ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಣಜಿ ಕ್ರಿಕೆಟ್‌: ಸಿದ್ಧಾರ್ಥ್ ಶತಕದ ಬಲದಿಂದ ಉತ್ತಮ ಸ್ಥಿತಿಯಲ್ಲಿ ಕರ್ನಾಟಕ

Last Updated 30 ಡಿಸೆಂಬರ್ 2018, 12:36 IST
ಅಕ್ಷರ ಗಾತ್ರ

ಬೆಂಗಳೂರು: ಕೃಷ್ಣಮೂರ್ತಿ ವೆಂಕಟೇಶ್ ಸಿದ್ಧಾರ್ಥ್ ಹೊಡೆದ ಶತಕದ ಬಲದಿಂದ ಕರ್ನಾಟಕ ತಂಡವು ಆಲೂರಿನ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಭಾನುವಾರ ಆರಂಭವಾದ ರಣಜಿ ಪಂದ್ಯದಲ್ಲಿ ಛತ್ತೀಸಗಡದ ವಿರುದ್ಧ ಉತ್ತಮ ಸ್ಥಾನದಲ್ಲಿದೆ.

ಚಹಾ ವಿರಾಮದ ವೇಳೆಗೆ ತಂಡವು ಚಹಾ ವಿರಾಮ: 65 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 175 ರನ್ ಗಳಿಸಿತು. ಸಿದ್ಧಾರ್ಥ್ (ಬ್ಯಾಟಿಂಗ್ 103; 181 ಎಸೆತ; 214 ನಿಮಿಷ,11ಬೌಂಡರಿ, 2 ಸಿಕ್ಸರ್) ಮತ್ತು ಆರಂಭಿಕ ಆಟಗಾರ ಡಿ. ನಿಶ್ಚಲ್ (ಬ್ಯಾಟಿಂಗ್ 61 ರನ್) ಅವರಿಬ್ಬರು ಮುರಿಯದ ಮೂರನೇ ವಿಕೆಟ್ ಜೊತೆಯಾಟದಲ್ಲಿ 159 ರನ್‌ ಗಳಿಸಿದ್ದಾರೆ.

ಸಿದ್ಧಾರ್ಥ್ ಅವರು ಈ ಇನಿಂಗ್ಸ್‌ನಲ್ಲಿ ಒಂದು ‘ಜೀವದಾನ’ ಪಡೆದ ಅದೃಷ್ಟಶಾಲಿಯೂ ಹೌದು. ಅವರು 94 ರನ್‌ ಗಳಿಸಿದ್ದಾಗ ವಿಶಾಲ್ ಸಿಂಗ್ ಬೌಲಿಂಗ್‌ನಲ್ಲಿ ಎಲ್‌ಬಿಡಬ್ಲ್ಯು ಆಗಿದ್ದರು. ಅಂಪೈರ್ ಕೂಡ ಔಟ್ ನೀಡಿದ್ದರು. ನಂತರ ವಿಡಿಯೊ ಪರಿಶೀಲನೆ ನಡೆಸಿದ ಮೂರನೇ ಅಂಪೈರ್ ನಾಟ್‌ಔಟ್ ನೀಡಿದ್ದರು.

ಸಿದ್ಧಾರ್ಥ್ ಈ ಋತುವಿನಲ್ಲಿ ಆರು ಪಂದ್ಯಗಳನ್ನು ಆಡಿದ್ದಾರೆ. ಅದರಲ್ಲಿ ಇದು ಎರಡನೇ ಶತಕವಾಗಿದೆ. ಮೂರು ಅರ್ಧಶತಕಗಳನ್ನು ಹೊಡೆದಿದ್ದಾರೆ.

ನಂತರ ಎಚ್ಚರಿಕೆಯಿಂದ ಆಡಿದ ಸಿದ್ಧಾರ್ಥ್ ಶತಕ ದಾಖಲಿಸಿದರು. ಇನ್ನೊಂದುಬದಿಯಲ್ಲಿ ಅಪಾರ ತಾಳ್ಮೆಯಿಂದ ಆಡಿದ ನಿಶ್ಚಲ್ ಅರ್ಧಶತಕ ಪೂರೈಸಲು 164 ಎಸೆತಗಳನ್ನು ತೆಗೆದುಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT