‘ದ ಕಾಮನ್‌ವೆಲ್ತ್ ಆಫ್ ಕ್ರಿಕೆಟ್‘ ನವೆಂಬರ್‌ನಲ್ಲಿ ಬಿಡುಗಡೆ

ನವದೆಹಲಿ: ಇತಿಹಾಸಕಾರ, ಲೇಖಕ ರಾಮಚಂದ್ರ ಗುಹಾ ಅವರ, ಕ್ರಿಕೆಟ್ ವಿಷಯವಸ್ತುವಳಲ್ಲ ಹೊಸ ಕೃತಿ ನವೆಂಬರ್‌ನಲ್ಲಿ ಬಿಡುಗಡೆಯಾಗಲಿದೆ. ಭಾರತದಲ್ಲಿ ಕ್ರಿಕೆಟ್ ಬೆಳೆದುಬಂದ ಬಗೆ, ದೇಶಿ, ಪ್ರಾಂತೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ ಆಟಗಾರರ ಕುರಿತಾದ ಬರಹ, ಮಾಹಿತಿಯನ್ನು ಈ ಕೃತಿ ಒಳಗೊಂಡಿರಲಿದೆ.
‘ದ ಕಾಮನ್‌ವೆಲ್ತ್ ಆಫ್ ಕ್ರಿಕೆಟ್: ಎ ಲೈಫ್‌ಲಾಂಗ್ ಲವ್ ಅಫೇರ್ ವಿದ್ ದ ಮೋಸ್ಟ್ ಸಬ್ಟಲ್ ಆ್ಯಂಡ್ ಸೋಪಿಸ್ಟಿಕೆಟೇಡ್ ಗೇಮ್ ನೌನ್ ಟು ಹ್ಯೂಮನ್‌ಕೈಂಡ್‘ ಕೃತಿಯ ಹೆಸರು. ಹಾರ್ಪರ್‌ಕಾಲಿನ್ಸ್ ಇಂಡಿಯಾ ಹಾಗೂ ವಿಲಿಯಮ್ಸ್ ಕಾಲಿನ್ಸ್ ಇಂಡಿಯಾ ಪ್ರಕಾಶನ ಸಂಸ್ಥೆಗಳಿಂದ ಇದು ಪ್ರಕಟವಾಗಲಿದೆ.
ಭಾರತದಲ್ಲಿ ಉದಯನ್ ಮಿತ್ರಾ ಹಾಗೂ ಇಂಗ್ಲೆಂಡ್ ಹಾಗೂ ಕಾಮನ್‌ವೆಲ್ತ್ ದೇಶಗಳಲ್ಲಿ ವಿಲಿಮಮ್ಸ್ ಕಾಲಿನ್ಸ್ ಪ್ರಕಾಶನ ಸಂಸ್ಥೆಯ ನಿರ್ದೇಶಕಿ ಅರಾಬೆಲ್ಲಾ ಪೈಕ್ ಕೃತಿಯ ಪ್ರಕಾಶನದ ಹಕ್ಕುಗಳನ್ನು ಪಡೆದುಕೊಂಡಿದ್ದಾರೆ ಎಂದು ಹೇಳಿಕೆ ತಿಳಿಸಿದೆ.
’ಕೃತಿಯಲ್ಲಿ ನಿರೂಪಣೆಯು ಬಿಶನ್ ಸಿಂಗ್ ಬೇಡಿ ಮತ್ತು ಇಎಎಸ್ ಪ್ರಸನ್ನ ಅವರ ಸ್ಪಿನ್‌ನಂತೆ ಮೋಡಿಮಾಡುವಂತಿದೆ, ಗುಂಡಪ್ಪ ವಿಶ್ವನಾಥ್ ಅಥವಾ ವಿಜಯ್ ಹಜಾರೆ ಅವರ ಬ್ಯಾಟಿಂಗ್‌ನಂತೆ ಆಕರ್ಷಕವಾಗಿದೆ; ಇದು ಪ್ರಸ್ತುತ ಬಿಕ್ಕಟ್ಟಿನ ಸನ್ನಿವೇಶದಿಂದ ನಮ್ಮನ್ನು ಮಾಯಾ ಜಗತ್ತಿಗೆ ಕೊಂಡೊಯ್ಯುತ್ತದೆ‘ ಎಂದು ಪ್ರಕಾಶಕ ಉದಯನ್ ಮಿತ್ರಾ ಹೇಳಿದ್ದಾರೆ.
ಬಿಸಿಸಿಐ ಆಡಳಿತಗಾರ ಹುದ್ದೆಯಲ್ಲಿದ್ದ ಗುಹಾ ಅವರು, ಕ್ರಿಕೆಟ್ ಕುರಿತಾಗಿ ‘ಎ ಕಾರ್ನರ್ ಆಫ್ ಎ ಫಾರೆನ್ ಫೀಲ್ಡ್‘, ದ ಪಿಕಾಡರ್ ಬುಕ್ ಆಫ್ ಕ್ರಿಕೆಟ್‘, ಸ್ಪಿನ್ ಆ್ಯಂಡ್ ಅದರ್ ಟರ್ನ್ಸ್‘, ವಿಕೆಟ್ಸ್ ಇನ್ ದ ಈಸ್ಟ್‘ ಎಂಬ ಕೃತಿಗಳನ್ನು ಈಗಾಗಲೇ ರಚಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.