ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಣಜಿ ಕ್ರಿಕೆಟ್: ಸೌರಾಷ್ಟ್ರಕ್ಕೆ ಸೋಲುಣಿಸಿ ಫೈನಲ್‌ ಗೆದ್ದ ಫಜಲ್‌ ಪಡೆ

ವಿದರ್ಭಕ್ಕೆ ಸತತ ಎರಡನೇ ಪ್ರಶಸ್ತಿ
Last Updated 7 ಫೆಬ್ರುವರಿ 2019, 9:35 IST
ಅಕ್ಷರ ಗಾತ್ರ

ನಾಗಪುರ:ಇಲ್ಲಿನ ಜಾಮ್ತ ಕ್ರೀಡಾಂಗಣದಲ್ಲಿ ಗುರುವಾರ ಮುಕ್ತಾಯವಾದ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಸೌರಾಷ್ಟ್ರ ತಂಡವನ್ನು 78ರನ್‌ ಅಂತರದಿಂದ ಮಣಿಸಿದಫೈಜ್‌ ಫಜಲ್‌ ನಾಯಕತ್ವದ ವಿದರ್ಭ ತಂಡ ಸತತ ಎರಡನೇ ಸಲ ಪ್ರಶಸ್ತಿ ಗೆದ್ದುಕೊಂಡಿತು.

ಫೆಬ್ರುವರಿ 3ರಂದು(ಭಾನುವಾರ) ಆರಂಭವಾದ ಪಂದ್ಯದಲ್ಲಿಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ್ದ ವಿದರ್ಭ 312ರನ್‌ಗಳಿಸಿ ಆಲೌಟ್‌ ಆಗಿತ್ತು. ಬಳಿಕ ಸೌರಾಷ್ಟ್ರ ಪಡೆಯನ್ನು 307ರನ್‌ಗೆ ನಿಯಂತ್ರಿಸಿತ್ತು. 5ರನ್‌ ಮುನ್ನಡೆಯೊಂದಿಗೆ ಎರಡನೇ ಇನಿಂಗ್ಸ್‌ ಆರಂಭಿಸಿದ್ದ ಫಜಲ್‌ ಪಡೆ ಬೃಹತ್‌ ಮೊತ್ತ ಕಲೆಹಾಕುವಲ್ಲಿ ವಿಫಲವಾಯಿತು. ಕೇವಲ 200 ರನ್‌ಗಳಿಗೆ ಸರ್ವಪತನ ಕಂಡು ಸೋಲಿನ ಆತಂಕಕ್ಕೆ ಸಿಲುಕಿತ್ತು.

ಕ್ವಾರ್ಟರ್‌ಫೈನಲ್‌ನಲ್ಲಿ ಉತ್ತರಪ್ರದೇಶ ಎದುರು 372ರನ್‌ಗಳ ಬೃಹತ್‌ ಮೊತ್ತ ಬೆನ್ನಟ್ಟಿ ಗೆದ್ದು ದಾಖಲೆ ನಿರ್ಮಿಸಿದ್ದ ಸೌರಾಷ್ಟ್ರ, ಸೆಮಿಫೈನಲ್‌ನಲ್ಲಿಕರ್ನಾಟಕ ನೀಡಿದ್ದ 279ರನ್‌ ಗುರಿಯನ್ನೂ ನಿರಾಯಾಸವಾಗಿ ತಲುಪಿತ್ತು. ಹೀಗಾಗಿ ವಿದರ್ಭ ನೀಡಿದ್ದ 206ರನ್‌ ಗುರಿ ಸೌರಾಷ್ಟ್ರಕ್ಕೆ ಸಾಟಿಯಾಗಲಾರದು ಎಂಬ ಲೆಕ್ಕಾಚಾರವಿತ್ತು. ಅದನ್ನು ಫೈಜ್ ಪಡೆಯ ಬೌಲರ್‌ಗಳು ಸುಳ್ಳಾಗಿಸಿದರು.

ಮೊದಲ ಇನಿಂಗ್ಸ್‌ನಲ್ಲಿ ಐದು ವಿಕೆಟ್‌ ಕಬಳಿಸಿದ್ದ ಎಡಗೈ ಸ್ಪಿನ್ನರ್‌ ಆದಿತ್ಯ ಸರವಟೆಗೆ ಎರಡನೇ ಇನಿಂಗ್ಸ್‌ನಲ್ಲಿಯೂ ಕೈಚಳಕ ತೋರಿ ಆರು ವಿಕೆಟ್‌ ಉರುಳಿಸಿದರು. ಅವರಿಗೆ ಎರಡೂ ಇನಿಂಗ್ಸ್‌ಗಳಲ್ಲಿ ಉತ್ತಮ ಬೆಂಬಲ ನೀಡಿದಅಕ್ಷಯ್ ವಾಖರೆ ಕ್ರಮವಾಗಿ 4 ಮತ್ತು 3 ವಿಕೆಟ್‌ ಪಡೆದು ಮಿಂಚಿದರು.

ಸೌರಾಷ್ಟ್ರ ಪರ ವಿಶ್ವರಾಜ್‌ ಜಡೇಜಾ(52ರನ್‌) ಹೊರತುಪಡಿಸಿ ಉಳಿದ ಆಟಗಾರರಿಂದ ಸಾಮರ್ಥ್ಯಕ್ಕೆ ತಕ್ಕ ಆಟ ಮೂಡಿಬರಲಿಲ್ಲ. ನಿರಂತರವಾಗಿ ವಿಕೆಟ್‌ ಒಪ್ಪಿಸಿದ ಜಯದೇವ್‌ ಉನದ್ಕಟ್‌ ಬಳಗದ ಬ್ಯಾಟ್ಸ್‌ಮನ್‌ಗಳು ತಂಡದ ಮೊತ್ತ 127ರನ್‌ ಆಗುವ ವೇಳೆಗೆ ಆಲೌಟ್‌ ಆದರು.

ಸಂಕ್ಷಿಪ್ತ ಸ್ಕೋರ್‌

ಮೊದಲ ಇನಿಂಗ್ಸ್‌

ವಿದರ್ಭ:312ರನ್‌ ಗಳಿಗೆ ಆಲೌಟ್‌

ಸೌರಾಷ್ಟ್ರ:307ರನ್‌ ಗಳಿಗೆ ಆಲೌಟ್‌

ಎರಡನೇ ಇನಿಂಗ್ಸ್‌

ವಿದರ್ಭ:200ರನ್‌ ಗಳಿಗೆ ಆಲೌಟ್‌

ಸೌರಾಷ್ಟ್ರ:127ರನ್‌ ಗಳಿಗೆ ಆಲೌಟ್‌

ಫಲಿತಾಂಶ: ವಿದರ್ಭಕ್ಕೆ78ರನ್‌ ಅಂತರದ ಜಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT