ಗುವಾಹಟಿ: ಇಲ್ಲಿ ನಿನ್ನೆ (ಮಾರ್ಚ್ 30) ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧ ರಾಜಸ್ಥಾನ್ ರಾಯಲ್ಸ್ 8 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ವೇಳೆ ಚೆನ್ನೈ ತಂಡದ ಮಾಜಿ ಆಟಗಾರ ರವೀಂದ್ರ ಜಡೇಜ ಅವರು ಸಿಎಸ್ಕೆ ತಂಡದ ಲೋಗೋವನ್ನು ಚುಂಬಿಸಿರುವ ಘಟನೆ ನಡೆದಿದೆ.

2012ರಿಂದ 12 ವರ್ಷಗಳ ಕಾಲ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಆಡಿದ್ದ ರವೀಂದ್ರ ಜಡೇಜ ಅವರನ್ನು, ಈ ಬಾರಿಯ ಐಪಿಎಲ್ ಆರಂಭಕ್ಕೂ ಮುನ್ನ ರಾಜಸ್ಥಾನ ರಾಯಲ್ಸ್ ತಂಡವು ಟ್ರೇಡ್ ಮೂಲಕ ಖರೀದಿ ಮಾಡಿತ್ತು. ನಿನ್ನೆಯ ಪಂದ್ಯದಲ್ಲಿ ರಾಜಸ್ಥಾನದ ಪರ ಆಡಿದ ಅವರು 2 ವಿಕೆಟ್ ಪಡೆದು ಮಿಂಚಿದರು.

ಸಿಎಸ್ಕೆ ವಿರುದ್ಧದ ಪಂದ್ಯ ಮುಗಿದ ಬಳಿ ರವೀಂದ್ರ ಜಡೇಜ ಅವರು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಟಗಾರ ಖಲೀಲ್ ಅಹ್ಮದ್ ಅವರೊಂದಿಗೆ ಆತ್ಮೀಯವಾಗಿ ಮಾತುಕತೆ ನಡೆಸಿದ್ದಾರೆ. ಆ ಸಂದರ್ಭದಲ್ಲಿ ಜಡೇಜ ಅವರು ಖಲೀಲ್ ಅವರ ಜೆರ್ಸಿಯಲ್ಲಿದ್ದ ಚೆನ್ನೈ ಫ್ರಾಂಚೈಸಿಯ ಲೋಗೋವನ್ನು ಚುಂಬಿಸಿದ್ದಾರೆ. ಆ ಮೂಲಕ ಫ್ರಾಂಚೈಸಿಯಿಂದ ಹೊರಬಂದರೂ ಅವರಿಗೆ ಸಿಎಸ್ಕೆ ತಂಡದ ಮೇಲಿರುವ ಪ್ರೀತಿ ಎಂತಹದ್ದು ಎಂಬುದು ತಿಳಿದು ಬಂದಿದೆ.

2018, 2021 ಮತ್ತು 2023ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಪ್ರಶಸ್ತಿ ಗೆದ್ದಾಗ ಜಡೇಜ ಸಿಎಸ್ಕೆ ತಂಡದ ಪ್ರಮುಖ ಆಟಗಾರರಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.