ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಂದ್ರಶೇಖರ್‌,ಮುದಾಸಿರ್‌ ಶತಕದ ಸೊಬಗು

ವೈ.ಎಸ್‌.ರಾಮಸ್ವಾಮಿ ಸ್ಮಾರಕ ಕ್ರಿಕೆಟ್‌ ಟೂರ್ನಿ
Last Updated 13 ಆಗಸ್ಟ್ 2019, 19:45 IST
ಅಕ್ಷರ ಗಾತ್ರ

ಬೆಂಗಳೂರು: ಚಂದ್ರಶೇಖರ್‌ (189) ಮತ್ತು ಮುದಾಸಿರ್‌ ಉದ್ದೀನ್‌ (124) ಅವರ ಆಕರ್ಷಕ ಶತಕಗಳ ಬಲದಿಂದ ಚನ್ನಪಟ್ಟಣದ ಸಿಲ್ಕಿ ಟೌನ್‌ ತಂಡ ವೈ.ಎಸ್‌.ರಾಮಸ್ವಾಮಿ ಸ್ಮಾರಕ ಕ್ರಿಕೆಟ್‌ ಟೂರ್ನಿಯ ಸ್ಟಾರ್‌ ಕ್ರಿಕೆಟರ್ಸ್‌ ಇಲೆವನ್ ಎದುರಿನ ಪಂದ್ಯದಲ್ಲಿ 203ರನ್‌ಗಳಿಂದ ಜಯಭೇರಿ ಮೊಳಗಿಸಿದೆ.

ಮಳೆಯ ಕಾರಣ 36 ಓವರ್‌ಗಳಿಗೆ ಸೀಮಿತಗೊಳಿಸಲಾಗಿದ್ದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಸಿಲ್ಕಿ ಟೌನ್‌ 4 ವಿಕೆಟ್‌ ಕಳೆದುಕೊಂಡು 351ರನ್‌ ಪೇರಿಸಿತು.

ಕಠಿಣ ಗುರಿ ಬೆನ್ನಟ್ಟಿದ ಸ್ಟಾರ್‌ ಕ್ರಿಕೆಟರ್ಸ್‌ 28.3 ಓವರ್‌ಗಳಲ್ಲಿ 148ರನ್‌ಗಳಿಗೆ ಹೋರಾಟ ಮುಗಿಸಿತು.

ಸಂಕ್ಷಿಪ್ತ ಸ್ಕೋರ್‌: ಸಿಲ್ಕಿ ಟೌನ್‌ ಕ್ಲಬ್‌, ಚನ್ನಪಟ್ಟಣ: 36 ಓವರ್‌ಗಳಲ್ಲಿ 4 ವಿಕೆಟ್‌ 351 (ಚಂದ್ರಶೇಖರ್‌ 189, ಮುದಾಸಿರ್‌ ಉದ್ದೀನ್‌ 124; ಆರ್‌.ಸುಪ್ರೀತ್‌ 71ಕ್ಕೆ2, ಸುಚಿಂದ್ರ 24ಕ್ಕೆ2).

ಸ್ಟಾರ್‌ ಕ್ರಿಕೆಟರ್ಸ್‌: 28.3 ಓವರ್‌ಗಳಲ್ಲಿ 148 (ಪ್ರಣವ್‌ 46, ಕಾರ್ತಿಕ್‌ 46; ರವಿ 55ಕ್ಕೆ3, ಶೈಲೇಂದ್ರ 25ಕ್ಕೆ2, ಪವನ್‌ 5ಕ್ಕೆ2). ಫಲಿತಾಂಶ: ಸಿಲ್ಕಿ ಟೌನ್‌ಗೆ 203ರನ್‌ ಗೆಲುವು.

ವೈ.ಎಂ.ಸಿ.ಎ, ಹೊನ್ನಾಳಿ: 22.3 ಓವರ್‌ಗಳಲ್ಲಿ 69 (ಅನಿರುದ್ಧ್‌ ಜೋಶಿ 35ಕ್ಕೆ3, ಪ್ರವೀಣ್‌ ದುಬೆ 13ಕ್ಕೆ3). ವಲ್ಚರ್ಸ್‌ ಕ್ಲಬ್‌: 5.1 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ 70 (ಮಸೂಕ್‌ ಹುಸೇನ್‌ ಔಟಾಗದೆ 40). ಫಲಿತಾಂಶ: ವಲ್ಚರ್ಸ್‌ ಕ್ಲಬ್‌ಗೆ 10 ವಿಕೆಟ್‌ ಗೆಲುವು.

ಫ್ರೆಂಡ್ಸ್‌ ಯೂನಿಯನ್‌ ಕ್ಲಬ್‌, ಅರಸಿಕೆರೆ: 22 ಓವರ್‌ಗಳಲ್ಲಿ 8 ವಿಕೆಟ್‌ಗೆ 71 (ಪೃಥ್ವಿ ರಾಜ್‌ 6ಕ್ಕೆ2, ವಿ.ವೈಶಾಖ್‌ 10ಕ್ಕೆ2). ಸೋಷಿಯಲ್‌ ಕ್ರಿಕೆಟರ್ಸ್‌: 5.5 ಓವರ್‌ಗಳಲ್ಲಿ 2 ವಿಕೆಟ್‌ಗೆ 72 (ಸ್ಟಾಲಿನ್‌ ಹೂವರ್‌ 33). ಫಲಿತಾಂಶ: ಸೋಷಿಯಲ್‌ ಕ್ರಿಕೆಟರ್ಸ್‌ಗೆ 8 ವಿಕೆಟ್‌ ಗೆಲುವು.

ಯಂಗ್‌ ಚಾಲೆಂಜಿಂಗ್‌ ಕ್ರಿಕೆಟರ್ಸ್‌: 19.4 ಓವರ್‌ಗಳಲ್ಲಿ 123 (ಆರ್ಯನ್‌ ರಾಯ್‌ 25ಕ್ಕೆ3, ಫೈಸಲ್‌ 26ಕ್ಕೆ2). ನ್ಯೂ ನ್ಯಾಷನಲ್‌ ಕ್ಲಬ್‌: 20 ಓವರ್‌ಗಳಲ್ಲಿ 8 ವಿಕೆಟ್‌ಗೆ 118 (ಆರ್ಯನ್‌ 50; ಭರತ್‌ 23ಕ್ಕೆ4). ಫಲಿತಾಂಶ: ಯಂಗ್‌ ಚಾಲೆಂಜಿಂಗ್‌ ಕ್ರಿಕೆಟರ್ಸ್‌ಗೆ 5ರನ್‌ ಗೆಲುವು.

ಜವಾಹರ ಸ್ಪೋರ್ಟ್ಸ್‌ ಕ್ಲಬ್‌, ಮಂಡ್ಯ: 34 ಓವರ್‌ಗಳಲ್ಲಿ 5 ವಿಕೆಟ್‌ಗೆ 220 (ಖಾದಿರ್‌ ಔಟಾಗದೆ 59). ಬಿಎಂಎಸ್‌ಸಿಇ: 31.5 ಓವರ್‌ಗಳಲ್ಲಿ 94 (ಸೂರಜ್‌ 9ಕ್ಕೆ2, ನಿತಿನ್‌ 19ಕ್ಕೆ3, ಸುರೇಂದ್ರ 23ಕ್ಕೆ2). ಫಲಿತಾಂಶ: ಜವಾಹರ ಕ್ಲಬ್‌ ತಂಡಕ್ಕೆ 126ರನ್‌ ಗೆಲುವು.

ಕ್ಯಾವಲಿಯರ್ಸ್‌ ಕ್ಲಬ್‌: 28 ಓವರ್‌ಗಳಲ್ಲಿ 7 ವಿಕೆಟ್‌ಗೆ 190. ಚಿಂತಾಮಣಿ ಸ್ಪೋರ್ಟ್ಸ್ ಸಂಸ್ಥೆ, ಚಿಂತಾಮಣಿ: 23.5 ಓವರ್‌ಗಳಲ್ಲಿ 6 ವಿಕೆಟ್‌ಗೆ 191. ಫಲಿತಾಂಶ: ಚಿಂತಾಮಣಿ ತಂಡಕ್ಕೆ 4 ವಿಕೆಟ್‌ ಗೆಲುವು.

ಮಲ್ಲೇಶ್ವರಂ ಯುನೈಟೆಡ್‌ ಕ್ಲಬ್‌: 33 ಓವರ್‌ಗಳಲ್ಲಿ 8 ವಿಕೆಟ್‌ಗೆ 286 (ಜೆ.ತೇಜಸ್‌ 106). ಜೈಹಿಂದ್‌ ಕ್ರಿಕೆಟರ್ಸ್‌: 18.4 ಓವರ್‌ಗಳಲ್ಲಿ 23 (ಆಶಿಶ್‌ ನಾಯಕ್‌ 4ಕ್ಕೆ5). ಫಲಿತಾಂಶ: ಮಲ್ಲೇಶ್ವರಂ ಯುನೈಟೆಡ್‌ಗೆ 263ರನ್‌ ಗೆಲುವು.

ರಾಜಾಜಿನಗರ ಕ್ರಿಕೆಟರ್ಸ್‌: 43 ಓವರ್‌ಗಳಲ್ಲಿ 6 ವಿಕೆಟ್‌ಗೆ 376 (ಡಿ.ಅವಿನಾಶ್‌ ಔಟಾಗದೆ 154, ಎಚ್‌.ಎಸ್‌.ಶರತ್‌ 53, ಮೀರ್‌ ಕಯಾನ್‌ ಅಬ್ಬಾಸ್‌ 72; ಶಶಾಂಕ್‌ ಪಾಟೀಲ 53ಕ್ಕೆ4). ಜೀಲನ್‌ಶಾಹಿ ಕ್ಲಬ್‌, ಕಲಬುರ್ಗಿ: 36.4 ಓವರ್‌ಗಳಲ್ಲಿ 121 (ಭವನ್‌ ಸಿಂಗ್‌ 60; ಎಚ್‌.ಎಸ್‌.ಶರತ್‌ 14ಕ್ಕೆ3). ಫಲಿತಾಂಶ: ರಾಜಾಜಿನಗರ ಕ್ರಿಕೆಟರ್ಸ್‌ಗೆ 255ರನ್‌ ಗೆಲುವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT