ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈಲ್ವೆ ವೇಗಕ್ಕೆ ತತ್ತರಿಸಿದ ಮುಂಬೈ

Last Updated 28 ಡಿಸೆಂಬರ್ 2019, 4:07 IST
ಅಕ್ಷರ ಗಾತ್ರ

ಮುಂಬೈ: ಬಲಗೈ ಮಧ್ಯಮವೇಗಿ ಹಿಮಾಂಶು ಸಂಗ್ವಾನ್ (60ಕ್ಕೆ5) ದಾಳಿಗೆ ಎರಡನೇ ಇನಿಂಗ್ಸ್‌ನಲ್ಲಿ ತತ್ತರಿಸಿದ ಮುಂಬೈ ತಂಡವು ರೈಲ್ವೆ ತಂಡದ ಎದುರು 10 ವಿಕೆಟ್‌ಗಳಿಂದ ಸೋಲನುಭವಿಸಿತು.

ಶುಕ್ರವಾರ ಮುಕ್ತಾಯವಾದ ರಣಜಿ ಟ್ರೋಫಿ ಪಂದ್ಯದಲ್ಲಿ 47 ರನ್‌ಗಳ ಸಣ್ಣ ಗುರಿಯನ್ನು ಯಶಸ್ವಿಯಾಗಿ ಸಾಧಿಸಿದ ರೈಲ್ವೆ ಜಯಭೇರಿ ಬಾರಿಸಿತು.

ಮೊದಲ ಇನಿಂಗ್ಸ್‌ನಲ್ಲಿ ಮಧ್ಯಮ ವೇಗಿ, ಕನ್ನಡಿಗ ಟಿ. ಪ್ರದೀಪ್ ಅವರ ದಾಳಿಗೆ ನಲುಗಿತ್ತು. ಕೇವಲ 114 ರನ್‌ಗಳಿಗೆ ಆಲೌಟ್ ಆಗಿತ್ತು.

ಅದಕ್ಕುತ್ತರವಾಗಿ ರೈಲ್ವೆ ತಂಡವು 266ರನ್‌ ಗಳಿಸಿತ್ತು.152 ರನ್‌ಗಳ ಮುನ್ನಡೆ ಸಾಧಿಸಿತ್ತು. ಎರಡನೇ ಇನಿಂಗ್ಸ್‌ನಲ್ಲಿ ಸೂರ್ಯಕುಮಾರ್ ಯಾದವ್ (65 ರನ್) ಅರ್ಧಶತಕ ಬಾರಿಸಿದರು. ಆದರೂ ಮುಂಬೈ ತಂಡವು 63 ಓವರ್‌ಗಳಲ್ಲಿ 198 ರನ್‌ ಗಳಿಸಲು ಮಾತ್ರ ಶಕ್ತವಾಯಿತು. ಕೇವಲ 46 ರನ್‌ಗಳ ಮುನ್ನಡೆ ಪಡೆಯಿತು. ಇದರಿಂದಾಗಿ ಮೂರನೇ ದಿನವೇ ಆಟ ಮುಗಿಯಿತು.

ಸಂಕ್ಷಿಪ್ತ ಸ್ಕೋರುಗಳು:

ಮೊದಲ ಇನಿಂಗ್ಸ್: ಮುಂಬೈ; 114, ರೈಲ್ವೆ: 266; ಎರಡನೇ ಇನಿಂಗ್ಸ್: ಮುಂಬೈ 63 ಓವರ್‌ಗಳಲ್ಲಿ 198 (ಸೂರ್ಯಕುಮಾರ್ ಯಾದವ್ 65, ಆಕಾಶ್ ಪಾರ್ಕರ್ ಔಟಾಗದೆ 35, ಶಾರ್ದೂಲ್ ಠಾಕೂರ್ 21, ಅಮಿತ್ ಮಿಶ್ರಾ 75ಕ್ಕೆ1, ಟಿ. ಪ್ರದೀಪ್ 46ಕ್ಕೆ2, ಹಿಮಾಂಶು ಸಂಗ್ವಾನ್ 60ಕ್ಕೆ5, ಕರ್ಣ ಶರ್ಮಾ 15ಕ್ಕೆ2), ರೈಲ್ವೆ: 11.4 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 47 (ಮೃಣಾಲ್ ದೇವಧರ್ ಔಟಾಗದೆ 27, ಪ್ರಥಮ್ ಸಿಂಗ್ ಔಟಾಗದೆ 19) ಫಲಿತಾಂಶ:ರೈಲ್ವೆ ತಂಡಕ್ಕೆ 10 ವಿಕೆಟ್‌ಗಳ ಜಯ.

ಗುಜರಾತ್: 127, ಕೇರಳ: 70. ಗುಜರಾತ್ 210, ಕೇರಳ: 50.3 ಓವರ್‌ಗಳಲ್ಲಿ 177 (ವಿಷ್ಣು ವಿನೋದ್ 23, ಜಲಜ್ ಸಕ್ಸೆನಾ 29, ಸಂಜು ಸ್ಯಾಮ್ಸನ್ 78, ರೂಷ್ ಕಲೇರಿಯಾ 48ಕ್ಕೆ2, ಚಿಂತನ್ ಗಜಾ 41ಕ್ಕೆ3, ಅಕ್ಷರ್ ಪಟೇಲ್ 50ಕ್ಕೆ4) ಫಲಿತಾಂಶ: ಗುಜರಾತ್‌ ಗೆ 90 ರನ್‌ಗಳ ಜಯ.

ತ್ರಿಪುರ: 48.4 ಓವರ್‌ಗಳಲ್ಲಿ 126, ಸರ್ವಿಸಸ್ 173. ತ್ರಿಪುರ: 84, ಸರ್ವಿಸಸ್: 11.1 ಓವರ್‌ಗಳಲ್ಲಿ 2 ವಿಕೆಟ್‌ಗೆ 41 (ಅಭಿಜಿತ್ ಸಾಳ್ವಿ ಔಟಾಗದೆ 23) ಫಲಿತಾಂಶ: ಸರ್ವಿಸಸ್‌ಗೆ 8 ವಿಕೆಟ್‌ಗಳ ಜಯ.

ಮೊದಲ ಇನಿಂಗ್ಸ್:

ಬಂಗಾಳ: 104 ಓವರ್‌ಗಳಲ್ಲಿ 289 (ಅಭಿಷೇಕ್ ರಾಮನ್ 112, ಮನೋಜ್ ತಿವಾರಿ 46, ಶ್ರೀವತ್ಸ ಗೋಸ್ವಾಮಿ 25, ಚೀಪುರಪಳ್ಳಿ ಸ್ಟೀಫನ್ 78ಕ್ಕೆ4, ಕೆ.ವಿ. ಶಶಿಕಾಂತ್ 64ಕ್ಕೆ4), ಆಂಧ್ರ: 46 ಓವರ್‌ಗಳಲ್ಲಿ 7ಕ್ಕೆ110 (ಸಿ.ಆರ್. ಜ್ಞಾನೇಶ್ವರ್ ಬ್ಯಾಟಿಂಗ್ 45, ಹನುಮವಿಹಾರಿ 23, ಇಶಾನ್ ಪೊರೆಲ್ 35ಕ್ಕೆ3, ಮುಖೇಶ್ ಕುಮಾರ್ 36ಕ್ಕೆ2)

ದೆಹಲಿ: 284, ಹೈದರಾಬಾದ್: 69, ಎರಡನೇ ಇನಿಂಗ್ಸ್: ಹೈದರಾಬಾದ್:70. 2ಓವರ್‌ಗಳಲ್ಲಿ 298 (ತನ್ಮಯ್ ಅಗರವಾಲ್ 103, ಮೆಹದಿ ಹಸನ್ 71, ತನಯ್ ತ್ಯಾಗರಾಜನ್ 34, ಇಶಾಂತ್ ಶರ್ಮಾ 89ಕ್ಕೆ4, ಸಿಮ್ರನ್‌ಜೀತ್ ಸಿಂಗ್ 80ಕ್ಕೆ3, ಕನ್ವರ್ ಬಿಧುರಿ 48ಕ್ಕೆ2), ದೆಹಲಿ: 7 ಓವರ್‌ಗಳಲ್ಲಿ 24 (ಶಿಖರ್ ಧವನ್ ಬ್ಯಾಟಿಂಗ್ 15, ಕುನಾಲ್ ಚಾಂಡೇಲಾ ಬ್ಯಾಟಿಂಗ್ 6) ದೆಹಲಿ ಗೆಲುವಿಗೆ 60 ರನ್‌ ಅವಶ್ಯಕ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT