ಅಹಮದಾಬಾದ್: ಇಂಡಿಯನ್ ಪ್ರೀಮಿಯರ್ ಲೀಗ್ನ ನಿನ್ನೆಯ (ಏಪ್ರಿಲ್ 30) ಪಂದ್ಯದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಗುಜರಾತ್ ಟೈಟನ್ಸ್ ವಿರುದ್ಧ ಸೋಲು ಅನುಭವಿಸಿತು. ಪಂದ್ಯದ ಬಳಿಕ ಮಾತನಾಡಿದ ನಾಯಕ ರಜತ್ ಪಾಟಿದಾರ್ ಬ್ಯಾಟರ್ಗಳ ವೈಫಲ್ಯ ಸೋಲಿಗೆ ಕಾರಣ ಎಂಬುದನ್ನು ಒಪ್ಪಿಕೊಂಡರು.

ತಂಡದ ಸೋಲಿನ ಕುರಿತು ಮಾತನಾಡಿದ ಪಾಟಿದಾರ್, ‘ನಾವು ಟಾಸ್ ಸೋತು ಬ್ಯಾಟಿಂಗ್ ಮಾಡಿದಾಗ, ದೊಡ್ಡ ಮೊತ್ತ ಗಳಿಸಬೇಕಿತ್ತು. ಆದರೆ, ಅದು ಸಾಧ್ಯವಾಗಲ್ಲಿ. ಆದರೂ, ಪಂದ್ಯವನ್ನು 15–16 ಓವರ್ಗಳವರೆಗೆ ತೆಗೆದುಕೊಂಡು ಹೋಗಿರುವುದು ಖುಶಿ ನೀಡಿದೆ’ ಎಂದು ಅವರು ಹೇಳಿದರು.

‘156 ರನ್ಗಳ ಸಾಧಾರಣ ಗುರಿ ಬೆನ್ನಟ್ಟುವಾಗ ಗುಜರಾತ್ ನಾಯಕ ಶುಭಮನ್ ಗಿಲ್ ಅವರು ಪವರ್ಪ್ಲೇನಲ್ಲೇ ಸ್ಫೋಟಕ ಬ್ಯಾಟಿಂಗ್ ಮೂಲಕ ನಮ್ಮ ಮೇಲೆ ಒತ್ತಡ ಹೇರಿದರು. ಆದರೂ, ನಮ್ಮ ಬೌಲರ್ಗಳು ಪಂದ್ಯವನ್ನು 16ನೇ ಓವರ್ ವರೆಗೆ ವಿಸ್ತರಿಸಿದ್ದು ಸಕಾರಾತ್ಮಕ ಬೆಳವಣಿಗೆ ಎಂದು ನಾನು ಭಾವಿಸುತ್ತೇನೆ’ ಎಂದಿದ್ದಾರೆ.

ಬ್ಯಾಟರ್ಗಳ ವೈಫಲ್ಯದ ಕುರಿತು ಮಾತನಾಡಿದ ಪಾಟಿದಾರ್, ‘ನಾವು ಮಧ್ಯಮ ಕ್ರಮಾಂಕದಲ್ಲಿ ಒಬ್ಬರ ಹಿಂದೆ ಒಬ್ಬರಂತೆ ವಿಕೆಟ್ ಒಪ್ಪಿಸಿರುವುದು ನಮ್ಮ ಹಿನ್ನಡೆಗೆ ಕಾರಣವಾಯಿತು’ ಎಂದರು.
.IPL: ಗುಜರಾತ್ ವಿರುದ್ಧ ಎಡವಿದ ಆರ್ಸಿಬಿ, ವಿಕೆಟ್ ಬೇಟೆಯಲ್ಲಿ ಭುವಿಗೆ ಅಗ್ರಸ್ಥಾನ.ತಂಡದ ಸೋಲಿಗೆ ಅವರೇ ಕಾರಣ: ಆತ್ಮಾವಲೋಕನ ಮಾಡಿಕೊಳ್ಳುತ್ತೇವೆ ಎಂದ RCB ನಾಯಕ.
ಪಂದ್ಯದಲ್ಲಿ ಮೂರು ವಿಕೆಟ್ ಪಡೆದು ಮಿಂಚಿದ ಭುವನೇಶ್ವರ ಕುಮಾರ್ ಕುರಿತು ಮಾತನಾಡಿದ ನಾಯಕ, ‘ಅವರು ಟಿ20 ಮಾದರಿಯ ಅನುಭವಿ ಬೌಲರ್ ಮತ್ತು ಅವರು ಮೊದಲಾರ್ಧದಲ್ಲಿ ಅದ್ಭುತವಾಗಿ ಬೌಲಿಂಗ್ ಮಾಡಿದರು. ಆದರೆ, ಕಡಿಮೆ ಮೊತ್ತ ಉಳಿಸಿಕೊಳ್ಳುವುದು ಸುಲಭ ಇರಲಿಲ್ಲ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.