ಕ್ರಿಕೆಟ್ ದಿಗ್ಗಜರ ಜತೆ ರಣವೀರ್ ಸಿಂಗ್ ಸೆಲ್ಫೀ

ಗುರುವಾರ , ಜೂಲೈ 18, 2019
23 °C
ಭಾರತ–ಪಾಕ್ ಕ್ರಿಕೆಟ್ ವೇಳೆ ತೆಗೆದ ಸೆಲ್ಫೀಗಳನ್ನು ಟ್ವಿಟರ್‌ನಲ್ಲಿ ಹಂಚಿಕೊಂಡ ನಟ

ಕ್ರಿಕೆಟ್ ದಿಗ್ಗಜರ ಜತೆ ರಣವೀರ್ ಸಿಂಗ್ ಸೆಲ್ಫೀ

Published:
Updated:

ಮ್ಯಾಂಚೆಸ್ಟರ್: ಇಲ್ಲಿನ ಎಮಿರೇಟ್ಸ್‌ ಓಲ್ಡ್‌ ಟ್ರಾಫರ್ಡ್‌ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಭಾರತ–ಪಾಕಿಸ್ತಾನ ಕ್ರಿಕೆಟ್ ಪಂದ್ಯಾವಳಿಯ ವೇಳೆ ಬಾಲಿವುಡ್ ನಟ ರಣವೀರ್ ಸಿಂಗ್ ಕೆಲ ಹೊತ್ತು ಕಾಮೆಂಟೇಟರ್ ಆಗಿ ಪ್ರೇಕ್ಷಕರ ಗಮನ ಸೆಳೆದಿದ್ದರು. ಆಗ ಕ್ರಿಕೆಟ್ ದಿಗ್ಗಜರ ಜತೆ ಕ್ಲಿಕ್ಕಿಸಿದ ಸೆಲ್ಫೀಗಳನ್ನು ಮಂಗಳವಾರ ಟ್ವೀಟ್‌ ಮಾಡಿದ್ದು, ಕ್ರಿಕೆಟ್‌ ಪ್ರಿಯರ ಮನಸೂರೆಗೊಂಡಿದ್ದಾರೆ.

ಇದನ್ನೂ ಓದಿ: ಏನಿದು ಡಕ್ವರ್ಥ್ ಲೂಯಿಸ್ ನಿಯಮ? ಕ್ರಿಕೆಟ್ ಪ್ರೇಮಿಗಳ ಪ್ರಶ್ನೆಗೆ ಇಲ್ಲಿದೆ ಉತ್ತರ​

ಸುನಿಲ್ ಗವಾಸ್ಕರ್, ವೀರೇಂದ್ರ ಸೆಹ್ವಾಗ್ ಹಾಗೂ ಇತರ ಕ್ರಿಕೆಟ್ ದಿಗ್ಗಜರ ಜತೆ ಕಾಮೆಂಟೇಟರ್ ಆಗಿ ಕಾಣಿಸಿಕೊಂಡು ಪ್ರೇಕ್ಷಕರನ್ನು ರಂಜಿಸಿದ್ದಲ್ಲದೆ ಅವರ ಜತೆ ಸೆಲ್ಫೀ ತೆಗೆದುಕೊಂಡಿದ್ದ ರಣವೀರ್ ನಂತರ ಫೀಲ್ಡ್‌ಗೂ ತೆರಳಿದ್ದರು. ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಆಟಗಾರ ಕೆ.ಎಲ್‌.ರಾಹುಲ್ ಜತೆಗೂ ಸೆಲ್ಫೀ ತೆಗೆದುಕೊಂಡಿದ್ದರು.

ಇದನ್ನೂ ಓದಿ: ಜಯದ ‘ಮಳೆ’ಯಲ್ಲಿ ಮಿಂದೆದ್ದ ಭಾರತ

‘ಜಗತ್ತು ಈವರೆಗೆ ಕಂಡಿರದ ಅತ್ಯಂತ ಸ್ಫೋಟಕ ಬ್ಯಾಟ್ಸ್‌ಮನ್!’ ಎಂದು ಸೆಹ್ವಾಗ್‌ ಜತೆಗಿನ ಸೆಲ್ಫೀಯನ್ನು ಟ್ವೀಟ್ ಮಾಡಿದ್ದಾರೆ.

ಸೌರವ್ ಗಂಗೂಲಿ ಅವರನ್ನು ‘ಕೋಲ್ಕತ್ತದ ರಾಜಕುಮಾರ’ ಎಂದು ಬಣ್ಣಿಸಿರುವ ರಣವೀರ್, ‘ಆಫ್‌ ಸೈಡ್‌ನ ದೇವರು! ಬಂಗಾಳದ ಟೈಗರ್’ ಎಂದು ಟ್ವೀಟ್ ಮಾಡಿದ್ದಾರೆ.

ಸಚಿನ್ ತೆಂಡೂಲ್ಕರ್, ಶಿಖರ್ ಧವನ್, ಹಾರ್ದಿಕ್ ಪಾಂಡ್ಯ ಜತೆಗಿನ ಸೆಲ್ಫೀಗಳನ್ನೂ ಪೋಸ್ಟ್ ಮಾಡಿರುವ ರಣವೀರ್, ಪ್ರತಿಯೊಬ್ಬ ಆಟಗಾರನ ಕುರಿತೂ ಒಂದೊಂದು ಆಕರ್ಷಕ ಸಂದೇಶಗಳನ್ನೂ ಪ್ರಕಟಿಸಿದ್ದಾರೆ.

ಇನ್ನಷ್ಟು...

‘ಗರಿಷ್ಠ ರನ್’ ರೇಸ್‌ನಲ್ಲಿ ಯಾರ್ಯಾರು? ಯಾರಿಗೆ ಎಷ್ಟು ವಿಕೆಟ್?

ಐಸಿಸಿಗೆ ಪಾಕ್ ಕ್ರಿಕೆಟ್ ಮಂಡಳಿ ದೂರು

ಅಂಪೈರಿಂಗ್ ಎಡವಟ್ಟು

ಯುವರಾಜ್ ಸಿಂಗ್ ನೆನಪು | ‘ಸಿಕ್ಸರ್ ಸಿಂಗ್’ ಈಸ್ ಕಿಂಗ್

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !