ಮಹಿಳಾ ತಂಡಕ್ಕೆ ಪೊವಾರ್‌ ಕೋಚ್‌

7

ಮಹಿಳಾ ತಂಡಕ್ಕೆ ಪೊವಾರ್‌ ಕೋಚ್‌

Published:
Updated:
Deccan Herald

ನವದೆಹಲಿ: ಹಿರಿಯ ಕ್ರಿಕೆಟಿಗ ರಮೇಶ್‌ ಪೊವಾರ್‌ ಅವರನ್ನು ಭಾರತ ಮಹಿಳಾ ಕ್ರಿಕೆಟ್‌ ತಂಡದ ಮುಖ್ಯ ಕೋಚ್‌ ಆಗಿ ನೇಮಿಸಲಾಗಿದೆ.

ಈ ವರ್ಷದ ನವೆಂಬರ್‌ನಲ್ಲಿ ವೆಸ್ಟ್‌ ಇಂಡೀಸ್‌ನಲ್ಲಿ ನಡೆಯುವ ಐಸಿಸಿ ವಿಶ್ವ ಟ್ವೆಂಟಿ–20 ಕ್ರಿಕೆಟ್‌ ಟೂರ್ನಿಯವರೆಗೂ ಅವರು ಈ ಹುದ್ದೆಯಲ್ಲಿ ಇರಲಿದ್ದಾರೆ.

40 ವರ್ಷ ವಯಸ್ಸಿನ ‍‍ಪೊವಾರ್‌, ಮುಂಬರುವ  ಶ್ರೀಲಂಕಾ ಮತ್ತು ಅಕ್ಟೋಬರ್‌ನಲ್ಲಿ ನಿಗದಿಯಾಗಿರುವ ವೆಸ್ಟ್‌ ಇಂಡೀಸ್‌ ಎದುರಿನ ಕ್ರಿಕೆಟ್‌ ಸರಣಿಗಳಲ್ಲಿ ತಂಡಕ್ಕೆ ಮಾರ್ಗದರ್ಶನ ನೀಡಲಿದ್ದಾರೆ.

‘ಪೊವಾರ್‌ ಅವರು ಈ ವರ್ಷದ ನವೆಂಬರ್‌ 30ರವರೆಗೆ ಮಹಿಳಾ ತಂಡದ ಮುಖ್ಯ ಕೋಚ್‌ ಆಗಿ ಕೆಲಸ ಮಾಡಲಿದ್ದಾರೆ’ ಎಂದು ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಯ (ಬಿಸಿಸಿಐ) ಕಾರ್ಯದರ್ಶಿ ಅಮಿತಾಭ್‌ ಚೌಧರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಮೊದಲು ಕೋಚ್‌ ಆಗಿದ್ದ ತುಷಾರ್‌ ಅರೋಥೆ ಅವರು ಹೋದ ತಿಂಗಳು ರಾಜೀನಾಮೆ ನೀಡಿದ್ದರು. ಹೀಗಾಗಿ ಪೊವಾರ್‌ ಅವರನ್ನು ಹಂಗಾಮಿ ಕೋಚ್‌ ಆಗಿ ನೇಮಿಸಲಾಗಿತ್ತು.

ಈ ತಿಂಗಳ ಆರಂಭದಲ್ಲಿ ಬಿಸಿಸಿಐ, ಕೋಚ್‌ ಹುದ್ದೆಗೆ ಅರ್ಜಿ ಆಹ್ವಾನಿಸಿತ್ತು. ಕರ್ನಾಟಕದ ಸುನೀಲ್‌ ಜೋಶಿ ಸೇರಿದಂತೆ ಹಲವರು ಅರ್ಜಿ ಸಲ್ಲಿಸಿದ್ದರು.

ಆಫ್‌ ಸ್ಪಿನ್ನರ್‌ ಪೊವಾರ್‌, 2004ರಿಂದ 2007ರವರೆಗೆ ಭಾರತ ತಂಡದ ಪರ ಆಡಿದ್ದರು. ಈ ಅವಧಿಯಲ್ಲಿ 31 ಏಕದಿನ ಮತ್ತು ಎರಡು ಟೆಸ್ಟ್‌ ಪಂದ್ಯಗಳಲ್ಲಿ ಕಣಕ್ಕಿಳಿದಿದ್ದ ಅವರು ಕ್ರಮವಾಗಿ 34 ಮತ್ತು ಆರು ವಿಕೆಟ್‌ ಉರುಳಿಸಿದ್ದಾರೆ. ಪ್ರಥಮ ದರ್ಜೆಯಲ್ಲಿ 148 ಪಂದ್ಯಗಳನ್ನು ಆಡಿ 31.31ರ ಸರಾಸರಿಯಲ್ಲಿ 470 ವಿಕೆಟ್‌ ಕಬಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !