ಬೆಂಗಳೂರು: ಜಮ್ಮು –ಕಾಶ್ಮೀರದ ಯುವ ಬೌಲರ್ ರಸಿಕ್ ಸಲಾಂ ಅವರಿಗೆ ಉತ್ತಮ ಭವಿಷ್ಯ ಇದೆ ಎಂದು ಅನುಭವಿ ಆಟಗಾರ ಯುವರಾಜ್ ಸಿಂಗ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮುಂಬೈ ಇಂಡಿಯನ್ಸ್ ತಂಡ ದಲ್ಲಿ ಯುವರಾಜ್ ಜೊತೆಗೆ ರಸಿಕ್ ಆಡುತ್ತಿದ್ದಾರೆ. ರಸಿಕ್ಗೆ ಇದು ಪ್ರಥಮ ಐಪಿಎಲ್ ಟೂರ್ನಿ ಯಾಗಿದೆ. ಅವರು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯ ದಲ್ಲಿ ಪದಾರ್ಪಣೆ ಮಾಡಿದ್ದರು.ನಾಲ್ಕು ಓವರ್ ಬೌಲಿಂಗ್ ಮಾಡಿದ್ದ 17 ವರ್ಷದ ರಸಿಕ್ 42 ರನ್ ಕೊಟ್ಟಿದ್ದರು.
‘ನೆಟ್ಸ್ನಲ್ಲಿ ರಸಿಕ್ ಬೌಲಿಂಗ್ ನೋಡಿದ್ದೇನೆ. ಉತ್ತಮವಾಗಿ ಸ್ವಿಂಗ್ ಮಾಡುತ್ತಾರೆ. ಅವರ ಕೊನೆ ಯ ಎರಡು ಎಸೆತಗಳಲ್ಲಿ ಒಂದು ಬೌಂಡರಿ ಮತ್ತು ಒಂದು ಸಿಕ್ಸರ್ ಹೊಡೆದಿದ್ದರು. ಬಿಟ್ಟರೆ ಉಳಿದ ಎಸೆತಗಳನ್ನು ಉತ್ತಮ ವಾಗಿ ಹಾಕಿದ್ದರು. ಎರಡು–ಮೂರು ವರ್ಷಗಳಲ್ಲಿ ಉತ್ತಮ ಆಟಗಾರನಾಗಿ ಬೆಳೆಯಲಿದ್ದಾರೆ’ ಎಂದರು.