ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇರಳಕ್ಕೆ ಜಯದ ಅವಕಾಶ; ಸಂಕಷ್ಟದಲ್ಲಿ ಹೈದರಾಬಾದ್

ರಣಜಿ ಟ್ರೋಫಿ ಕ್ರಿಕೆಟ್: ಬಾಸಿಲ್ ಥಂಪಿಗೆ ಐದು ವಿಕೆಟ್
Last Updated 26 ಡಿಸೆಂಬರ್ 2019, 19:45 IST
ಅಕ್ಷರ ಗಾತ್ರ

ಸೂರತ್/ಮುಂಬೈ: ಇಲ್ಲಿ ನಡೆಯುತ್ತಿರುವ ರಣಜಿ ಪಂದ್ಯದಲ್ಲಿ ಮೊದಲ ಇನಿಂಗ್ಸ್‌ನಲ್ಲಿ ಹಿನ್ನಡೆ ಅನುಭವಿಸಿರುವ ಕೇರಳ ತಂಡಕ್ಕೆ ಈಗ ಜಯಿಸುವ ಅವಕಾಶ ಇದೆ. ಎರಡು ದಿನಗಳು ಬಾಕಿಯಿರುವ ಪಂದ್ಯದಲ್ಲಿ ಇನ್ನೂ 254 ರನ್‌ಗಳನ್ನು ಹೊಡೆದರೆ ಜಯ ಖಚಿತ.

ಆದರೆ ಆತಿಥೇಯ ತಂಡದ ಗುಜರಾತ್ ತಂಡದ ಬೌಲಿಂಗ್ ದಾಳಿಯನ್ನು ತಾಳ್ಮೆಯಿಂದ ಎದುರಿಸುವ ಸವಾಲು ರಾಬಿನ್ ಉತ್ತಪ್ಪ ನಾಯಕತ್ವದ ತಂಡಕ್ಕೆ ಇದೆ. ಮೊದಲ ಇನಿಂಗ್ಸ್‌ನಲ್ಲಿ ಗುಜರಾತ್ ತಂಡವನ್ನು 127 ರನ್‌ಗಳಿಗೆ ಕೇರಳವು ಆಲೌಟ್ ಮಾಡಿತ್ತು. ಆದರೆ ಕೇವಲ 70 ರನ್‌ಗಳಿಗೆ ಆಲೌಟ್ ಆಗಿತ್ತು.‌ ಗುಜರಾತ್ ತಂಡವು 57 ರನ್‌ಗಳ ಮುನ್ನಡೆ ಸಾಧಿಸಿತ್ತು. ಎರಡನೇ ಇನಿಂಗ್ಸ್‌ನಲ್ಲಿ 60.4 ಓವರ್‌ಗಳಲ್ಲಿ 210 ರನ್‌ ಗಳಿಸಿತು.ಮನಪ್ರೀತ್ ಜುನೇಜಾ ಮತ್ತು ಚಿಂತನ್ ಗಜಾ ಅರ್ಧಶತಕಗಳನ್ನು ಹೊಡೆದರು.

ಕೇರಳದ ಬೌಲರ್ ಬಾಸಿಲ್ ಥಂಪಿ ಐದು ವಿಕೆಟ್‌ ಗಳಿಸಿ ಮಿಂಚಿದರು. ಅವರಿಗೆ ಉತ್ತಮ ಬೆಂಬಲ ಜಲಜ್ ಸಕ್ಸೆನಾ (54ಕ್ಕೆ3) ಮತ್ತು ಸಂದೀಪ್ ವಾರಿಯರ್ ಎರಡು ವಿಕೆಟ್ ಗಳಿಸಿದರು. 268 ರನ್‌ಗಳ ಜಯದ ಗುರಿ ಬೆನ್ನತ್ತಿರುವ ಕೇರಳವು ಗುರುವಾರ ದಿನದಾಟದ ಅಂತ್ಯಕ್ಕೆ ಏಳು ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೇ 26 ರನ್‌ ಗಳಿಸಿದೆ.

ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಆತಿಥೇಯ ತಂಡದ ಇಶಾಂತ್ ಶರ್ಮಾ ಮತ್ತು ಸಿಮ್ರನ್‌ ಜೀತ್ ಸಿಂಗ್ ಅವರು ತಲಾ ನಾಲ್ಕುವಿಕೆಟ್ ಗಳಿಸಿ ಹೈದರಾಬಾದ್ ತಂಡಕ್ಕೆ ಸಿಂಹಸ್ವಪ್ನರಾದರು. ಇದರಿಂದಾಗಿ ಹೈದರಾಬಾದ್ ತಂಡವು 29 ಓವರ್‌ಗಳಲ್ಲಿ 69 ರನ್ ಗಳಿಸಿ ಆಲೌಟ್ ಆಯಿತು. 215 ರನ್‌ಗಳ ಹಿನ್ನಡೆ ಅನುಭವಿಸಿತು. ಫಾಲೋಆನ್‌ ಹೇರಿದ ದೆಹಲಿಯು ಎರಡನೇ ಇನಿಂಗ್ಸ್‌ನಲ್ಲಿಯೂ ಪೆಟ್ಟು ಕೊಟ್ಟಿತು. ದಿನದಾಟದ ಅಂತ್ಯಕ್ಕೆ ಹೈದರಾಬಾದ್ 10 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 20 ರನ್ ಗಳಿಸಿದೆ.

ನಾಗಪುರದಲ್ಲಿ ವಿದರ್ಭ ಮತ್ತು ಪಂಜಾಬ್ ನಡುವಣ ಪಂದ್ಯದ ಎರಡನೇ ದಿನದಾಟವು ಮಳೆ ಮತ್ತು ಮಂದ ಬೆಳಕಿನಿಂದಾಗಿ ರದ್ದಾಯಿತು.

ಸಂಕ್ಷಿಪ್ತ ಸ್ಕೋರು

ಸೂರತ್:ಮೊದಲ ಇನಿಂಗ್ಸ್: ಗುಜರಾತ್: 127, ಕೇರಳ: 70; ಎರಡನೇ ಇನಿಂಗ್ಸ್‌: ಗುಜರಾತ್: 60.4 ಓವರ್‌ಗಳಲ್ಲಿ 210 (ಕೇತನ್ ಡಿ ಪಟೇಲ್ 34, ಮೆರೈ 21, ಮನಪ್ರೀತ್ ಜುನೇಜಾ 53, ಚಿಂತನ್ ಗಜಾ ಔಟಾಗದೆ 50, ಸಂದೀಪ್ ವಾರಿಯರ್ 44ಕ್ಕೆ2, ಬಾಸಿಲ್ ಥಂಪಿ 56ಕ್ಕೆ5, ಜಲಜ್ ಸಕ್ಸೆನಾ 54ಕ್ಕೆ3), ಕೇರಳ: 7 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 26 (ವಿಷ್ಣು ವಿನೋದ್ ಬ್ಯಾಟಿಂಗ್ 22, ಜಲಜ್ ಸಕ್ಸೆನಾ ಬ್ಯಾಟಿಂಗ್ 3)

ನವದೆಹಲಿ: ಮೊದಲ ಇನಿಂಗ್ಸ್: ದೆಹಲಿ: 284, ಹೈದರಾಬಾದ್: 29 ಓವರ್‌ಗಳಲ್ಲಿ 69 (ಬಿ. ಸಂದೀಪ್ 16, ಹಿಮಾಲಯ್ ಅಗರವಾಲ್ 14, ಇಶಾಂತ್ ಶರ್ಮಾ 19ಕ್ಕೆ4, ಪವನ್ ಸುಯಾಲ್ 25ಕ್ಕೆ2, ಸಿಮ್ರನ್‌ಜೀತ್ ಸಿಂಗ್ 23ಕ್ಕೆ4) ಎರಡನೇ ಇನಿಂಗ್ಸ್: ಹೈದರಾಬಾದ್:10 ಓವರ್‌ಗಳಲ್ಲಿ 2 ವಿಕೆಟ್‌ಗೆ 20 (ತನ್ಮಯ್ ಅಗರವಾಲ್ ಬ್ಯಾಟಿಂಗ್ 11, ಹಿಮಾಲಯ ಅಗರವಾಲ್ ಬ್ಯಾಟಿಂಗ್ 7, ಕನ್ವರ್ ಬಿಧುರಿ 7ಕ್ಕೆ2)

ವಾಂಖೆಡೆ ಕ್ರೀಡಾಂಗಣ: ಮುಂಬೈ: 114, ರೇಲ್ವೆಸ್: 74.1 ಓವರ್‌ಗಳಲ್ಲಿ 266 (ಕರ್ಣ ಶರ್ಮಾ ಔಟಾಗದೆ 112, ಅವಿನಾಶ್ ಯಾದವ್ 34, ತುಷಾರ್ ದೇಶಪಾಂಡೆ 44ಕ್ಕೆ4, ದೀಪಕ್ ಶೆಟ್ಟಿ 35ಕ್ಕೆ3, ಪಿ. ಆಕಾಶ್ 41ಕ್ಕೆ2) ಎರಡನೇ ಇನಿಂಗ್ಸ್: ಮುಂಬೈ: 22 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 64 (ಪೃಥ್ವಿ ಶಾ 23, ಜೈ ಬಿಷ್ಠಾ 13, ಸೂರ್ಯಕುಮಾರ್ ಯಾದವ್ ಔಟಾಗದೆ 15, ಹಿಮಾಂಶು ಸಂಗ್ವಾನ್ 11ಕ್ಕೆ2, ಪ್ರದೀಪ್ ಪೂಜಾರ 16ಕ್ಕೆ1).

ಇಂದೋರ್: ತಮಿಳುನಾಡು: 59 ಓವರ್‌ಗಳಲ್ಲಿ 149; ಮಧ್ಯಪ್ರದೇಶ: 79 ಓವರ್‌ಗಳಲ್ಲಿ 7ಕ್ಕೆ 281 (ರಮೀಜ್ ಖಾನ್ 87, ವೆಂಕಟೇಶ್ ಅಯ್ಯರ್ 88, ಮಿಹಿರ್ ಹಿರ್ವಾನಿ ಔಟಾಗದೆ 54, ಟಿ. ನಟರಾಜನ್ 96ಕ್ಕೆ4, ಕೆ. ವಿಘ್ನೇಷ್ 81ಕ್ಕೆ2)

ಪಾಟ್ನಾ: ಬಿಹಾರ: 112 ಓವರ್‌ಗಳಲ್ಲಿ326 (ಬಾಬುಲ್ ಕುಮಾರ್ 160, ರಾಥೋಡ್ 69, ವಿಕಾಸ್ ರಾಜನ್ 26, ಫೆಲಿಕ್ಸ್ ಅಲೆಮಾವ್ 74ಕ್ಕೆ4, ಅಮಿತ್ ವರ್ಮಾ 35ಕ್ಕೆ2) ಗೋವಾ:24 ಓವರ್‌ಗಳಲ್ಲಿ 2 ವಿಕೆಟ್‌ಗೆ 65 (ಸುಮೀರನ್ ಆಮೋಣಕರ್ 17, ಆದಿತ್ಯ ಕೌಶಿಕ್ ಔಟಾಗದೆ 44, ಆಶುತೋಷ್ ಅಮನ್ 5ಕ್ಕೆ2)

ಕೋಲ್ಕತ್ತ: ಮೊದಲ ಇನಿಂಗ್ಸ್: ಮಿಜೋರಾಂ:27.4 ಓವರ್‌ಗಳಲ್ಲಿ 73, ಪುದುಚೇರಿ: 86 ಓವರ್‌ಗಳಲ್ಲಿ 5ಕ್ಕೆ 458 (ಆನಂದ್ ಸುಬ್ರಮಣಿಯನ್ 28, ಪಾರಸ್ ಡೋಗ್ರಾ 200, ಕೆ.ಬಿ. ಅರುಣ್ ಕಾರ್ತಿಕ್ 86, ಎಸ್. ಸುರೇಶ್ ಕುಮಾರ 103, ಸುಮಿತ್ 76ಕ್ಕೆ2, ಬಾಬಿ 77ಕ್ಕೆ2), ಎರಡನೇ ಇನಿಂಗ್ಸ್: ಮಿಜೋರಾಂ: 11 ಓವರ್‌ಗಳಲ್ಲಿ 4ಕ್ಕೆ30 (ಕೆ.ಬಿ. ಪವನ್ 9, ಸಾಗರ್ ಉದೇಶಿ 12ಕ್ಕೆ2)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT