ಶುಕ್ರವಾರ, ಜನವರಿ 24, 2020
16 °C
ರಣಜಿ ಕ್ರಿಕೆಟ್

KAR vs UP | ಆರ್ಯನ್‌ ಅರ್ಧಶತಕ: ಉತ್ತಮ ಮೊತ್ತದತ್ತ ಉತ್ತರ ಪ್ರದೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಕರ್ನಾಟಕ ಎದುರಿನ ರಣಜಿ ಕ್ರಿಕೆಟ್‌ ಟೂರ್ನಿಯ ಪಂದ್ಯದಲ್ಲಿ ಟಾಸ್‌ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿರುವ ಉತ್ತರ ಪ್ರದೇಶ ತಂಡ ಮೊದಲ ದಿನವಾದ ಮಂಗಳವಾರದ ಮಧ್ಯಾಹ್ನದ ವಿರಾಮದ ವೇಳೆಗೆ 64 ಓವರ್‌ಗಳಲ್ಲಿ ಮೂರು ವಿಕೆಟ್ ಕಳೆದುಕೊಂಡು 150 ರನ್‌ ಗಳಿಸಿದೆ.

ರಾಜನಗರದ ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ (ಕೆಎಸ್‌ಸಿಎ) ಕ್ರೀಡಾಂಗಣದಲ್ಲಿ ಆಯೋಜನೆಯಾಗಿರುವ ಪಂದ್ಯದಲ್ಲಿ ಉತ್ತರ ಪ್ರದೇಶ ಆರಂಭದಿಂದ ನಿಧಾನವಾಗಿ ರನ್ ಕಲೆಹಾಕಿತು.

ಮೊದಲ ವಿಕೆಟ್‌ ಜೊತೆಯಾಟದಲ್ಲಿ ಅಲ್ಮಾಸ್ ಶೌಕತ್‌ (22) ಮತ್ತು ಆರ್ಯನ್‌ ಜುಯಾಲ್‌ (ಬ್ಯಾಟಿಂಗ್‌ 77) 56 ಕಲೆ ಹಾಕಿದರು.

ಮಾಧವ ಕೌಶಿಕ್‌ (15 ರನ್) ಮತ್ತು ಅಕ್ಷದೀಪ್ ನಾಥ್‌ (9) ಬೇಗನೆ ಪೆವಿಲಿಯನ್ ಸೇರಿದರು. ವೇಗಿಗಳಾದ ಅಭಿಮನ್ಯು ಮಿಥುನ್, ರೋನಿತ್ ಮೋರೆ ಮತ್ತು ಸ್ಪಿನ್ನರ್ ಶ್ರೇಯಸ್‌ ಗೋಪಾಲ್‌ ತಲಾ ಒಂದು ವಿಕೆಟ್ ಉರುಳಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು