ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಣಜಿ ಕ್ವಾರ್ಟರ್‌ಫೈನಲ್: ‘ತ್ರಿವಳಿ ವೇಗಿ‘ಗಳ ದಾಳಿಗೆ ಒಲಿದ ಮುನ್ನಡೆ

ಒಂದೇ ದಿನ 21 ವಿಕೆಟ್‌ಗಳ ಪತನ; ಉತ್ತರ ಪ್ರದೇಶಕ್ಕೆ ಹಿನ್ನಡೆ, ಮರುಹೋರಾಟ
Last Updated 7 ಜೂನ್ 2022, 19:31 IST
ಅಕ್ಷರ ಗಾತ್ರ

ಬೆಂಗಳೂರೂ: ಒಂದೇ ದಿನದಲ್ಲಿ ಇಪ್ಪತ್ತೊಂದು ವಿಕೆಟ್‌ಗಳ ಪತನ ಮತ್ತು ಕರ್ನಾಟಕ ಬಳಗಕ್ಕೆ ಇನಿಂಗ್ಸ್ ಮುನ್ನಡೆ..

ಆಲೂರಿನ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಮಂಗಳವಾರ ಚುರುಕುಬಿಸಿಲಿನಲ್ಲಿ ನಡೆದ ಕರ್ನಾಟಕ ಮತ್ತು ಉತ್ತರಪ್ರದೇಶ ನಡುವಣದ ರಣಜಿ ಟ್ರೋಫಿ ಕ್ವಾರ್ಟರ್‌ಫೈನಲ್‌ ಪಂದ್ಯದ ಎರಡನೇ ದಿನದಾಟದ ಸಾರಾಂಶ ಇದು. ಇದಲ್ಲದೇ ಮೂರನೇ ದಿನವಾದ ಬುಧವಾರವೇ ರೋಚಕ ಫಲಿತಾಂಶ ನೀಡುವ ನಿರೀಕ್ಷೆಯನ್ನೂ ಈ ಪಂದ್ಯ ಹುಟ್ಟುಹಾಕಿದೆ. ಮೊದಲ ಇನಿಂಗ್ಸ್‌ನಲ್ಲಿ ಭಾರತದ ತ್ರಿವಳಿ ವೇಗಿಗಳು ತೋರಿರುವ ಪ್ರತಾಪದಿಂದಾಗಿ ಕರ್ನಾಟಕವೇ ಜಯಿಸುವ ನೆಚ್ಚಿನ ತಂಡವಾಗಿದೆ.

ಪಂದ್ಯದ ಮೊದಲ ದಿನವಾದ ಸೋಮವಾರ ಕರ್ನಾಟಕವು 72 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 213 ರನ್ ಗಳಿಸಿತ್ತು. ಎರಡನೇ ದಿನ ಬೆಳಿಗ್ಗೆ ಕ್ರೀಸ್‌ನಲ್ಲಿದ್ದ ಶ್ರೇಯಸ್ ಅಯ್ಯರ್ (ಅಜೇಯ 56; 80ಎ) ಪೂರೈಸಿದರು. ತಂಡವು 84 ಓವರ್‌ಗಳಲ್ಲಿ 253 ರನ್ ಗಳಿಸಿ ಆಲೌಟ್ ಆಯಿತು.

ಇದಕ್ಕುತ್ತರವಾಗಿ ಬ್ಯಾಟಿಂಗ್ ಆರಂಭಿಸಿದ ಉತ್ತರಪ್ರದೇಶ ತಂಡವು ರೋನಿತ್ ಮೋರೆ (47ಕ್ಕೆ3), ವೈಶಾಖ್ ವಿಜಯಕುಮಾರ್ (29ಕ್ಕೆ2) ಮತ್ತು ವಿದ್ವತ್ ಕಾವೇರಪ್ಪ (19ಕ್ಕೆ2) ಅವರ ವೇಗದ ದಾಳಿಯ ಮುಂದೆ ತತ್ತರಿಸಿತು. 155 ರನ್‌ಗಳಿಗೆ ಕುಸಿಯಿತು. ಮನೀಷ್ ಪಾಂಡೆ ಬಳಗ 98 ರನ್‌ಗಳ ಮುನ್ನಡೆ ಗಳಿಸಿತು. ಎರಡನೇ ಇನಿಂಗ್ಸ್‌ನಲ್ಲಿ ಕರ್ನಾಟಕವು 34 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 100 ರನ್ ಗಳಿಸಿದೆ. ಒಟ್ಟು 198 ರನ್‌ಗಳ ಮುನ್ನಡೆ ಹೊಂದಿದೆ.

ಬಾಲಂಗೋಚಿ ಬ್ಯಾಟರ್‌ಗಳಾದ ಶಿವಂ ಮಾವಿ (32 ರನ್)ಮತ್ತು ಅಂಕಿತ್ ರಜಪೂತ್ (ಔಟಾಗದೆ 18) ಗಳಿಸಿದ 44 ರನ್‌ಗಳ ಜೊತೆಯಾಟವೇ ಉತ್ತರ ಪ್ರದೇಶದ ಇನಿಂಗ್ಸ್‌ನ ದೊಡ್ಡ ಮೊತ್ತದ ಪಾಲುದಾರಿಕೆ ಆಟ. ರೋನಿತ್ ಮತ್ತು ವೈಶಾಖ್ ಅವರು ಅಗ್ರಕ್ರಮಾಂಕದ ಬ್ಯಾಟರ್‌ಗಳನ್ನು ಪೆವಿಲಿಯನ್‌ಗೆ ಕಳಿಸಿದರು.

ಲೈನ್ ಮತ್ತು ಲೆಂಗ್ತ್‌ ಶಿಸ್ತು ಕಾಪಾಡಿಕೊಂಡು ಬೌಲಿಂಗ್ ಮಾಡಿದ ಯುವಪ್ರತಿಭೆ ವಿದ್ವತ್ ಮಧ್ಯಮ ಕ್ರಮಾಂಕಕ್ಕೆ ಬಿಸಿ ಮುಟ್ಟಿಸಿದರು. ಏಳು ಓವರ್‌ ಬೌಲಿಂಗ್‌ನಲ್ಲಿ ಮೂರು ಮೇಡನ್ ಮಾಡಿದರು. 23 ವರ್ಷದ ವಿದ್ವತ್‌ಗೆ ಇದು ಎರಡನೇ ಪ್ರಥಮ ದರ್ಜೆ ಪಂದ್ಯ. ಸ್ಪಿನ್ನರ್ ಗೌತಮ್ ಕೂಡ ಎರಡು ವಿಕೆಟ್ ಪಡೆದರು. ಫೀಲ್ಡರ್‌ಗಳು ಎರಡು ಕ್ಯಾಚ್‌ಗಳನ್ನು ಕೈಚೆಲ್ಲದಿದ್ದರೆ ಇನ್ನೂ ಕಡಿಮೆ ಮೊತ್ತಕ್ಕೆ ಉತ್ತರಪ್ರದೇಶ ಆಲೌಟ್ ಆಗುವ ಸಂಭವವಿತ್ತು.

ಉತ್ತರಪ್ರದೇಶದ ತಿರುಗೇಟು
ಎರಡನೇ ದಿನ ಮಧ್ಯಾಹ್ನವೇ ಲಭಿಸಿದ ಮುನ್ನಡೆಯಿಂದ ಸಂತಸದಿಂದ ಎರಡನೇ ಇನಿಂಗ್ಸ್‌ ಬ್ಯಾಟಿಂಗ್ ಆರಂಭಿಸಿದ ಕರ್ನಾಟಕ ತಂಡಕ್ಕೆ ಉತ್ತರಪ್ರದೇಶ ತಿರುಗೇಟು ನೀಡಿತು.

ಬೆಳಿಗ್ಗೆಯಿಂದ ವೇಗಿಗಳು ಮೆರೆದಾಡಿದ್ದ ಪಿಚ್‌ನಲ್ಲಿ ಎಡಗೈ ಸ್ಪಿನ್ನರ್ ಸೌರಭ್ ಕುಮಾರ್ (32ಕ್ಕೆ3) ಮಿಂಚಿದರು. ಹದವಾದ ವೇಗ ಬೆರೆಸಿದ ಅವರ ಸ್ಪಿನ್ ಎಸೆತಗಳಿಗೆ ಮಯಂಕ್ ಅಗರವಾಲ್, ಶ್ರೇಯಸ್ ಗೋಪಾಲ್ ಮತ್ತು ವೈಶಾಖ್ ವಿಕೆಟ್ ಒಪ್ಪಿಸಿದರು. ಒಂಟಿ ರನ್‌ ಕೆಟ್ಟ ನಿರ್ಧಾರಕ್ಕೆ ಮನೀಷ್ ಪಾಂಡೆ ರನ್‌ಔಟ್ ಆದರು. ಮೊದಲ ಇನಿಂಗ್ಸ್‌ನಲ್ಲಿ ಅರ್ಧಶತಕ ಗಳಿಸಿದ್ದ ಆರ್. ಸಮರ್ಥ್ ಅವರನ್ನು ಪ್ರಿನ್ಸ್ ಯಾದವ್ ಕ್ಲೀನ್‌ಬೌಲ್ಡ್ ಮಾಡಿದರು. ಕರುಣ್ ನಾಯರ್ ಮತ್ತು ಕೆ.ವಿ. ಸಿದ್ಧಾರ್ಥ್ ವಿಕೆಟ್‌ಗಳನ್ನು ಗಳಿಸಿದ ಅಂಕಿತ್ ರಜಪೂತ್ ತೊಡೆ ತಟ್ಟಿ ಸಂಭ್ರಮಿಸಿದರು.

ಸ್ಕೋರ್‌ ಕಾರ್ಡ್‌

ಕರ್ನಾಟಕ ಮೊದಲ ಇನಿಂಗ್ಸ್

253 (84 ಓವರ್‌ಗಳಲ್ಲಿ)

ಶ್ರೇಯಸ್ ಔಟಾಗದೆ 56 (80ಎ, 4X6, 6X2), ವೈಶಾಖ್ ಸಿ ಧ್ರುವ ಬಿ ಅಂಕಿತ್ 12 (26ಎ, 4X2), ರೋನಿತ್ ಬಿ ಯಶ್ 6 (25ಎ,4X1), ವಿದ್ವತ್ ಸಿ ರಿಂಕು ಬಿ ಯಶ್ 4 (10ಎ, 4X1)

ಇತರೆ (ಲೆಗ್‌ಬೈ 1, ವೈಡ್ 1, ನೋಬಾಲ್ 1)3

ವಿಕೆಟ್ ಪತನ: 8–214 (ವೈಶಾಖ್ ವಿಜಯಕುಮಾರ್;72.5), 9–243 (ರೋನಿತ್ ಮೋರೆ; 81.2), 10–253 (ವಿದ್ವತ್ ಕಾವೇರಪ್ಪ;83.6))

ಬೌಲಿಂಗ್‌: ಯಶ್ ದಯಾಳ್ 15–4–43–2, ಅಂಕಿತ್ ರಜಪೂತ್ 14–2–42–1, ಶಿವಂ ಮಾವಿ 14–4–60–3, ಸೌರಭ್ ಕುಮಾರ್ 32–7–73–4, ಪ್ರಿನ್ಸ್ ಯಾದವ್ 4–0–15–0, ಕರಣ್ ಶರ್ಮಾ 5–0–19–0

ಉತ್ತರ ಪ್ರದೇಶ ಮೊದಲ ಇನಿಂಗ್ಸ್ 155 (37.3 ಓವರ್‌ಗಳಲ್ಲಿ)

ಆರ್ಯನ್ ಸಿ ಶರತ್ ಬಿ ರೋನಿತ್ 5 (93, 4X1), ಸಮರ್ಥ್‌ಸಿಂಗ್ ಸಿ ಶರತ್ ಬಿ ವೈಶಾಖ್ 0 (3ಎ), ಪ್ರಿಯಂ ಸಿ ಮತ್ತು ಬಿ ರೋನಿತ್ 39 (59ಎ, 4X7), ಕರಣ್ ಸಿ ಶರತ್ ಬಿ ವೈಶಾಖ್ 2 (25ಎ), ರಿಂಕು ಸಿ ಕರುಣ್ ಬಿ ಗೌತಮ್ 33 (42ಎ, 4X6), ಧ್ರುವ ಸಿ ಶರತ್ ಬಿ ರೋನಿತ್ 9 (11ಎ, 4X2), ಪ್ರಿನ್ಸ್ ಬಿ ವಿದ್ವತ್ 0 (10ಎ), ಸೌರಭ್‌ ಸಿ ಶರತ್ ಬಿ ಗೌತಮ್‌ 0 (3ಎ), ಶಿವಂ ಸಿ ಕರುಣ್ ಬಿ ಶ್ರೇಯಸ್‌ 32 (35ಎ, 4X3, 6X1), ಯಶ್ ಸಿ ಮಯಂಕ್ ಬಿ ವಿದ್ವತ್ 13 (13ಎ, 4X1, 6X1), ಅಂಕಿತ್‌ ಔಟಾಗದೆ 18 (16ಎ, 4X1, 6X1)

ಇತರೆ (ಲೆಗ್‌ಬೈ 3, ನೋಬಾಲ್ 1) 4

ವಿಕೆಟ್ ಪತನ: 1–2 (ಸಮರ್ಥ್ ಸಿಂಗ್;1.1),2–10(ಆರ್ಯನ್ ಜುಯಾಲ್ 2.5), 3–34 (ಕರಣ್ ಶರ್ಮಾ; 12.3), 4–76 (ಪ್ರಿಯಂ ಗರ್ಗ್; 20.5), 5–86 (ಧ್ರುವ ಜುರೇಲ್; 22.6), 6–92 (ರಿಂಕುಸಿಂಗ್;25.4), 7–92 (ಪ್ರಿನ್ಸ್ ಯಾದವ್; 26.4), 8–92 (ಸೌರಭ್ ಕುಮಾರ್; 27.1), 9–111(ಯಶ್ ದಯಾಳ್; 30.3), 10–155 (ಶಿವಂ ಮಾವಿ;37.3)

ಬೌಲಿಂಗ್‌: ರೋನಿತ್ ಮೋರೆ 12–1–47–3, ವೈಶಾಖ ವಿಜಯಕುಮಾರ್ 8–1–29–2, ವಿದ್ವತ್ ಕಾವೇರಪ್ಪ 7–3–19–2, ಕೃಷ್ಣಪ್ಪ ಗೌತಮ್ 8–1–43–2, ಶ್ರೇಯಸ್ ಗೋಪಾಲ್ 2.3 –0–14–1

ಕರ್ನಾಟಕ ಎರಡನೇ ಇನಿಂಗ್ಸ್ 8ಕ್ಕೆ100 (34 ಓವರ್‌ಗಳಲ್ಲಿ)
ಸಮರ್ಥ್ 11 (24ಎ, 4X1), ಮಯಂಕ್ ಸಿ ಜುರೇಲ್ ಬಿ ಸೌರಬ್ 22 (29ಎ, 4X5), ಕರುಣ್ ಸಿ ಸಿಂಗ್ ಬಿ ರಜಪೂತ್ 10 (29ಎ, 4X1), ಸಿದ್ಧಾರ್ಥ್ ಬಿ ರಜಪೂತ್ 15 (44ಎ, 4X3), ಮನೀಷ್ ರನ್‌ಔಟ್/ ಕರಣ್ 4 (5ಎ, 4X1), ಶ್ರೇಯಸ್ ಸಿ ಆರ್ಯನ್ ಬಿ ಸೌರಭ್ 3 (28ಎ), ಶರತ್ ಔಟಾಗದೆ 10 (34ಎ, 4X1), ಗೌತಮ್ ಸಿ ಧ್ರುವ ಬಿ ಶಿವಂ 1 (5ಎ), ವೈಶಾಖ್ ಎಲ್‌ಬಿಡಬ್ಲ್ಯು ಸೌರಭ್ 5 (8ಎ, 4X1)

ಇತರೆ 19 (ಬೈ 8, ಲೆಗ್‌ಬೈ 9, ನೋಬಾಲ್ 2)

ವಿಕೆಟ್ ಪತನ: 1–33 (ಸಮರ್ಥ್; 8.1), 2–35 (ಮಯಂಕ್ ಅಗರವಾಲ್; 11.1), 3–67 (ಕರುಣ್ ನಾಯರ್; 18.3), 4–71 (ಮನೀಷ್; 20.2), 5–77 (ಸಿದ್ಧಾರ್ಥ್; 22.5), 6–84 (ಶ್ರೇಯಸ್; 29.3), 7–95 (ಗೌತಮ್; 32.1), 8–100 (ವೈಶಾಖ್; 33.6)

ಬೌಲಿಂಗ್‌: ಯಶ್ ದಯಾಳ್ 6–0–25–0, ಅಂಕಿತ್ ರಜಪೂತ್ 8–2–15–2, ಪ್ರಿನ್ಸ್ ಯಾದವ್ 4–2–6–1, ಸೌರಭ್ 14–4–32–3, ಮಾವಿ 2–0–5–1

*
ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ನಾವು ಇನ್ನೂ ಚೆನ್ನಾಗಿ ಮಾಡಬಹುದಿತ್ತು. ಆದರೆ, ಮೊದಲ ಇನಿಂಗ್ಸ್ ಮುನ್ನಡೆ ಪಡೆದಿರುವುದು ಒಳ್ಳೆಯ ಸಾಧನೆ.
– ವಿದ್ವತ್ ಕಾವೇರಪ್ಪ, ಕರ್ನಾಟಕದ ಬೌಲರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT