ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊದಲ ದಿನವೇ ಕೇರಳಕ್ಕೆ ಹಿನ್ನಡೆ; ಗುಜರಾತ್ ಮುನ್ನಡೆ

Last Updated 26 ಡಿಸೆಂಬರ್ 2019, 9:43 IST
ಅಕ್ಷರ ಗಾತ್ರ

ಸೂರತ್/ನವದೆಹಲಿ: ಕೇರಳ ತಂಡದ ಆರು ಬ್ಯಾಟ್ಸ್‌ಮನ್‌ಗಳು ಬುಧವಾರ ಇಲ್ಲಿ ಆರಂಭವಾದ ರಣಜಿ ಟ್ರೋಫಿ ಟೂರ್ನಿಯ ಪಂದ್ಯದಲ್ಲಿ ಸೊನ್ನೆ ಸುತ್ತಿದರು. ಇದರಿಂದಾಗಿ ರಾಬಿನ್ ಉತ್ತಪ್ಪ ನಾಯಕತ್ವದ ಕೇರಳ ತಂಡವು ಪಂದ್ಯದ ಮೊದಲ ದಿನವೇ ಆತಿಥೇಯ ಗುಜರಾತ್ ಎದುರು 57 ರನ್‌ಗಳಿಂದ ಪ್ರಥಮ ಇನಿಂಗ್ಸ್ ಹಿನ್ನಡೆ ಅನುಭವಿಸಿತು.

ಲಾಲಭಾಯಿ ಕಾಂಟ್ರ್ಯಾಕ್ಟರ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ಕೇರಳ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆಫ್‌ಸ್ಪಿನ್ನರ್ ಜಲಜ್ ಸಕ್ಸೆನಾ (26ಕ್ಕೆ5) ಅವರ ದಾಳಿಗೆ ಗುಜರಾತ್ ತಂಡವು ಕೇವಲ 127 ರನ್ ಗಳಿಸಿ ಕುಸಿಯಿತು. ಆದರೆ ಈ ಅಲ್ಪಮೊತ್ತವನ್ನು ದಾಟಿ ಮುನ್ನಡೆ ಗಳಿಸಲು ಕೇರಳಕ್ಕೆ ಸಾಧ್ಯವಾಗಲಿಲ್ಲ. ಗುಜರಾತ್ ತಂಡದ ರೂಷ್ ಕಲೇರಿಯಾ (20ಕ್ಕೆ4) ಮತ್ತು ಅಕ್ಷರ್ ಪಟೇಲ್ (11ಕ್ಕೆ3) ಅವರಿಬ್ಬರ ದಾಳಿಯ ಮುಂದೆ ಕೇರಳ ತಂಡಕ್ಕೆ 35.5 ಓವರ್‌ಗಳಲ್ಲಿ 70 ರನ್‌ ಗಳಿಸಲು ಮಾತ್ರ ಸಾಧ್ಯಯಿತು. ನಾಯಕ ರಾಬಿನ್ ಉತ್ತಪ್ಪ (26’ 67ಎ,4ಬೌಂ) ಅವರು ಗಳಿಸಿದ ಮೊತ್ತವೇ ಕೇರಳದ ಪರ ಹೆಚ್ಚಿನದ್ದು.

ಫಿಟ್‌ನೆಸ್ ಸಾಬೀತುಪಡಿಸಲು ಮಧ್ಯಮವೇಗಿ ಜಸ್‌ಪ್ರೀತ್ ಬೂಮ್ರಾ ಅವರು ಗುಜರಾತ್ ಪರ ಅಡುವರು ಎಂದು ಈ ಮೊದಲು ಹೇಳಲಾಗಿತ್ತು. ಆದರೆ, ಈ ಪಂದ್ಯದಲ್ಲಿ ಅವರು ಕಣಕ್ಕಿಳಿಯಲಿಲ್ಲ.

ದೆಹಲಿಯ ಅರುಣ ಚೇಟ್ಲಿ ಕ್ರೀಡಾಂಗಣದಲ್ಲಿ ಆರಂಭವಾದ ಪಂದ್ಯದಲ್ಲಿ ದೆಹಲಿಯ ಶಿಖರ್ ಧವನ್ (ಬ್ಯಾಟಿಂಗ್ 137) ಪಂದ್ಯದಲ್ಲಿ ಶತಕ ಬಾರಿಸಿದರು. ಇದರಿಂದಾಗಿ ದೆಹಲಿ ತಂಡವು ಹೈದರಾಬಾದ್ ವಿರುದ್ಧದ ಮೊದಲ ಇನಿಂಗ್ಸ್‌ನ ದಿನದಾಟದ ಅಂತ್ಯಕ್ಕೆ 66 ಓವರ್‌ಗಳಲ್ಲಿ 6ಕ್ಕೆ269 ರನ್ ಗಳಿಸಿತು.

ಮೊದಲ ದಿನದ ಸಂಕ್ಷಿಪ್ತ ಸ್ಕೋರುಗಳು

ಸೂರತ್: ಗುಜರಾತ್: 38 ಓವರ್‌ಗಳಲ್ಲಿ 127 (ಕೇತನ್ ಪಟೇಲ್ 36, ಪಿಯೂಷ್ ಚಾವ್ಲಾ 32, ಜಲಜ್ ಸಕ್ಸೆನಾ 26ಕ್ಕೆ5), ಕೇರಳ: 35.5 ಓವರ್‌ಗಳಲ್ಲಿ 70 (ಪೊನ್ನಂ ರಾಹುಲ್ 17, ರಾಬಿನ್ ಉತ್ತಪ್ಪ 26, ರೂಷ್ ಕಲೇರಿಯಾ 20ಕ್ಕೆ4, ಚಿಂತನ್ ಗಜಾ 17ಕ್ಕೆ2, ಅಕ್ಷರ್ ಪಟೇಲ್ 11ಕ್ಕೆ3, ಸಿದ್ಧಾರ್ಥ್ ದೇಸಾಯಿ 15ಕ್ಕೆ1)

ನವದೆಹಲಿ: ದೆಹಲಿ: 66 ಓವರ್‌ಗಳಲ್ಲಿ 6ಕ್ಕೆ269 (ಶಿಖರ್ ಧವನ್ ಬ್ಯಾಟಿಂಗ್ 137, ನಿತೀಶ್ ರಾಣಾ 25, ಅನುಜ್ ರಾವತ್ 29, ಕನ್ವರ್ ಬಿಧುರಿ ಬ್ಯಾಟಿಂಗ್ 22, ಮೆಹದಿ ಹಸನ್ 61ಕ್ಕೆ3, ಮೊಹಮ್ಮದ್ ಸಿರಾಜ್ 60ಕ್ಕೆ2) ವಿರುದ್ಧ– ಹೈದರಾಬಾದ್.

ಇಂದೋರ್: ತಮಿಳುನಾಡು: 59 ಓವರ್‌ಗಳಲ್ಲಿ 149 (ಗಂಗಾ ಶ್ರೀಧರ್ ರಾಜು 43, ಹರಿ ನಿಶಾಂತ್ 22, ಬಾಬಾ ಅಪರಾಜಿತ್ ಔಟಾಗದೆ 61, ಆವೇಶ್ ಖಾನ್ 34ಕ್ಕೆ2, ಈಶ್ವರ್ ಪಾಂಡೆ 26ಕ್ಕೆ6), ಮಧ್ಯಪ್ರದೇಶ: 20 ಓವರ್‌ಗಳಲ್ಲಿ 3ಕ್ಕೆ56 (ರಮೀಜ್ ಖಾನ್ ಬ್ಯಾಟಿಂಗ್ 23, ರಜತ್ ಪಾಟೀದಾರ್ 13, ಟಿ. ನಟರಾಜನ್ 24ಕ್ಕೆ2)

ಕೋಲ್ಕತ್ತ: ವಿಡಿಯೋಕಾನ್ ಮೈದಾನ: ಮಿಜೋರಾಂ: 27.4 ಓವರ್‌ಗಳಲ್ಲಿ 73 (ಲಾಲ್ರುಜೆಲಾ 20, ಪ್ರತೀಕ್ ದೇಸಾಯಿ 14, ಲಾಲ್‌ಮಿಂಗಮಾವಿಯಾ ಔಟಾಗದೆ 14, ಆರ್. ವಿನಯಕುಮಾರ್ 25ಕ್ಕೆ3, ಸಾಗರ್ ತ್ರಿವೇದಿ 17ಕ್ಕೆ2, ಸಾಗರ್ ಉದೇಶಿ 6ಕ್ಕೆ4), ಪುದುಚೇರಿ: 58 ಓವರ್‌ಗಳಲ್ಲಿ 3ಕ್ಕೆ286 (ಸುಬ್ರಮಣಿಯನ್ ಆನಂದ್ 28, ಕಾರ್ತಿಕ್ 21, ಪಾರಸ್ ಡೋಗ್ರಾ ಬ್ಯಾಟಿಂಗ್ 135, ಅರುಣ್ ಕಾರ್ತಿಕ್ ಬ್ಯಾಟಿಂಗ್ 86, ಸುಮಿತ್ ಲಾಮಾ 54ಕ್ಕೆ1)

ಈಡನ್ ಗಾರ್ಡನ್: ಬಂಗಾಳ: 83 ಓವರ್‌ಗಳಲ್ಲಿ 4ಕ್ಕೆ241 (ಅಭಿಷೇಕ್ ರಾಮನ್ ಬ್ಯಾಟಿಂಗ್ 110, ಕೌಶಿಕ್ ಘೋಷ್ 37, ಮನೋಜ್ ತಿವಾರಿ 46, ಸುದೀಪ್ ಚಟರ್ಜಿ 18, ಸಿ. ಸ್ಟೀಫನ್ 60ಕ್ಕೆ2) ವಿರುದ್ಧ ಆಂಧ್ರ.

ಭುವನೇಶ್ವರ್: ಸಿಕ್ಕಿಂ: 74.4 ಓವರ್‌ಗಳಲ್ಲಿ 269 (ಆಶಿಶ್ ಥಾಪಾ 26, ಯಶಪಾಲ್ ಸಿಂಗ್ 33, ಜಹಾನ್ ಉದ್ದೀನ್ 39, ಇಕ್ಬಾಲ್ ಅಬ್ದುಲ್ಲಾ 94, ಪ್ಲೇಜರ್ ತಮಾಂಕ್ 32, ಸ್ಟುವರ್ಟ್ ಬಿನ್ನಿ 20ಕ್ಕೆ1, ಶ್ರೀಕಾಂತ್ ಮುಂಢೆ 86ಕ್ಕೆ2), ನಾಗಾಲ್ಯಾಂಡ್: 11 ಓವರ್‌ಗಳಲ್ಲಿ 1 ವಿಕೆಟ್‌ಗೆ 45 (ತೆಜೋಸೆಲ್ ಯಿತಾವುನ್ ಬ್ಯಾಟಿಂಗ್ 22, ಶ್ರೀಕಾಂತ್ ಮುಂಢೆ ಬ್ಯಾಟಿಂಗ್ 18)

ನಾಗಪುರ: ವಿದರ್ಭ: 67 ಓವರ್‌ಗಳಲ್ಲಿ 6ಕ್ಕೆ196 (ಫೈಜ್ ಫಜಲ್ 34, ಗಣೇಶ್ ಸತೀಶ್ ಬ್ಯಾಟಿಂಗ್ 88, ಅಕ್ಷಯ್ ವಖ್ರೆ 34, ಸಂದೀಪ್ ಶರ್ಮಾ 72ಕ್ಕೆ2, ಬಲ್ತೇಜ್ ಸಿಂಗ್ 32ಕ್ಕೆ3) ವಿರುದ್ಧ; ಪಂಜಾಬ್

ಮುಂಬೈ, ವಾಂಖೆಡೆ ಕ್ರೀಡಾಂಗಣ: ಮುಂಬೈ: 28.3 ಓವರ್‌ಗಳಲ್ಲಿ 114 (ಜೈ ಗೋಕುಲ್ ಬಿಷ್ತಾ 21, ಸೂರ್ಯಕುಮಾರ್ ಯಾದವ್ 39, ಅಮಿತ್ ಮಿಶ್ರಾ 41ಕ್ಕೆ3, ಟಿ. ಪ್ರದೀಪ್ 37ಕ್ಕೆ6) ರೇಲ್ವೆಸ್: 37 ಓವರ್‌ಗಳಲ್ಲಿ 5ಕ್ಕೆ116 (ಮೃಣಾಲ್ ದೇವದರ್ 12, ಅರಿಂದಮ್ ಘೋಷ್ ಬ್ಯಾಟಿಂಗ್ 52, ಕರ್ಣ ಶರ್ಮಾ ಬ್ಯಾಟಿಂಗ್ 24, ದೀಪಕ್ ಶೆಟ್ಟಿ 20ಕ್ಕೆ3).

ಸೌರಾಷ್ಟ್ರ: 90 ಓವರ್‌ಗಳಲ್ಲಿ 8ಕ್ಕೆ322 (ಹರ್ವಿಕ್ ದೇಸಾಯಿ 54, ಸ್ನೆಲ್ ಪಟೇಲ್ 32, ಚೇತೇಶ್ವರ್ ಪೂಜಾರ 57, ಶೆಲ್ಡನ್ ಜಾಕ್ಸನ್ 57, ಧರ್ಮೇಂದ್ರಸಿಂಹ ಜಡೇಜ 33, ಪಾರ್ಥ್ ಭುತ್ ಬ್ಯಾಟಿಂಗ್ 32, ಸೌರಭ್ ಕುಮಾರ್ 79ಕ್ಕೆ4, ಜೀಶನ್ ಅನ್ಸಾರಿ 125ಕ್ಕೆ3) ವಿರುದ್ಧ; ಉತ್ತರಪ್ರದೇಶ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT