ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಣಜಿ ಕ್ರಿಕೆಟ್: ಉತ್ತರಾಖಂಡ ಎದುರು ಮುಂಬೈಗೆ 725 ರನ್‌ಗಳ ವಿಶ್ವದಾಖಲೆ ಅಂತರದ ಜಯ

ಅಕ್ಷರ ಗಾತ್ರ

ಬೆಂಗಳೂರು: ಮುಂಬೈ ಕ್ರಿಕೆಟ್ ತಂಡವು ಗುರುವಾರ ರಣಜಿ ಟ್ರೋಫಿ ಕ್ವಾರ್ಟರ್‌ಫೈನಲ್‌ನಲ್ಲಿ ಉತ್ತರಾಖಂಡದ ವಿರುದ್ಧ 725 ರನ್‌ಗಳಿಂದ ಜಯಿಸಿತು. ಇದರೊಂದಿಗೆ ದೇಶಿ ಕ್ರಿಕೆಟ್‌ನಲ್ಲಿ ಅತಿ ದೊಡ್ಡ ಅಂತರದಿಂದ ಗೆದ್ದ ವಿಶ್ವದಾಖಲೆ ನಿರ್ಮಿಸಿತು.

92 ವರ್ಷಗಳ ಹಿಂದೆ ಶೆಫಿಲ್ಡ್ ಶೀಲ್ಡ್ ಟೂರ್ನಿಯಲ್ಲಿ ನ್ಯೂ ಸೌತ್‌ವೇಲ್ಸ್‌ ತಂಡವು 685 ರನ್‌ಗಳಿಂದ ಕ್ವಿನ್ಸ್‌ಲೆಂಡ್ ವಿರುದ್ಧ ಗೆದ್ದಿದ್ದು ಇದುವರೆಗಿನ ದಾಖಲೆಯಾಗಿತ್ತು. ರಣಜಿ ಟ್ರೋಫಿ ಟೂರ್ನಿಯಲ್ಲಿ 1953–54ರಲ್ಲಿ ಬಂಗಾಳ ತಂಡವು 540 ರನ್‌ಗಳಿಂದ ಒಡಿಶಾ ಎದುರು ಜಯಿಸಿದ ದಾಖಲೆಯೂ ಇತ್ತು.

ನಗರದ ಹೊರವಲಯದ ಆಲೂರಿನ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ನಡೆದ ಪಂದ್ಯದ ನಾಲ್ಕನೇ ದಿನ ಮುಂಬೈ ಈ ಸಾಧನೆ ಮಾಡಿತು. ಮುಂಬೈ ತಂಡವು ಉತ್ತರಾಖಂಡಕ್ಕೆ 794 ರನ್‌ಗಳ ಗುರಿ ನೀಡಿತ್ತು. ಅದಕ್ಕುತ್ತರವಾಗಿ ಉತ್ತರಾಖಂಡವು 27.5 ಓವರ್‌ಗಳಲ್ಲಿ 69 ರನ್‌ ಗಳಿಸಿ ಆಲೌಟ್ ಆಯಿತು. ಧವಳ್ ಕುಲಕರ್ಣಿ, ಶಮ್ಸ್ ಮುಲಾನಿ ಮತ್ತು ತನುಷ್ ಕೋಟ್ಯಾನ್ ತಲಾ ಮೂರು ವಿಕೆಟ್ ಗಳಿಸಿದರು.

41 ಬಾರಿ ರಣಜಿಯ ಟ್ರೋಫಿ ವಿಜೇತ ಮುಂಬೈ ತಂಡವು ಸೆಮಿಫೈನಲ್‌ನಲ್ಲಿ ಉತ್ತರಪ್ರದೇಶವನ್ನು ಎದುರಿಸಲಿದೆ. ಬುಧವಾರ ನಡೆದ ಪಂದ್ಯದಲ್ಲಿ ಉತ್ತರಪ್ರದೇಶ ತಂಡವು ಕರ್ನಾಟಕದ ಎದುರು ಜಯಿಸಿತ್ತು.

ಸಂಕ್ಷಿಪ್ತ ಸ್ಕೋರು: ಆಲೂರು ಕ್ರೀಡಾಂಗಣ: ಮೊದಲ ಇನಿಂಗ್ಸ್– ಮುಂಬೈ: 166.4 ಓವರ್‌ಗಳಲ್ಲಿ 8ಕ್ಕೆ647ಡಿ, ಉತ್ತರಾಖಂಡ: 41.4 ಓವರ್‌ಗಳಲ್ಲಿ 114, ಎರಡನೇ ಇನಿಂಗ್ಸ್: ಮುಂಬೈ: 58 ಓವರ್‌ಗಳಲ್ಲಿ 3ಕ್ಕೆ261, ಉತ್ತರಾಖಂಡ: 27.5 ಓವರ್‌ಗಳಲ್ಲಿ 69 (ಕುನಾಲ್ ಚಾಂಡೆಲಾ 21, ಶಿವಂ ಖುರಾನ ಔಟಾಗದೆ 25, ಧವಳ್ ಕುಲಕರ್ಣಿ 11ಕ್ಕೆ3, ಶಮ್ಸ್ ಮುಲಾನಿ 15ಕ್ಕೆ3, ತನುಷ್ ಕೋಟ್ಯಾನ್ 13ಕ್ಕೆ3) ಫಲಿತಾಂಶ: ಮುಂಬೈ ತಂಡಕ್ಕೆ 725 ರನ್‌ಗಳ ಜಯ. ಸೆಮಿಫೈನಲ್‌ಗೆ ಪ್ರವೇಶ

ಮೊದಲ ಇನಿಂಗ್ಸ್–ಪಂಜಾಬ್: 71.2 ಓವರ್‌ಗಳಲ್ಲಿ 219, ಮಧ್ಯಪ್ರದೇಶ: 154.5 ಓವರ್‌ಗಳಲ್ಲಿ 397, ಎರಡನೇ ಇನಿಂಗ್ಸ್: ಪಂಜಾಬ್: 68.4 ಓವರ್‌ಗಳಲ್ಲಿ 203 (ಅನ್ಮೋಲ್‌ಪ್ರೀತ್ ಸಿಂಗ್ 31, ಅನ್ಮೋಲ್ ಮಲ್ಹೋತ್ರಾ 34, ಸಿದ್ಧಾರ್ಥ್ ಕೌಲ್ 31, ಮಯಂಕ್ ಮಾರ್ಕಂಡೆ ಔಟಾಗದೆ 33, ಕುಮಾರ್ ಕಾರ್ತಿಕೇಯ 50ಕ್ಕೆ6, ಸಾರಾಂಶ್ ಜೈನ್ 100ಕ್ಕೆ4) ಮಧ್ಯಪ್ರದೇಶ: 5.1 ಓವರ್‌ಗಳಲ್ಲಿ 26 (ಯಶ್ ದುಬೆ ಔಟಾಗದೆ 17, ಹಿಮಾಂಶು ಮಂತ್ರಿ ಔಟಾಗದೆ 9) ಫಲಿತಾಂಶ: ಮಧ್ಯಪ್ರದೇಶಕ್ಕೆ 10 ವಿಕೆಟ್‌ಗಳ ಗೆಲುವು.

ಜಸ್ಟ್ ಕ್ರಿಕೆಟ್ ಮೈದಾನ: ಮೊದಲ ಇನಿಂಗ್ಸ್– ಬಂಗಾಳ: 218.4 ಓವರ್‌ಗಳಲ್ಲಿ 7ಕ್ಕೆ773, ಜಾರ್ಖಂಡ್: 96 ಓವರ್‌ಗಳಲ್ಲಿ 298 (ನದೀಮ್ 25, ಆಶಿಶ್ ಕುಮಾರ್ 14, ಸಯಾನ್ ಮಂಡಲ್ 71ಕ್ಕೆ4, ಶಾಬಾಜ್ ಅಹಮದ್ 51ಕ್ಕೆ4), ಎರಡನೇ ಇನಿಂಗ್ಸ್: ಬಂಗಾಳ: 31 ಓವರ್‌ಗಳಲ್ಲಿ 3ಕ್ಕೆ76 (ಅಭಿಷೇಕ್ ರಾಮನ್ 22, ಅನುಸ್ಟುಪ್ ಮಜುಂದಾರ್ ಬ್ಯಾಟಿಂಗ್ 22, ಮನೋಜ್ ತಿವಾರಿ ಬ್ಯಾಟಿಂಗ್ 12, ಶಾಬಾಜ್ ನದೀಂ 18ಕ್ಕೆ3)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT