ಅಹಮದಾಬಾದ್: ಇಂಡಿಯನ್ ಪ್ರೀಮಿಯರ್ ಲೀಗ್ ಅಂದರೆ, ದುಡ್ಡಿನ ಆಟ ಮಾತ್ರವಲ್ಲ, ಅದು ದೇಶೀಯ ಪ್ರತಿಭೆಗಳನ್ನು ಹೆಕ್ಕಿ ತೆಗಿಯುವ ಅದ್ಭುತ ವೇದಿಕೆ ಕೂಡ. ಐಪಿಎಲ್ನಿಂದ ಬೆಳಕಿಗೆ ಬಂದಿರುವ ಪ್ರತಿಭೆಗಳನ್ನು ನೋಡುತ್ತಾ ಹೋದರೆ, ಅನೇಕ ಆಟಗಾರರು ಸಿಗುತ್ತಾರೆ. ಅದರಲ್ಲಿ, ವೈಭವ್ ಸೂರ್ಯವಂಶಿ, ರಿಷಭ್ ಪಂತ್, ಮೊಹಮ್ಮದ್ ಸಿರಾಜ್, ಸಾಯಿ ಸುದರ್ಶನ್ ಸೇರಿ ಅನೇಕ ಹೆಸರುಗಳು ನಮಗೆ ಕಾಣಸಿಗುತ್ತವೆ. ಈ ಸಾಲಿಗೆ ಮತ್ತೊಂದು ಹೆಸರು ಸೇರ್ಪಡೆಗೊಂಡಿದೆ. ಅದು, ಬೇರೆ ಯಾರೂ ಅಲ್ಲ ಆರ್ಸಿಬಿ ತಂಡದ ವೇಗದ ಬೌಲರ್ ರಸಿಕ್ ಸಲಾಮ್ ದಾರ್.

ಜಮ್ಮು ಮತ್ತು ಕಾಶ್ಮೀರ ಮೂಲದ ರಸಿಕ್ ಅವರು ಇಂಡಿಯನ್ ಪ್ರೀಮಿಯರ್ ಲೀಗ್ ಫೈನಲ್ ಪಂದ್ಯದಲ್ಲಿ, ಗುಜರಾತ್ ಟೈಟನ್ಸ್ ತಂಡದ 3 ಪ್ರಮುಖ ಬ್ಯಾಟರ್ಗಳನ್ನು ಪೆವಿಲಿಯನ್ಗೆ ಕಳಿಸುವ ಮೂಲಕ ಆರ್ಸಿಬಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

26 ವರ್ಷದ ಯುವ ವೇಗದ ಬೌಲರ್ ಆಗಿರುವ ಇವರು, ಈ ಬಾರಿ ಆರ್ಸಿಬಿ ಪರ 12 ಪಂದ್ಯಗಳಿಂದ 9.45ರ ಎಕಾನಮಿಯಲ್ಲಿ ಬರೋಬ್ಬರಿ 19 ವಿಕೆಟ್ ಪಡೆದಿದ್ದಾರೆ. ಜೋಶ್ ಹ್ಯಾಜಲ್ವುಡ್ ಹಾಗೂ ಭುವನೇಶ್ವರ ಕುಮಾರ್ ಅವರಂತಹ ಬೌಲರ್ಗಳು ಆರ್ಸಿಬಿ ಪರ ಅಮೋಘ ದಾಳಿ ನಡೆಸುತ್ತಿದ್ದರಿಂದ ಜಮ್ಮು ಮತ್ತು ಕಾಶ್ಮೀರದ ರಸಿಕ್ ಅವರ ಪ್ರದರ್ಶನ ಮುನ್ನಲೆಗೆ ಬಂದಿಲ್ಲ. ಆದರೆ, ಅವರು ತಮ್ಮ ಜವಾಬ್ದಾರಿಯನ್ನು ಅತ್ಯಂತ ಯಶಸ್ವಿಯಾಗಿ ನಿಭಾಯಿಸಿದ್ದಾರೆ.

ಕಾಶ್ಮೀರದಲ್ಲಿ ಕ್ರಿಕೆಟ್ ಆಡುತ್ತಾ ಬೆಳೆದ ರಸಿಕ್ ಅವರ ಪ್ರತಿಭೆಯನ್ನು ಗುರುತಿಸಿದವರು ಭಾರತ ತಂಡದ ಮಾಜಿ ಆಟಗಾರ ಇರ್ಫಾನ್ ಪಠಾಣ್. 2018-19ರಲ್ಲಿ ಜಮ್ಮು ಮತ್ತು ಕಾಶ್ಮೀರ ಪರ ದೇಶೀಯ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ ಅವರು, ರಣಜಿ ಟ್ರೋಫಿ, ವಿಜಯ್ ಹಜಾರೆ ಮತ್ತು ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಉತ್ತಮ ಬೌಲಿಂಗ್ ಪ್ರದರ್ಶಿಸಿದ್ದಾರೆ. ಅವರು, 140 ಕಿ.ಮೀ ಗೂ ಅಧಿಕ ವೇಗದಲ್ಲಿ ಬೌಲಿಂಗ್ ಮಾಡುವ ಸಾಮರ್ಥ್ಯ ಹೊಂದಿದ್ದಾರೆ.

2019ರಲ್ಲಿ ತಮ್ಮ 17ನೇ ವಯಸ್ಸಿಗೆ ಮುಂಬೈ ಇಂಡಿಯನ್ಸ್ ತಂಡದ ಪರ ಆಯ್ಕೆಯಾಗುತ್ತಾರೆ. ಮಾತ್ರವಲ್ಲ, ಅದೇ ವರ್ಷ ಅವರನ್ನು 19 ವರ್ಷದೊಳಗಿನವರ ಭಾರತ ತಂಡಕ್ಕೂ ಆಯ್ಕೆ ಮಾಡಲಾಗುತ್ತದೆ. ಆದರೆ, ಅವರ ಜನನ ಪ್ರಮಾಣಪತ್ರದಲ್ಲಿ ವ್ಯತ್ಯಾಸವಿದ್ದ ಕಾರಣ, ಅವರು ಸುಳ್ಳು ಹೇಳಿದ್ದಾರೆ ಎಂದು ಬಿಸಿಸಿಐ ಅವರಿಗೆ 2 ವರ್ಷಗಳ ಕಾಲ ಕ್ರಿಕೆಟ್ನಿಂದ ನಿಷೇಧ ಹೇರಿತು.

ಎರಡು ವರ್ಷಗಳ ನಿಷೇದ ಮುಗಿಸಿ ಬಂದ ರಸಿಕ್, 2022ರಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ತಂಡಕ್ಕೆ ಸೇರಿದರು. 2024ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ಗೆ ಆಯ್ಕೆಯಾಗಿ, 8 ಪಂದ್ಯಗಳಿಂದ 9 ವಿಕೆಟ್ ಪಡೆದು ಗಮನ ಸೆಳೆದರು.

2025ರ ಐಪಿಎಲ್ ಹರಾಜಿನಲ್ಲಿ ಆರ್ಸಿಬಿ ತಂಡವು ಅವರಿಗೆ ₹6 ಕೋಟಿ ನೀಡಿ ಖರೀದಿಸಿತು. ಅವರು ಆರ್ಸಿಬಿ ತಂಡಕ್ಕೆ ಸೇರ್ಪಡೆಯಾಗುತ್ತಿದ್ದಂತೆ, ಅವರ ಅದೃಷ್ಟ ಬದಲಾಗಿತ್ತದೆ. ಕಳೆದ ವರ್ಷ ಯಶ್ ದಯಾಳ್ ಅವರು ಆರ್ಸಿಬಿ ಪರ ಉತ್ತಮ ಪ್ರದರ್ಶನ ನೀಡಿದ್ದರಿಂದ, ರಸಿಕ್ ಅವರಿಗೆ ಆಡುವ ಅವಕಾಶ ಸಿಗಲಿಲ್ಲ. ಈ ಬಾರಿಯೂ ಆರಂಭಿಕ ಪಂದ್ಯಗಳಲ್ಲಿ ಅವಕಾಶ ಸಿಗೆದ ಬೆಂಚ್ ಕಾದಿದ್ದರು. ಆದರೆ, ನಂತರ ಸಿಕ್ಕ ಅವಕಾಶ ಬಳಸಿಕೊಂಡ ಅವರು ಆರ್ಸಿಬಿ ಪರ 19 ವಿಕೆಟ್ ಪಡೆದು ತಂಡದ ಯಶಸ್ಸಿಗೆ ಕೊಡುಗೆ ನೀಡಿದ್ದಾರೆ.

ರೈಟ್ ಆರ್ಮ್ ವೇಗದ ಬೌಲರ್ ಆಗಿರುವ ರಸಿಕ್, ಹೊಸ ಚೆಂಡಿನಲ್ಲಿ ಸ್ವಿಂಗ್, ಡೆತ್ ಓವರ್ಗಳಲ್ಲಿ ನಿಧಾನಗತಿಯ ಬೌಲಿಂಗ್ ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ದೇಶೀಯ ಟಿ20 ಕ್ರಿಕೆಟ್ನಲ್ಲಿ 31 ರನ್ಗಳಿಗೆ 6 ವಿಕೆಟ್ ಪಡೆದಿರುವುದು ಅವರ ಅತ್ಯುತ್ತಮ ಬೌಲಿಂಗ್ ಆಗಿದೆ. ಸದ್ಯ, ಐಪಿಎಲ್ನಲ್ಲಿ ಮಿಂಚುತ್ತಿರುವ ರಸಿಕ್, ಮುಂದಿನ ದಿನಗಳಲ್ಲಿ ಭಾರತದ ಪರ ಮಿಂಚಬಲ್ಲ ಭರವಸೆ ಮೂಡಿಸಿರುವ ಆಟಗಾರನಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.