ರಣಜಿ ಟ್ರೋಫಿ ಕ್ರಿಕೆಟ್: ಸೆಮಿಫೈನಲ್‌ಗೆ ಕೇರಳ

7

ರಣಜಿ ಟ್ರೋಫಿ ಕ್ರಿಕೆಟ್: ಸೆಮಿಫೈನಲ್‌ಗೆ ಕೇರಳ

Published:
Updated:

ವಯನಾಡ್: ಕೇರಳ ಕ್ರಿಕೆಟ್ ತಂಡವು ಗುರುವಾರ ಹೊಸ ಇತಿಹಾಸ ಬರೆಯಿತು. ಇದೇ ಮೊದಲ ಬಾರಿಗೆ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಸೆಮಿಫೈನಲ್‌ ಪ್ರವೇಶಿಸಿತು. 

ವಯನಾಡಿನ ಕೃಷ್ಣಗಿರಿ ಕ್ರೀಡಾಂಗಣದಲ್ಲಿ ನಡೆದ ಕ್ವಾರ್ಟರ್‌ಫೈನಲ್‌ನಲ್ಲಿ ಬೇಸಿಲ್ ಥಂಪಿ (27ಕ್ಕೆ5) ಅಮೋಘ ಬೌಲಿಂಗ್ ಬಲದಿಂದ ಕೇರಳವು 113 ರನ್‌ಗಳಿಂದ ಗುಜರಾತ್ ಎದುರು ಜಯಿಸಿತು. ಮೂರನೇ ದಿನವೇ ಈ ಸಾಧನೆ ಮಾಡಿ ಬೀಗಿತು.

194 ರನ್‌ಗಳ ಗೆಲುವಿನ ಗುರಿ ಬೆನ್ನಟ್ಟಿದ್ದ ಗುಜರಾತ್ ತಂಡವು 31.3 ಓವರ್‌ಗಳಲ್ಲಿ 81 ರನ್‌ ಗಳಿಸಿ ಪತನ ಕಂಡಿತು.

ನಾಗಪುರದಲ್ಲಿ ನಡೆಯುತ್ತಿರುವ ಇನ್ನೊಂದು ಕ್ವಾರ್ಟರ್‌ಫೈನಲ್‌ನಲ್ಲಿ ವಿದರ್ಭ ತಂಡವು ಉತ್ತರಾಖಂಡದ ವಿರುದ್ಧ ಮೊದಲ ಇನಿಂಗ್ಸ್‌ ಮುನ್ನಡೆ ಸಾಧಿಸಿದೆ. ಸಂಜಯ್ ರಾಮಸ್ವಾಮಿ (141 ರನ್) ಶತಕ ಮತ್ತು ವಾಸೀಂ ಜಾಫರ್ (206ರನ್) ದ್ವಿಶತಕದ ಬಲದಿಂದ  ವಿದರ್ಭ ತಂಡವು 204 ರನ್‌ಗಳ ಮುನ್ನಡೆ ಸಾಧಿಸಿದೆ. ಉತ್ತರಾಖಂಡದ 355 ರನ್‌ಗಳಿಗೆ ಉತ್ತರವಾಗಿ 158.5 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 559 ರನ್‌ ಗಳಿಸಿದೆ. ಶತಕದ ಹೊಸ್ತಿಲಲ್ಲಿರುವ ಅಕ್ಷಯ್ ವಾಡಕರ್ (ಬ್ಯಾಟಿಂಗ್ 98) ಕ್ರೀಸ್‌ನಲ್ಲಿದ್ದಾರೆ.

ಲಖನೌದಲ್ಲಿ ನಡೆಯುತ್ತಿರುವ ಮೂರನೇ ಕ್ವಾರ್ಟರ್‌ಫೈನಲ್‌ನಲ್ಲಿ ಉತ್ತರಪ್ರದೇಶ ತಂಡವು ಸೌರಾಷ್ಟ್ರದ ಎದುರು ಮೊದಲ ಇನಿಂಗ್ಸ್‌ ಮುನ್ನಡೆ ಗಳಿಸಿದೆ.

ಸಂಕ್ಷಿಪ್ತ ಸ್ಕೋರು

ಮೊದಲ ಇನಿಂಗ್ಸ್: ಕೇರಳ: 185, ಗುಜರಾತ್:162 . ಎರಡನೇ ಇನಿಂಗ್ಸ್: ಕೇರಳ: 171. ಗುಜರಾತ್: 31.3 ಓವರ್‌ಗಳಲ್ಲಿ 81 (ರಾಹುಲ್ ಶಾ 33, ಧ್ರುವ್ ರಾವಳ್ 17, ಬೇಸಿಲ್ ಥಂಪಿ 27ಕ್ಕೆ5, ವರಿಯರ್ 30ಕ್ಕೆ4) ಫಲಿತಾಂಶ: ಕೇರಳ ತಂಡಕ್ಕೆ 113 ರನ್‌ಗಳ ಜಯ. (ಸ್ಥಳ: ವಯನಾಡು).

ಉತ್ತರಾಖಂಡ: ಮೊದಲ ಇನಿಂಗ್ಸ್: 355, ವಿದರ್ಭ: 158.5 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 559 ( ಸಂಜಯ್ ರಾಮಸ್ವಾಮಿ 141, ವಾಸೀಂ ಜಾಫರ್ 206, ಅಕ್ಷಯ್ ವಾಡಕರ್ ಬ್ಯಾಟಿಂಗ್ 98, ಸರವಟೆ ಬ್ಯಾಟಿಂಗ್ 57, ಡಿ.ಕೆ. ಶರ್ಮಾ 87ಕ್ಕೆ2, ಮಯಂಕ್ ಮಿಶ್ರಾ 101ಕ್ಕೆ2) ಸ್ಥಳ: ನಾಗಪುರ.

ಉತ್ತರಪ್ರದೇಶ: ಮೊದಲ ಇನಿಂಗ್ಸ್  385; ಸೌರಾಷ್ಟ್ರ: 66.4 ಓವರ್‌ಗಳಲ್ಲಿ208; ಎರಡನೇ ಇನಿಂಗ್ಸ್: ಉತ್ತರಪ್ರದೇಶ: 66 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 172 (ರಾಹುಲ್ ರಾವತ್ 37, ಮೊಹಮ್ಮದ್ ಸೈಫ್ 48, ಪ್ರಿಯಂ ಗಾರ್ಗ್ 25, ಉಪೇಂದ್ರ ಯಾದವ್ ಬ್ಯಾಟಿಂಗ್ 27, ಚೇತನ್ ಸಕಾರಿಯಾ 29ಕ್ಕೆ3, ಧರ್ಮೇಂದ್ರಸಿಂಹ ಜಡೇಜ 53ಕ್ಕೆ4)

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !