ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಣಜಿ ಕ್ರಿಕೆಟ್: ಕುತೂಹಲದ ಕದನಕ್ಕೆ ಚಿನ್ನಸ್ವಾಮಿ ಸಜ್ಜು

ಶ್ರೇಯಸ್, ಗೌತಮ್ ಸ್ಪಿನ್ ಮೋಡಿ: ಕರ್ನಾಟಕದ ಗೆಲುವಿಗೆ ಬೇಕಿನ್ನೂ 139 ರನ್
Last Updated 17 ಜನವರಿ 2019, 17:33 IST
ಅಕ್ಷರ ಗಾತ್ರ

ಬೆಂಗಳೂರು:ನೂರಾಮೂವತ್ತೊಂಬತ್ತು ರನ್‌ಗಳು..ಏಳು ವಿಕೆಟ್‌ಗಳು.. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿಕ್ವಾರ್ಟರ್‌ಫೈನಲ್‌ನ ನಾಲ್ಕನೇ ದಿನ ವಾದ ಶುಕ್ರವಾರದ ಆಟವನ್ನು ರೋಚಕಗೊಳಿಸಿರುವ ಎರಡು ಪ್ರಮುಖ ಅಂಶಗಳು ಇವು.

ಆತಿಥೇಯ ಕರ್ನಾಟಕ ತಂಡವು 139 ರನ್‌ಗಳನ್ನು ಗಳಿಸಿದರೆ ಸೆಮಿ ಫೈನಲ್‌ ಪ್ರವೇಶಿಸುತ್ತದೆ. ಆದರೆ, ಗುರಿ ಮುಟ್ಟುವ ಮುನ್ನವೇ ತನ್ನ ಖಾತೆಯಲ್ಲಿ ಉಳಿದಿರುವ ಏಳು ವಿಕೆಟ್‌ಗಳನ್ನು ಕಳೆದುಕೊಂಡರೆ ರಾಜಸ್ಥಾನ ಎಂಟರ ಘಟ್ಟಕ್ಕೆ ಲಗ್ಗೆ ಹಾಕಲಿದೆ.

ಮೊದಲ ಇನಿಂಗ್ಸ್‌ನಲ್ಲಿ 39 ರನ್‌ಗಳ ಹಿನ್ನಡೆ ಅನುಭವಿಸಿದ್ದ ರಾಜಸ್ಥಾನ ತಂಡವು ಗುರುವಾರ ಕರ್ನಾಟಕಕ್ಕೆ 184 ರನ್‌ಗಳ ಗೆಲುವಿನ ಗುರಿ ನೀಡಿದೆ. ದಿನದಾಟದ ಕೊನೆಗೆ ಆತಿಥೇಯ ಬಳ ಗವು 18 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 45 ರನ್‌ ಗಳಿಸಿದೆ. ಕರುಣ್ ನಾಯರ್ (ಬ್ಯಾಟಿಂಗ್ 18) ಮತ್ತು ‘ನೈಟ್ ವಾಚಮನ್’ ರೋನಿತ್ ಮೋರೆ (ಬ್ಯಾಟಿಂಗ್ 5) ಕ್ರೀಸ್‌ನಲ್ಲಿದ್ದಾರೆ. ಮೊದಲ ಇನಿಂಗ್ಸ್‌ನಲ್ಲಿ ರೋನಿತ್ ಮತ್ತು ವಿನಯಕುಮಾರ್ ಅವರು ಕೊನೆಯ ವಿಕೆಟ್‌ಗೆ 97 ರನ್‌ ಕಲೆಹಾಕಿದ್ದರು. ಅದರಿಂದಾಗಿ ಆತಿಥೇಯರಿಗೆ ಅಲ್ಪ ಮುನ್ನಡೆ ಲಭಿಸಿತ್ತು.

ಆದರೆ ಬ್ಯಾಟ್ಸ್‌ಮನ್‌ಗಳ ಮೊಣ ಕಾಲು ಮಟ್ಟದೆತ್ತರಕ್ಕೆ ಪುಟಿದೇಳುತ್ತಿರುವ ಚೆಂಡು ಸ್ವಲ್ಪ ಏಮಾರಿದರೂ ಸ್ಟಂಪ್‌ ಎಗರಿಸುವ ಸಂಭವವೇ ಹೆಚ್ಚು. ಗುರುವಾರ ಒಂದೇ ದಿನ 13 ವಿಕೆಟ್‌ ಗಳು ಪತನಗೊಂಡಿವೆ. ತಾಳ್ಮೆ ಮತ್ತು ಎಚ್ಚರಿಕೆಯಿಂದ ಆಡಿದರೆ ಮಾತ್ರ ಬ್ಯಾಟ್ಸ್‌ಮನ್‌ಗಳಿಗೆ ಯಶಸ್ಸು ಸಾಧ್ಯ. ಪಿಚ್‌ ಮರ್ಮವನ್ನು ಸರಿಯಾಗಿ ಅರ್ಥ ಮಾಡಿಕೊಂಡಂತೆ ಬೌಲಿಂಗ್ ಮಾಡುತ್ತಿರುವ ಎದುರಾಳಿ ತಂಡದ ಬೌಲರ್‌ಗಳು ಬೆಳಗಿನ ಅವಧಿಯ ಲಾಭ ಪಡೆಯುವ ಛಲದಲ್ಲಿದ್ದಾರೆ.

ಆದರೆ ಎಂಟು ಬಾರಿ ರಣಜಿ ಚಾಂಪಿ ಯನ್ ಕರ್ನಾಟಕ ತನ್ನ ತವರಿನಂಗಳದಲ್ಲಿ ಗೆದ್ದೇ ತೀರುವ ಹಟದಲ್ಲಿದೆ. ದಾರಿ ಮಾತ್ರ ಸರಳವಲ್ಲ.

ಲೀಗ್‌ ಹಂತದಲ್ಲಿ ತಮ್ಮ ತಾಳ್ಮೆಯ ಬ್ಯಾಟಿಂಗ್ ಮೂಲಕ ರನ್‌ಗಳನ್ನು ಪೇರಿ ಸಿದ್ದ ಡೇಗಾ ನಿಶ್ಚಲ್ ಈ ಪಂದ್ಯದ ಎರಡೂ (6 ಮತ್ತು 1 ರನ್) ಇನಿಂಗ್ಸ್‌ಗಳಲ್ಲಿ ವೈಫಲ್ಯ ಅನುಭವಿಸಿದ್ದಾರೆ. ಸಮರ್ಥ್ (16 ರನ್) ಕೂಡ ಪೆವಿಲಿಯನ್‌ಗೆ ಮರಳಿದ್ದಾರೆ. ಮೊದಲ ಇನಿಂಗ್ಸ್‌ನಲ್ಲಿ ಎರಡು ಜೀವದಾನ ಪಡೆದು ಅರ್ಧಶತಕ ಹೊಡೆದಿದ್ದ ಕೆ.ವಿ. ಸಿದ್ಧಾರ್ಥ್ ಆಟ ಎರಡನೇ ಇನಿಂಗ್ಸ್‌ನಲ್ಲಿ ನಡೆಯಲಿಲ್ಲ.

‘ಇದೇನು ಕಷ್ಟದ ಗುರಿ ಅಲ್ಲ. ಅನುಭವಿ ಕರುಣ್, ಮನೀಷ್, ಶ್ರೇಯಸ್ ಗೋಪಾಲ್ ಇದ್ದಾರೆ. ಕೆಳ ಕ್ರಮಾಂಕದಲ್ಲಿ ಬಿ.ಆರ್. ಶರತ್ ಮತ್ತು ವಿನಯ್ ಕೂಡ ತಂಡವನ್ನು ಗೆಲುವಿನ ದಡ ಸೇರಿ ಸಬಲ್ಲರು’ ಎಂದು ದಿನದಾಟದ ನಂತರ ಸುದ್ದಿಗಾರೊಂದಿಗೆ ಮಾತ ನಾಡಿದ
ಕೆ. ಗೌತಮ್ ವಿಶ್ವಾಸ ವ್ಯಕ್ತಪಡಿಸಿದರು.

ಗೌತಮ್, ಶ್ರೇಯಸ್ ಮೋಡಿ: ಆತಿಥೇಯರಿಗೆ ದೊಡ್ಡ ಗುರಿ ನೀಡುವ ಛಲದೊಂದಿಗೆ ಕಣಕ್ಕಿಳಿದಿದ್ದ ರಾಜಸ್ಥಾನ ಬ್ಯಾಟಿಂಗ್ ಪಡೆಯನ್ನು ಸ್ಪಿನ್ ಜೋಡಿ ಕೆ. ಗೌತಮ್ (54ಕ್ಕೆ4) ಮತ್ತು ಶ್ರೇಯಸ್ ಗೋಪಾಲ್ (52ಕ್ಕೆ3) ಕಟ್ಟಿಹಾಕಿದರು.

ರಾಜಸ್ಥಾನ ತಂಡವು ಮೊದಲ ಇನಿಂಗ್ಸ್‌ನಲ್ಲಿ ಗಳಿಸಿದ್ದ 224 ರನ್‌ಗಳಿಗೆ ಉತ್ತರವಾಗಿ ಕರ್ನಾಟಕವು 263 ರನ್‌ ಪೇರಿಸಿತ್ತು. 39 ರನ್‌ಗಳ ಅಲ್ಪ ಮುನ್ನಡೆ ಗಳಿಸಿತ್ತು. ಎರಡನೇ ಇನಿಂಗ್ಸ್‌ನಲ್ಲಿ ನಾಯಕ ಮಹಿಪಾಲ್ ಲೊಮ್ರೊರ್ (42 ರನ್) ಮತ್ತು ರಾಬಿನ್ ಬಿಷ್ಠ್ (44 ರನ್) ತಾಳ್ಮೆಯ ಅಟದಿಂದ ತಂಡವು ಉತ್ತಮ ಮೊತ್ತ ಕಲೆ ಹಾಕುವತ್ತ ಹೆಜ್ಜೆ ಇಟ್ಟಿತ್ತು.

ಊಟಕ್ಕೂ ಮುನ್ನ ಗೌತಮ್ ಅವರು ಚೇತನ್ ಬಿಷ್ಠ್ (33) ಮತ್ತು ಮಹಿಪಾಲ್ ವಿಕೆಟ್‌ ಕಬಳಿಸಿದರು. ವಿರಾಮದ ನಂತರ ಗಟ್ಟಿಯಾಗಿ ನಿಂತು ಆಡುತ್ತಿದ್ದ ರಾಬಿನ್ ಮತ್ತು ಸಲ್ಮಾನ್ ಖಾನ್ (25 ರನ್) ತಮ್ಮ ಒಂದೇ ಓವರ್‌ನಲ್ಲಿ ಪೆವಿಲಿಯನ್‌ಗೆ ಕಳಿಸಿದ ಶ್ರೇಯಸ್ ಕುಣಿದಾಡಿದರು. 65ನೇ ಓವರ್‌ನಲ್ಲಿ ಗೌತಮ್, ದೀಪಕ್ ಚಾಹರ್ (22 ರನ್) ಮತ್ತು ಅನಿಕೇತ್ ಚೌಧರಿ ಅವರಿಬ್ಬರ ವಿಕೆಟ್‌ ಕಬಳಿಸಿದರು. ನಂತರ ರಾಜೇಶ್ ಬಿಷ್ಣೋಯಿ ವಿಕೆಟ್‌ ಗಳಿಸಿದ ಮಿಥುನ್ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 300 ವಿಕೆಟ್‌ ಪಡೆದ ಸಾಧನೆ ಮಾಡಿದರು.

ಮೊದಲ ಇನಿಂಗ್ಸ್

ರಾಜಸ್ಥಾನ 224

ಕರ್ನಾಟಕ 263

ಎರಡನೇ ಇನಿಂಗ್ಸ್

ರಾಜಸ್ಥಾನ: 222 (67.2 ಓವರ್‌ಗಳಲ್ಲಿ)

ಅಮಿತ್ ಗೌತಮ್ ಸಿ ಶ್ರೇಯಸ್ ಗೋಪಾಲ್ ಬಿ ಅಭಿಮನ್ಯು ಮಿಥುನ್24

ಚೇತನ್ ಬಿಷ್ಠ್ ಸಿ ಶರತ್ ಬಿ ಗೌತಮ್33

ಮಹಿಪಾಲ್ ಲೊಮ್ರೊರ್ ಸಿ ಶರತ್ ಬಿ ಗೌತಮ್42

ರಾಬಿನ್ ಬಿಷ್ಠ್ ಬ್ಯಾಟಿಂಗ್06

ಅಶೋಕ ಮನೇರಿಯಾ ಬಿ ರೋನಿತ್ ಮೋರೆ04

ಸಲ್ಮಾನ್ ಖಾನ್ ಎಲ್‌ಬಿಡಬ್ಲ್ಯು ಶ್ರೇಯಸ್ ಗೋಪಾಲ್25

ರಾಜೇಶ್ ಬಿಷ್ಣೋಯಿ ಸಿ ಶ್ರೀನಿವಾಸ್ ಶರತ್ (ಬದಲೀ ವಿಕೆಟ್‌ಕೀಪರ್) ಬಿ ಅಭಿಮನ್ಯು ಮಿಥುನ್12

ದೀಪಕ್ ಚಾಹರ್ ಸಿ ಸಮರ್ಥ್ ಬಿ ಕೃಷ್ಣಪ್ಪ ಗೌತಮ್00

ಅನಿಕೇತ್ ಚೌಧರಿ ಸಿ ಸಮರ್ಥ್ ಬಿ ಕೃಷ್ಣಪ್ಪ ಗೌತಮ್00

ತನ್ವೀರ್ ಉಲ್ ಹಕ್ ಔಟಾಗದೆ00

ಇತರೆ: (ಬೈ 4, ಲೆಗ್‌ಬೈ 12)16

ವಿಕೆಟ್ ಪತನ: 1–35 (ಅಮಿತ್; 13.4), 2–107(ಚೇತನ್; 30.3), 3–118 (ಮಹಿಪಾಲ್; 34.4), 4–123 (ಅಶೋಕ್; 35.5). 5–186 (ರಾಬಿನ್; 55.2), 6–187 (ಖಾನ್;55.6), 7–187 (ದೀಪಕ್; 57.3), 8–218 (ರಾಹುಲ್;64.5), 9–218 (ಚೌಧರಿ;64.6), 10–222 (ರಾಜೇಶ್; 67.2).

ಬೌಲಿಂಗ್

ಕೃಷ್ಣಪ್ಪ ಗೌತಮ್ 19–1–54–4, ಅಭಿಮನ್ಯು ಮಿಥುನ್ 11.2–2–26–2, ಆರ್. ವಿನಯಕುಮಾರ್ 9–4–23–0, ರೋನಿತ್ ಮೋರೆ 11–1–44–1, ಶ್ರೇಯಸ್ ಗೋಪಾಲ್ 14–1–52–3, ಕೆ.ವಿ. ಸಿದ್ಧಾರ್ಥ್ 3–2–7–0

ಕರ್ನಾಟಕ

3ಕ್ಕೆ45 (18 ಓವರ್‌ಗಳಲ್ಲಿ)

ಆರ್. ಸಮರ್ಥ್ ಎಲ್‌ಬಿಡಬ್ಲ್ಯು ಬಿ ಮಹಿಪಾಲ್ ಲೊಮ್ರೊರ್16

ಡೇಗಾ ನಿಶ್ಚಲ್ ಬಿ ಅನಿಕೇತ್ ಚೌಧರಿ01

ಕೆ.ವಿ. ಸಿದ್ಧಾರ್ಥ್ ಸಿ ಚೇತನ್ ಬಿಷ್ಠ್ ಬಿ ಅನಿಕೇತ್ ಚೌಧರಿ05

ಕರುಣ್ ನಾಯರ್ ಬ್ಯಾಟಿಂಗ್18

ರೋನಿತ್ ಮೋರೆ ಬ್ಯಾಟಿಂಗ್05

ವಿಕೆಟ್ ಪತನ: 1–6 (ನಿಶ್ಚಲ್; 1.5), 2–14 (ಸಿದ್ಧಾರ್ಥ್; 5.3), 3–40 (ಸಮರ್ಥ್; 16.3)

ಬೌಲಿಂಗ್

ದೀಪಕ್ ಚಹರ್ 4–0–11–0, ಅನಿಕೇತ್ ಚೌಧರಿ 6–0–9–2, ತನ್ವೀರ್ ಉಲ್ ಹಕ್ 4–0–14–0, ರಾಹುಲ್ ಚಾಹರ್ 3–0–9–0, ಮಹಿಪಾಲ್ ಲೊಮ್ರೊರ್ 1–0–2–1.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT