾಣುತ್ತಾರೆ. ಅದೇ ರೀತಿಯ ಕನಸು ಕಂಡು ಕ್ರಿಕೆಟ್ ಆಡಲು ಆರಂಭಿಸಿ ಹುಡುಗ ಇಂದು ಐಪಿಎಲ್ನ ಪ್ರಮುಖ ಫ್ರಾಂಚೈಸಿಯೊಂದರ ನಾಯಕನಾಗಿ ಸತತ ಎರಡನೇ ಬಾರಿಗೆ ತಂಡವನ್ನು ಫೈನಲ್ಗೆ ಕರೆದುಕೊಂಡು ಹೋಗಿದ್ದಾರೆ. ಸತತ 17 ಆವೃತ್ತಿಗಳಲ್ಲಿ ದಿಗ್ಗಜ ಆಟಗಾರರು ತಂಡವನ್ನು ಮುನ್ನಡೆಸಿದರೂ ಒಂದೇ ಒಂದು ಟ್ರೋಫಿ ಗೆಲ್ಲಲು ಸಾಧ್ಯವಾಗದ ತಂಡವನ್ನು, ನಾಯಕತ್ವ ವಹಿಸಿಕೊಂಡ ಮೊದಲ ಆವೃತ್ತಿಯಲ್ಲೇ ಚಾಂಪಿಯನ್ ಮಾಡಿದ್ದಾರೆ. ಮಾತ್ರವಲ್ಲ, ಇದೀಗ ಎರಡನೇ ಬಾರಿಯೂ ತಂಡವನ್ನು ಫೈನಲ್ಗೆ ಕರೆದುಕೊಂಡು ಹೋಗಿದ್ದಾರೆ. ಅವರು ಬೇರೆ, ಯಾರೂ ಅಲ್ಲ ಆರ್ಸಿಬಿ ತಂಡದ ಯುವ ನಾಯಕ ರಜತ್ ಪಾಟಿದಾರ್.

2021ರಲ್ಲಿ ಕಳಪೆ ಆಟ ತಂಡದಿಂದ ಹೊರಕ್ಕೆ

ಎರಡು ಆವೃತ್ತಿಗಳಲ್ಲಿ ಆರ್ಸಿಬಿ ತಂಡವನ್ನು ಮುನ್ನಡೆಸಿರುವ ರಜತ್ ಪಾಟಿದಾರ್ ಕುರಿತು ಒಂದೇ ವಾಕ್ಯದಲ್ಲಿ ‘ಅವರೊಬ್ಬ ಯಶಸ್ವಿ ನಾಯಕ’ ಎಂದು ಉತ್ತರಿಸಬಹುದು. ಆದರೆ, ಅವರ ಯಶಸ್ಸಿನ ಹಿಂದೆ ಕಠಿಣ ಶ್ರಮ ಇದೆ. ದೇಶೀಯ ಕ್ರಿಕೆಟ್ನಲ್ಲಿ ನಿರಂತರವಾಗಿ ಉತ್ತಮ ಪ್ರದರ್ಶನ ನೀಡಿದ್ದರ ಹೊರತಾಗಿಯೂ ಅವರಿಗೆ ಐಪಿಎಲ್ ಅಥವಾ ಭಾರತ ತಂಡದಲ್ಲಿ ಅವಕಾಶ ಸಿಕ್ಕಿರಲಿಲ್ಲ. 2021ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಯ್ಕೆಯಾದ ರಜತ್ ಪಾಟಿದಾರ್, ಕಳಪೆ ಪ್ರದರ್ಶನ ತೋರುವ ಮೂಲಕ ತಂಡದಿಂದ ಹೊರಬಿದ್ದರು. ಅದಾದ 4 ವರ್ಷಗಳ ಬಳಿಕ, ಅದೇ ತಂಡದ ನಾಯಕನಾಗಿ 18 ವರ್ಷದ ಬಳಿಕ ಚೊಚ್ಚಲ ಟ್ರೋಫಿ ಗೆಲ್ಲಿಸಿಕೊಡುವುದು ಸಾಮಾನ್ಯ ಸಾಧನೆಯಲ್ಲ.

2021ರಲ್ಲಿ ಆರ್ಸಿಬಿ ತಂಡವು ರಜತ್ ಪಾಟಿದಾರ್ ಅವರನ್ನು ತಂಡದಿಂದ ಬಿಡುಗಡೆ ಮಾಡುತ್ತದೆ. 2022ರ ಮೆಗಾ ಹರಾಜಿನಲ್ಲಿ ಅವರನ್ನು ಯಾವುದೇ ತಂಡ ಖರೀದಿಸಿರಲಿಲ್ಲ. ಆದರೆ, ಅದೇ ವರ್ಷ ಅದೃಷ್ಟ ಅವರನ್ನು ಹುಡುಕಿಕೊಂಡು ಬರುತ್ತದೆ. ಆರ್ಸಿಬಿ ತಂಡಕ್ಕೆ ಆಯ್ಕೆಯಾಗಿದ್ದ, ಲುವ್ನಿತ್ ಸಿಸೋಡಿಯಾ ಗಾಯಗೊಂಡು ಟೂರ್ನಿಯಿಂದ ಹೊರ ಹೋದ ಬಳಿಕ, ಟೂರ್ನಿಯ ನಡುವೆ ರಜತ್ ಅವರನ್ನು ಆರ್ಸಿಬಿ ಫ್ರಾಂಚೈಸಿ ಕರೆತರುತ್ತದೆ. ಆ ಸಂದರ್ಭದಲ್ಲಿ ಪಾಟಿದಾರ್ ಅವರು ಇಂದೋರ್ನಲ್ಲಿ ಡಿವಿಷನ್ ಕ್ರಿಕೆಟ್ ಆಡುತ್ತಿದ್ದರು. ಮಾತ್ರವಲ್ಲ ಅವರಿಗೆ ವಿವಾಹ ನಿಶ್ಚಯವಾಗಿದ್ದರಿಂದ, ಆ ಕೆಲಸಗಳಲ್ಲಿ ನಿರತರಾಗಿದ್ದರು. ಆರ್ಸಿಬಿ, ಅವರನ್ನು ತಂಡಕ್ಕೆ ಕರೆದಾಗ, ಅವರು ಬರಲು ಸಿದ್ಧರಿರಲಿಲ್ಲ. ಆದರೆ, ಅವರ ಸ್ನೇಹಿತ ಶುಭಂ ಶರ್ಮಾ ಅವರ ಮನವೊಲಿಕೆಯ ಬಳಿಕ ಆರ್ಸಿಬಿ ತಂಡಕ್ಕೆ ಬರಲು ಒಪ್ಪಿಕೊಂಡರು.

ಅದ್ಭುತ ಪ್ರದರ್ಶನ

ಆರ್ಸಿಬಿ ತಂಡದಲ್ಲಿ ಅವಕಾಶ ಪಡೆದ ರಜತ್ ಪಾಟಿದಾರ್ ಅವರು ಈ ಅವಕಾಶವನ್ನು ಎರಡೂ ಕೈಗಳಿಂದ ಬಾಚಿಕೊಂಡರು. ಅವರು ಆ ವರ್ಷ ಆಡಿದ 8 ಇನಿಂಗ್ಸ್ಗಳಿಂದ 152ರ ಸ್ಟ್ರೈಕ್ರೇಟ್ನಲ್ಲಿ 333 ರನ್ ಕಲೆಹಾಕಿದರು. ಇದರಲ್ಲಿ ಎಲಿಮಿನೇಟರ್ ಪಂದ್ಯದಲ್ಲಿ ಲಖನೌ ಸೂಪರ್ಜೈಂಟ್ಸ್ ವಿರುದ್ಧ ಕೇವಲ 54 ಎಸೆತಗಳಲ್ಲಿ 112 ರನ್ ಕೂಡ ಒಳಗೊಂಡಿತ್ತು. ಇದೇ ಪ್ರದರ್ಶನವನ್ನು ರಣಜಿಯಲ್ಲೂ ಮುಂದುವರೆಸಿದ ಅವರು, ಮಧ್ಯಪ್ರದೇಶ ಪರ ಫೈನಲ್ ಪಂದ್ಯದಲ್ಲಿ ಶತಕ ಸಿಡಿಸುವ ಮೂಲಕ ತಂಡ ಪ್ರಶಸ್ತಿ ಗೆಲ್ಲಲು ನೆರವಾದರು.

ಭಾರತ ತಂಡಕ್ಕೆ ಪದಾರ್ಪಣೆ

ಐಪಿಎಲ್ ಹಾಗೂ ರಣಜಿ ಟ್ರೋಫಿಯಲ್ಲಿನ ಗಮನಾರ್ಹ ಪ್ರದರ್ಶನದ ಬಳಿಕ, ಅವರು ಭಾರತ ಏಕದಿನ ಹಾಗೂ ಟೆಸ್ಟ್ ತಂಡಕ್ಕೂ ಆಯ್ಕೆಯಾದರು. ಆದರೆ, ಗಮನಾರ್ಹ ಪ್ರದರ್ಶನ ನೀಡಲು ವಿಫಲರಾದ ಅವರು ತಂಡದಲ್ಲಿ ಸ್ಥಾನ ಕಳೆದುಕೊಂಡರು. ಈ ನಡುವೆ ಗಾಯದ ಸಮಸ್ಯೆ ಅವರನ್ನು ಕಾಡುತ್ತದೆ. ಮಾತ್ರವಲ್ಲ, 2023ರ ಐಪಿಎಲ್ ಟೂರ್ನಿಯನ್ನು ಕೂಡ ಅವರು ತಪ್ಪಿಸಿಕೊಂಡರು.

ಆರ್ಸಿಬಿ ನಾಯಕತ್ವ

2024ರಲ್ಲಿ ಆರ್ಸಿಬಿ ತಂಡಕ್ಕೆ ಮರಳಿದ ಪಾಟಿದಾರ್ ಅವರು ಫಾಫ್ ಡು ಪ್ಲೆಸಿಸ್ ನಾಯಕತ್ವದಲ್ಲಿ ಉತ್ತಮ ಪ್ರದರ್ಶನ ನೀಡಿದರು. ಪರಿಣಾಮ, 2025ರಲ್ಲಿ ಅವರು ತಂಡದ ನಾಯಕರಾಗಿ ಮರಳಿದರು. ಪಾಟಿದಾರ್ ಕುರಿತು ಮಾತನಾಡಿದ, ಭಾರತದ ಮಾಜಿ ಕ್ರಿಕೆಟಿಗ ಮತ್ತು ಮಾರ್ಗದರ್ಶಕ ಅಮಯ್ ಖುರಾಸಿಯಾ ‘ಕೆಲವೊಮ್ಮೆ ಹಾರಲು ರೆಕ್ಕೆಗಳು ಮತ್ತು ಧೈರ್ಯ ಇರುತ್ತದೆ. ಆದರೆ ಆವಕಾಶ ಸಿಗುವುದಿಲ್ಲ’ ಎಂದಿದ್ದರು.

ಅಂತರರಾಷ್ಟ್ರೀಯ ತಂಡದಲ್ಲಿ ವೈಫಲ್ಯ, ಗಾಯದ ಸಮಸ್ಯೆ ಹೊರತಾಗಿಯೂ, ಅನಿಲ್ ಕುಂಬ್ಳೆ, ಡೇನಿಯಲ್ ವೆಟ್ಟೋರಿ, ವಿರಾಟ್ ಕೊಹ್ಲಿ ಮತ್ತು ಫಾಫ್ ಡು ಪ್ಲೆಸಿಸ್ರಂತಹ ದಿಗ್ಗಜರು ಮುನ್ನಡೆಸಿದ ತಂಡವನ್ನು ಮುನ್ನಡೆಸುವ ಅವಕಾಶ 2025ರಲ್ಲಿ ಅವರಿಗೆ ಒಲಿದು ಬರುತ್ತದೆ. ಸಿಕ್ಕ ಅವಕಾಶ ಬಳಸಿಕೊಂಡ ರಜತ್ ಆರ್ಸಿಬಿ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದರು.

ನಾಯಕತ್ವ ಮತ್ತು ಐಪಿಎಲ್ ಗೆಲುವು

ಅಂತರರಾಷ್ಟ್ರೀಯ ತಂಡದಲ್ಲಿನ ಸವಾಲುಗಳ ಹೊರತಾಗಿಯೂ, ಪಾಟಿದಾರ್ ಅವರು ಐಪಿಎಲ್ನಲ್ಲಿ ಲಯ ಕಂಡುಕೊಂಡರು. ಐಪಿಎಲ್ 2025ರ ಆರಂಭಕ್ಕೂ ಮುನ್ನ ಅವರನ್ನು ನಾಯರನ್ನಾಗಿ ನೇಮಕ ಮಾಡುತ್ತಿದ್ದಂತೆ, ಫ್ರಾಂಚೈಸಿ ನಿರ್ಧಾರವು ಅನೇಕರ ಅಚ್ಚರಿ ಉಂಟುಮಾಡುತ್ತದೆ. ತಂಡದಲ್ಲಿ ಅನೇಕ ಅನುಭವಿ ಆಟಗಾರರು ಇರುವಾಗ ಪಾಟಿದಾರ್ ಅವರನ್ನು ನಾಯಕರನ್ನಾಗಿ ನೇಮಕ ಮಾಡಿದ್ದಕ್ಕೆ ಅನೇಕ ವಿಮರ್ಶಕರು ಟೀಕಿಸಿದ್ದರು. ಅದರ ಹೊರತಾಗಿಯೂ, ಪಾಟಿದಾರ್ ಸ್ಥಿರ ಪ್ರದರ್ಶನ ಮತ್ತು ನಿಪುಣ ತಂತ್ರಗಾರಿಕೆಯ ಮೂಲಕ ತಂಡವನ್ನು ಪ್ರಶಸ್ತಿ ಸುತ್ತಿಗೆ ಕರೆದೊಯ್ದರು.

ಚೊಚ್ಚಲ ಪ್ರಶಸ್ತಿ ಗೆದ್ದ ಬಳಿಕ ಮಾತನಾಡಿದ್ದ ರಜತ್ ಪಾಟಿದಾರ್, ‘ನಾನು ತಂಡದ ಪರವಾಗಿ ವಿಶೇಷವಾಗಿದದ್ದನ್ನು ಮಾಡಬೇಕಾಗಿರಲಿಲ್ಲ. ನಮ್ಮದು ಸಮತೋಲನ ತಂಡವಾಗಿದೆ. ವಿರಾಟ್ ಕೊಹ್ಲಿಯಂತಹ ದಿಗ್ಗಜ ಆಟಗಾರ ನಮ್ಮ ಜೊತೆ ಇರುವಾಗ ನಮ್ಮ ಶಕ್ತಿ ದುಪ್ಪಟ್ಟಾಗುತ್ತದೆ’ ಎಂದು ಹೇಳಿದ್ದರು.

‘ತಂಡದ ಮ್ಯಾನೇಜ್ಮೆಂಟ್, ಕೋಚಿಂಗ್ ಸಿಬ್ಬಂದಿ ಮತ್ತು ಹಿರಿಯ ಆಟಗಾರರು ಸಾಕಷ್ಟು ಅನುಭವವ ಹೊಂದಿದ್ದಾರೆ. ಅದು ನನಗೆ ಸಹಾಯ ಮಾಡಿತು. ವಿರಾಟ್ ಭಾಯ್, ದೇವದತ್ತ ಪಡಿಕಲ್, ಜಿತೇಶ್ ಶರ್ಮಾ, ಹೇಜಲ್ವುಡ್, ಭುವನೇಶ್ವರ್ ಕುಮಾರ್, ಟಿಮ್ ಡೇವಿಡ್ ಅವರ ಸಾಮರ್ಥ್ಯಕ್ಕೆ ತಕ್ಕಂತೆ ಆಡುತ್ತಿದ್ದಾರೆ. ಹಾಗಾಗಿ, ನಾನು ತಂಡಕ್ಕಾಗಿ ಹೆಚ್ಚು ಏನನ್ನು ಮಾಡುವ ಅಗತ್ಯವಿರಲಿಲ್ಲ. ನಾಯಕನಾಗಿ ನನ್ನ ಜವಾಬ್ದಾರಿ ಅರಿತು ಆಡಬೇಕಿತ್ತು ಅದನ್ನು ಮಾತ್ರ ಮಾಡಿದೆ’ ಎಂದಿದ್ದರು.

ವಿರಾಟ್ ಕೊಹ್ಲಿ ಜೊತೆಗಿನ ಬಾಂಧವ್ಯ

ರಜತ್ ಪಾಟಿದಾರ್ ಅವರು ತಂಡದ ಅನುಭವಿ ಹಾಗೂ ಹಿರಿಯ ಆಟಗಾರ ವಿರಾಟ್ ಕೊಹ್ಲಿ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದು, ತಂಡದ ಸಂಕಷ್ಟದ ಸಂದರ್ಭದಲ್ಲಿ ಕೊಹ್ಲಿ ಅವರ ಜೊತೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುತ್ತಾರೆ. ಯಾವ ಸಂದರ್ಭದಲ್ಲಿ ಯಾರಿಂದ ಬೌಲಿಂಗ್ ಮಾಡಿಸಬೇಕು ಎಂಬ ಸಲಹೆ ಪಡೆದು ಮುನ್ನಡೆಯುತ್ತಾರೆ. ಮಾತ್ರವಲ್ಲ, ವಿರಾಟ್ ಕೊಹ್ಲಿ ಅವರಿಗೆ ಭಾರತ ತಂಡವನ್ನು ಹಾಗೂ ಆರ್ಸಿಬಿ ತಂಡವನ್ನು ಅನೇಕ ವರ್ಷಗಳ ಕಾಲ ಮುನ್ನಡೆಸಿದ ಅಪಾರ ಅನುಭವ ಇರವುದರಿಂದ ಪಾಟಿದಾರ್ ಅವರಿಗೆ ನೆರವಾಗುತ್ತಿದೆ.

ಐತಿಹಾಸಿಕ ಸಾಧನೆ :

ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಇದುವರೆಗೆ ಇಬ್ಬರು ನಾಯಕರುಗಳು ಮಾತ್ರ, ತಮ್ಮ ತಂಡಗಳನ್ನು ಸತತ ಎರಡು ಬಾರಿ ಚಾಂಪಿಯನ್ ಮಾಡಿದ್ದಾರೆ. ಅದು ಎಂ.ಎಸ್. ಧೋನಿ (2010 ಮತ್ತು 2011) ಹಾಗೂ ರೋಹಿತ್ ಶರ್ಮಾ (2019, 2020)ರಲ್ಲಿ ಈ ಸಾಧನೆ ಮಾಡಿದ್ದಾರೆ. ಇದೀಗ ಫೈನಲ್ ತಲುಪಿರುವ ಆರ್ಸಿಬಿ ತಂಡವು ಇನ್ನೊಂದು ಪಂದ್ಯ ಗೆದ್ದರೆ, ಪಾಟಿದಾರ್ ಅವರು ದಿಗ್ಗಜ ನಾಯಕರ ಸಾಲಿಗೆ ಸೇರಲಿದ್ದಾರೆ.

ನಾಯಕತ್ವದ ಜೊತೆಗೆ ಆಟಗಾರನಾಗಿಯೂ ಯಶಸ್ಸು

ನಾಯಕನಾಗಿ ಯಶಸ್ಸಿನ ಜೊತೆ ರಜತ್ ಪಾಟಿದಾರ್ ಆಟಗಾರನಾಗಿಯೂ ತಂಡವನ್ನು ಸಂಕಷ್ಟದ ಸಂದದರ್ಭದಲ್ಲಿ ಪಾರು ಮಾಡುತ್ತಿದ್ದಾರೆ. ಅದಕ್ಕೆ ಸಾಕ್ಷಿ ನಿನ್ನೆ (ಮೇ 26) ನಡೆದ ಗುಜರಾತ್ ಟೈಟನ್ಸ್ ವಿರುದ್ಧದ ಕ್ವಾಲಿಫೈಯರ್ ಪಂದ್ಯ. 94 ರನ್ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ಬ್ಯಾಟಿಂಗ್ ಇಳಿದ ಪಾಟಿದಾರ್, 33 ಎಸೆತಗಳಲ್ಲಿ ಅಜೇಯ 93 ರನ್ ಸಿಡಿಸಿ ಮಿಂಚಿದರು.

ಈ ಬಾರಿಯ ಐಪಿಎಲ್ನಲ್ಲಿ ಅವರು, ಆಡಿರುವ 14 ಪಂದ್ಯಗಳಿಂದ 44 ರ ಸರಾಸರಿ ಮತ್ತು 197ರ ಸ್ಟ್ರೈಕ್ರೇಟ್ನಲ್ಲಿ 486 ರನ್ ಕಲೆಹಾಕಿದ್ದಾರೆ. ಆ ಮೂಲಕ ನಾಯಕತ್ವದ ಜೊತೆಗೆ ಆಟಗಾರನಾಗಿಯೂ ತಮ್ಮ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ.

ಇದುವರೆಗೂ ಐಪಿಎಲ್ನಲ್ಲಿ 56 ಪಂದ್ಯಗಳಲ್ಲಿ ಆಡಿರುವ ಅವರು, 34ರ ಸರಾಸರಿಯಲ್ಲಿ 14 ಅರ್ಧಶತಕ ಹಾಗೂ 1 ಶತಕ ಸಹಿತ 1597 ರನ್ ಕಲೆಹಾಕಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.