ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜ.13ರಿಂದ ರಣಜಿ ಟ್ರೋಫಿ: ಕೋಲ್ಕತ್ತದಲ್ಲಿ ಕರ್ನಾಟಕ–ಉತ್ತರಾಖಂಡ ಮುಖಾಮುಖಿ

Last Updated 27 ಡಿಸೆಂಬರ್ 2021, 13:26 IST
ಅಕ್ಷರ ಗಾತ್ರ

ಬೆಂಗಳೂರು: ದೇಶಿ ಕ್ರಿಕೆಟ್‌ನ ರಾಜ ರಣಜಿ ಟ್ರೋಫಿ ಟೂರ್ನಿಯು ಜನವರಿ 13ರಿಂದ ಮಾರ್ಚ್ 20ರವರೆಗೆ ನಡೆಯಲಿದೆ.ಹೋದ ವರ್ಷ ಕೊರೊನಾ ಸೃಷ್ಟಿಸಿದ ಬಿಕ್ಕಟ್ಟಿನಿಂದಾಗಿ ರಣಜಿ ಟೂರ್ನಿಯನ್ನು ರದ್ದುಪಡಿಸಲಾಗಿತ್ತು. ಮುಂಬೈ, ಚೆನ್ನೈ, ಅಹಮದಾಬಾದ್, ಥಾಣೆ, ಬೆಂಗಳೂರು ಮತ್ತು ಕೋಲ್ಕತ್ತದಲ್ಲಿ ಗುಂಪು ಹಂತದ ಪಂದ್ಯಗಳು ನಡೆಯಲಿವೆ.

ಕರ್ನಾಟಕ ತಂಡವು ಸಿ ಗುಂಪಿನಲ್ಲಿ ಕಣಕ್ಕಿಳಿಯಲಿದೆ. ಇದೇ ಗುಂಪಿನಲ್ಲಿ ಉತ್ತರಾಖಂಡ, ಹೈದರಾಬಾದ್, ಮಹಾರಾಷ್ಟ್ರ, ಮುಂಬೈ ಮತ್ತು ದೆಹಲಿ ತಂಡಗಳೂ ಇವೆ. ಈ ಗುಂಪಿನ ಪಂದ್ಯಗಳು ಕೋಲ್ಕತ್ತದಲ್ಲಿ ನಡೆಯಲಿವೆ ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.

ಒಟ್ಟು 38 ತಂಡಗಳು ಪೈಪೋಟಿ ನಡೆಸಲಿವೆ. 177 ಪಂದ್ಯಗಳನ್ನು ಆಯೋಜಿಸಲಾಗುತ್ತಿದೆ.2019-20ರಲ್ಲಿ ಸೌರಾಷ್ಟ್ರ ಮತ್ತು ಬಂಗಾಳ ತಂಡಗಳು ಕ್ರಮವಾಗಿ ಚಾಂಪಿಯನ್ ಮತ್ತು ರನ್ನರ್ಸ್ ಅಪ್ ಆಗಿದ್ದವು.

ಪಟ್ಟಿ

ಕರ್ನಾಟಕದ ಪಂದ್ಯಗಳು (ಗುಂಪು ಹಂತ)

ಆರಂಭ ದಿನಾಂಕ; ಎದುರಾಳಿ

ಜ.13; ಉತ್ತರಾಖಂಡ

ಜ.20; ಹೈದರಾಬಾದ್

ಜ. 27; ಮಹಾರಾಷ್ಟ್ರ

ಫೆ 3; ಮುಂಬೈ

ಫೆ 10; ದೆಹಲಿ

* ಸ್ಥಳ: ಕೋಲ್ಕತ್ತ

* ಸಮಯ: ಬೆಳಿಗ್ಗೆ 9.30

ಮಾಹಿತಿ: ಬಿಸಿಸಿಐ ಡಾಟ್ ಟಿವಿ ವೆಬ್‌ಸೈಟ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT