ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಣಜಿ ಕ್ರಿಕೆಟ್: ಮಿಥುನ್ ಮಿಂಚಿನ ಬ್ಯಾಟಿಂಗ್, ಮನೀಷ್ ಶತಕ

Last Updated 2 ಜನವರಿ 2019, 6:42 IST
ಅಕ್ಷರ ಗಾತ್ರ

ಬೆಂಗಳೂರು: ಮನೀಷ್ ಪಾಂಡೆ (ಅಜೇಯ 102 ) ಶತಕದ ಬಲದಿಂದ ಕರ್ನಾಟಕ ತಂಡವು ಆಲೂರು ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಎಲೀಟ್ ಗುಂಪಿನ ಪಂದ್ಯದಲ್ಲಿ ಛತ್ತೀಸಗಡ ತಂಡಕ್ಕೆ 355 ರನ್‌ಗಳ ಗೆಲುವಿನ ಗುರಿ ನೀಡಿದೆ.

ರಾಮಪ್ರಸಾದ್ ಓವಲ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದ ಕೊನೆಯ ದಿನವಾದ ಬುಧವಾರ ಬೆಳಿಗ್ಗೆ ಮನೀಷ್ ಪಾಂಡೆ ಮತ್ತು ಅಭಿಮನ್ಯು ಮಿಥುನ್ (ಔಟಾಗದೆ 33) ಅವರ ಅಬ್ಬರದ ಬ್ಯಾಟಿಂಗ್‌ನಿಂದ ಎರಡನೇ ಇನಿಂಗ್ಸ್‌ನಲ್ಲಿ 49.3 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 219 ರನ್‌ಗಳನ್ನು ಗಳಿಸಿ ಡಿಕ್ಲೆರ್ ಮಾಡಿಕೊಂಡಿತ್ತು. ಮನೀಷ್ ಬಳಗವು ಮೊದಲ ಇನಿಂಗ್ಸ್‌ನಲ್ಲಿ 135 ರನ್‌ಗಳ ಮುನ್ನಡೆ ಗಳಿಸಿತ್ತು.

ಮಂಗಳವಾರ ದಿನದಾಟದ ಅಂತ್ಯಕ್ಕೆ ಕರ್ನಾಟಕ ತಂಡವು 3 ವಿಕೆಟ್‌ಗಳಿಗೆ 113 ರನ್‌ಗಳನ್ನು ಗಳಿಸಿತ್ತು. ಬುದವಾರ ಬೆಳಿಗ್ಗೆ 80 ನಿಮಿಷಗಳವರೆಗೆ ಆಡಿದ ಕರ್ನಾಟಕ ಬ್ಯಾಟ್ಸ್‌ಮನ್‌ಗಳು 106 ರನ್‌ಗಳನ್ನು ಗಳಿಸಿತು. ಮಿಥುನ್ ಮೂರು ಬೌಂಡರಿ ಮತ್ತು ಎರಡು ಸಿಕ್ಸರ್ ಬಾರಿಸಿ 17 ಎಸೆತಗಳಲ್ಲಿ 33 ರನ್‌ ಗಳಿಸಿದರು.

ಮೊದಲ ಇನಿಂಗ್ಸ್ ಕರ್ನಾಟಕ 418 ಛತ್ತೀಸಗಡ 283 ಎರಡನೇ ಇನಿಂಗ್ಸ್ ಕರ್ನಾಟಕ 7ಕ್ಕೆ 219 ಡಿಕ್ಲೆರ್ಡ್ (49.3 ಓವರ್‌) ಮನೀಷ್ ಪಾಂಡೆ ಔಟಾಗದೆ 102 ಶ್ರೇಯಸ್ ಗೋಪಾಲ್ ರನ್‌ಔಟ್ ಹರಪ್ರೀತ್ ಸಿಂಗ್ ಭಾಟಿಯಾ 22 ಕೆ. ಗೌತಮ್ ಸಿ ವಿಶಾಲ್ ಸಿಂಗ್ ಬಿ ಓಂಕಾರ್ ವರ್ಮಾ 20 ಆರ್. ವಿನಯಕುಮಾರ್ ಬಿ ಪಂಕಜ್ ರಾವ್ 07 ಅಭಿಮನ್ಯು ಮಿಥುನ್ ಔಟಾಗದೆ 33

ಇತರೆ: 05 (ಬೈ 4, ಲೆಗ್‌ಬೈ 1) ವಿಕೆಟ್ ಪತನ: 5–119 (ಶ್ರೇಯಸ್; 35.2), 6–162 (ಗೌತಮ್; 43.3), 7–169 (ವಿನಯ್‌; 44.5).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT