ಯಾವುದೂ ಉತ್ತಮ ‘ಪ್ರವಾಸಿ’ ತಂಡವಲ್ಲ: ಶಾಸ್ತ್ರಿ

7

ಯಾವುದೂ ಉತ್ತಮ ‘ಪ್ರವಾಸಿ’ ತಂಡವಲ್ಲ: ಶಾಸ್ತ್ರಿ

Published:
Updated:
Deccan Herald

ಬ್ರಿಸ್ಬೆನ್: ಇಂದಿನ ಕಾಲಘಟ್ಟದಲ್ಲಿ ವಿಶ್ವದ ಯಾವುದೇ ಕ್ರಿಕೆಟ್ ತಂಡವು ಉತ್ತಮ ಪ್ರವಾಸಿ ತಂಡವಾಗಿ ಉಳಿದಿಲ್ಲ. ಅದಕ್ಕೆ ಭಾರತವೂ ಹೊರತಲ್ಲ ಎಂದು ಭಾರತ ತಂಡದ ಮುಖ್ಯ ಕೋಚ್ ರವಿಶಾಸ್ತ್ರಿ ಹೇಳಿದ್ದಾರೆ.

ಇದೇ 21ರಿಂದ  ಆಸ್ಟ್ರೇಲಿಯಾ ಎದುರು ಆರಂಭವಾಗಲಿರುವ ಕ್ರಿಕೆಟ್ ಸರಣಿ ಆಡಲು ಭಾರತವು ಇಲ್ಲಿಗೆ ಬಂದಿಳಿದಿದೆ. ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ರವಿಶಾಸ್ತ್ರಿ ಮಾತನಾಡಿದರು. ಭಾರತವು ತನ್ನ ದೇಶದಿಂದ ಹೊರಗೆ ಉತ್ತಮ ಸಾಧನೆ ಮಾಡುವುದಿಲ್ಲ. ಅದೊಂದು ಉತ್ತಮ ಪ್ರವಾಸಿ ತಂಡವಲ್ಲ ಎಂಬ ಟೀಕೆಗಳಿಗೆ ಪ್ರತಿಕ್ರಿಯಿಸಿದರು.

‘90ರ ದಶಕದ ಕೆಲವು ವರ್ಷ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ವಿದೇಶದಲ್ಲೂ ಗೆಲುವಿನ ಸಾಧನೆ ಮಾಡಿದ್ದವು. ಆದರೆ ಇತ್ತೀಚಿನ ವರ್ಷಗಳಲ್ಲಿ ಆ ತಂಡಗಳೂ ಬೇರೆ ದೇಶಗಳಲ್ಲಿ ಹೆಚ್ಚು ಗೆದ್ದಿಲ್ಲ. ಕಳೆದ ಐದಾರು ವರ್ಷಗಳಲ್ಲಿ ಯಾವ ತಂಡವು ತನ್ನ ದೇಶದ ಹೊರಗೆ ಉತ್ತಮ ಸಾಧನೆ ಮಾಡಿದೆ ನೀವೇ ತೋರಿಸಿ ನೋಡೋಣ?’ ಎಂದು ಪ್ರಶ್ನಿಸಿದರು.

‘ದೊಡ್ಡ ಅವಕಾಶಗಳನ್ನು ಬಳಸಿಕೊಳ್ಳಬೇಕು. ಟೆಸ್ಟ್‌  ಪಂದ್ಯಗಳಲ್ಲಿ ನಮ್ಮ ತಂಡದ ಸ್ಕೋರಿಂಗ್ ಎವರೇಜ್‌ ಉತ್ತಮವಾಗಿದೆ. ದಕ್ಷಿಣ ಆಫ್ರಿಕಾ ಅಥವಾ ಇಂಗ್ಲೆಂಡ್  ಯಾವುದೇ ಇರಲಿ. ಪಂದ್ಯದ ಮೇಲೆ ಹಿಡಿತ ಸಾಧಿಸುವ ಸಂದರ್ಭಗಳು ಸಿಗುತ್ತವೆ. ಆಗ ಚೆನ್ನಾಗಿ ಆಡಿ ಪಾರಮ್ಯ ಮೆರೆಯಬೇಕು’ ಎಂದರು.

’ಸದ್ಯದ  ಆಸ್ಟ್ರೇಲಿಯಾ ತಂಡವು ದುರ್ಬಲವಾಗಿದೆಯೆಂದು ನನಗನಿಸುವುದಿಲ್ಲ. ಇಲ್ಲಿಯ ಕ್ರೀಡಾ ಸಂಸ್ಕೃತಿ ಬಹಳ ದೊಡ್ಡದು ಮತ್ತು ಗಟ್ಟಿಬೇರುಗಳನ್ನು ಹೊಂದಿದೆ. ಅದರಲ್ಲೂ ತಮ್ಮದೇ ತವರಿನಲ್ಲಿ ಯಾವುದೇ ತಂಡವೂ ದುರ್ಬಲವಾಗಲು ಸಾಧ್ಯವಿಲ್ಲ’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 3

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !