ಬುಧವಾರ, ಏಪ್ರಿಲ್ 1, 2020
19 °C

ರಣಜಿ: ಗುಜರಾತ್‌ ಬೃಹತ್‌ ಮೊತ್ತ

ಪಿಟಿಐ Updated:

ಅಕ್ಷರ ಗಾತ್ರ : | |

ವಲ್ಸದ್‌: ಕೆಳಕ್ರಮಾಂಕದಲ್ಲಿ ರೂಷ್‌ ಕಲೇರಿಯಾ (ಅಜೇಯ 118) ಅವರ ಶತಕ ಮತ್ತು ಅಕ್ಷರ್‌ ಪಟೇಲ್‌ (80) ಅವರ ಭರ್ಜರಿ ಆಟದ ನೆರವಿನಿಂದ ಗುಜರಾತ್‌ ತಂಡ ವಲ್ಸದ್‌ನಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ಶುಕ್ರವಾರ 8 ವಿಕೆಟ್‌ಗೆ 602 ರನ್‌ ಗಳಿಸಿ ಮೊದಲ ಇನಿಂಗ್ಸ್‌ ಡಿಕ್ಲೇರ್ಡ್‌ ಮಾಡಿಕೊಂಡಿದೆ. 

ಎರಡನೇ ದಿನದಾಟ ಮುಗಿದಾಗ ಗೋವಾ 2 ವಿಕೆಟ್‌ಗೆ 46 ರನ್‌ ಗಳಿಸಿದೆ. 

ಸ್ಕೋರುಗಳು: ಗುಜರಾತ್‌: 161.3 ಓವರುಗಳಲ್ಲಿ 8 ವಿಕೆಟ್‌ಗೆ 602 ಡಿಕ್ಲೇರ್ಡ್‌ (ಪಾರ್ಥಿವ್‌ ಪಟೇಲ್ 124, ರೂಷ್‌ ಕಲೇರಿಯಾ ಔಟಾಗದೇ 118, ಅಕ್ಷರ್  ಪಟೇಲ್‌ 80, ಸಿ.ಟಿ.ಗಜ 56; ಫೆಲಿಕ್ಸ್‌ ಅಲೆಮಾವೊ 86ಕ್ಕೆ3); ಗೋವಾ: 16 ಓವರುಗಳಲ್ಲಿ 2 ವಿಕೆಟ್‌ಗೆ 46 (ಅಮಿತ್ ವರ್ಮಾ ಬ್ಯಾಟಿಂಗ್‌ 31).

ಹಿಡಿತ ಕಳೆದುಕೊಂಡ ಒಡಿಶಾ: ಆಂತಿಮ ಒಂದು ಗಂಟೆಯ ಅವಧಿಯಲ್ಲಿ ಒಡಿಶಾ ತಂಡ ಮೂರು ವಿಕೆಟ್‌ಗಳನ್ನು ಕಳೆದುಕೊಳ್ಳುವ ಮೂಲಕ ಬಂಗಾಳ ವಿರುದ್ಧದ  ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ಮೇಲುಗೈ ಪಡೆಯುವ ಅವಕಾಶ ಕಳೆದುಕೊಂಡಿತು. ಬಂಗಾಳದ 332 ರನ್‌ಗಳಿಗೆ ಉತ್ತರವಾಗಿ ಶುಕ್ರವಾರ ಎರಡನೇ  ದಿನದಾಟ ಮುಗಿದಾಗ ಒಡಿಶಾ ಮೊದಲ ಇನಿಂಗ್ಸ್‌ನಲ್ಲಿ 4 ವಿಕೆಟ್‌ಗೆ 151 ರನ್‌ ಗಳಿಸಿದೆ.

ಆತಿಥೇಯರು ಒಂದು ಹಂತದಲ್ಲಿ ಒಂದು ವಿಕೆಟ್‌ಗೆ 135 ರನ್‌ ಗಳಿಸಿ ಉತ್ತಮ ಸ್ಥಿತಿಯಲ್ಲಿದ್ದರು. ಆದರೆ ದೇಬಶಿಶ್‌ ಸಾಮಂತ್ರೆ (68) ಅವರು ವೈಡ್‌ ಎಸೆತ ಕೆಣಕಿ ಔಟ್‌ ಆಗುವ ಮೂಲಕ ಕುಸಿತಕ್ಕೆ ದಾರಿ ಮಾಡಿಕೊಟ್ಟರು.

ಸ್ಕೋರುಗಳು: ಬಂಗಾಳ: 96.5 ಓವರುಗಳಲ್ಲಿ 332 (ಅನುಷ್ಟುಪ್‌ ಮಜುಂದಾರ್‌ 157, ಶಾಬಾಜ್‌ ಅಹ್ಮದ್‌ 82; ಬಸಂತ್‌ ಮೊಹಾಂತಿ 53ಕ್ಕೆ4); ಒಡಿಶಾ: 67.1 ಓವರುಗಳಲ್ಲಿ 4 ವಿಕೆಟ್‌ಗೆ 151 (ದೇಬಾಶಿಶ್‌ ಸಾಮಂತ್ರೆ 68, ಶಂತನು ಮಿಶ್ರಾ 62).

ಸೌರಾಷ್ಟ್ರ ಮೇಲುಗೈ: ಚಿರಾಗ್‌ ಜಾನಿ (121, 12 ಬೌಂಡರಿ) ಅವರ ಹೋರಾಟದ ಶತಕ ಮತ್ತು ಪ್ರೇರಕ್‌ ಮಂಕಡ್‌ (80) ಜೊತೆ ಏಳನೇ ವಿಕೆಟ್‌ಗೆ 157 ರನ್ ಜೊತೆಯಾಟದ ನೆರವಿನಿಂದ ಸೌರಾಷ್ಟ್ರ ತಂಡ, ಒಂಗೋಲುವಿನಲ್ಲಿ ನಡೆಯುತ್ತಿರುವ ಇನ್ನೊಂದು ಪಂದ್ಯದಲ್ಲಿ ಆಂಧ್ರ ವಿರುದ್ಧ ಉತ್ತಮ ಸ್ಥಿತಿಯಲ್ಲಿದೆ.ಸೌರಾಷ್ಟ್ರದ 419 ರನ್‌ಗಳಿಗೆ ಉತ್ತರವಾಗಿ ಆಂಧ್ರ ಎರಡನೇ ದಿನದಾಟ ಮುಗಿದಾಗ 2 ವಿಕೆಟ್‌ಗೆ 40 ರನ್‌ ಗಳಿಸಿದೆ. 

ಸ್ಕೋರುಗಳು: ಸೌರಾಷ್ಟ್ರ: 146.5 ಓವರುಗಳಲ್ಲಿ 419 (ಚಿರಾಗ್‌ ಜಾನಿ 121, ಪ್ರೇರಕ್‌ ಮಂಕಡ್‌ 80, ವಿಶ್ವರಾಜಸಿಂಹ ಜಡೇಜ 73; ಪ್ರಥ್ವಿರಾಜ್‌ ಯರ್ರಾ 51ಕ್ಕೆ3); ಆಂಧ್ರ: 22 ಓವರುಗಳಲ್ಲಿ 2 ವಿಕೆಟ್‌ಗೆ 40 (ಜೈದೇವ ಉನದ್ಕತ್‌ 20ಕ್ಕೆ2)

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು