ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರು ಪೂರೈಕೆ ಪೈಪ್ ಲೈನ್ ದುರಸ್ತಿಗೆ ಆಗ್ರಹ

Last Updated 10 ಮಾರ್ಚ್ 2018, 6:56 IST
ಅಕ್ಷರ ಗಾತ್ರ

ಗಜೇಂದ್ರಗಡ: ಬಡಾವಣೆಯಲ್ಲಿ ಸರಿಯಾಗಿ ನೀರು ಪೂರೈಕೆಯಾಗುತ್ತಿಲ್ಲ. ಹಳೆ ಪೈಪ್ ತೆಗೆದು ಹೊಸ ಪೈಪ್ ಅಳವಡಿಸುವಂತೆ ಆಗ್ರಹಿಸಿ ಪಟ್ಟಣದ ಶಿವಾಜಿ ಪೇಟೆ ನಿವಾಸಿಗಳು ರಸ್ತೆಯಲ್ಲಿ ಖಾಲಿ ಕೊಡಗಳನ್ನು ಇಟ್ಟು ಶುಕ್ರವಾರ ಪ್ರತಿಭಟನೆ ನಡೆಸಿದರು.

‘ಹಲವು ವರ್ಷಗಳಿಂದ ಪೈಪ್ ಲೈನ್ ದುರಸ್ತಿಗೆ ಪುರಸಭೆಯವರಿಗೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಇದರಿಂದ ಇಲ್ಲಿನ ಜನತೆ ಕುಡಿಯುವ ನೀರಿಗಾಗಿ ಪರಿತಪಿಸುವಂತಾಗಿದೆ. ಕೂಡಲೇ ದುರಸ್ತಿ ಮಾಡ ಬೇಕು’ ಎಂದು ಪ್ರತಿಭಟನಾ ನಿರತರು ಆಗ್ರಹಿಸಿದರು.

ಸ್ಥಳಕ್ಕೆ ಪುರಸಭೆ ಕಿರಿಯ ಎಂಜಿನಿಯರ್‌ ಎಸ್.ಬಿ.ಮರಿಗೌಡರ ಭೇಟಿ ನೀಡಿ ಈ ಕುರಿತು ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವ ಸಲ್ಲಿಸಲಾಗುವುದು. ಅನುಮೋದನೆ ಬಂದ ತಕ್ಷಣ ದುರಸ್ತಿ ಮಾಡುವುದಾಗಿ ತಿಳಿಸಿದರು.

ಕಿರಿಯ ಎಂಜಿನಿಯರ್‌ ಅವರ ಭರವಸೆಯ ನಂತರ ಪ್ರತಿಭಟನೆ ಹಿಂದಕ್ಕೆ ಪಡೆಯಲಾಯಿತು.

ಗಜೇಂದ್ರಗಡ ಪುರಸಭೆ ಸದಸ್ಯ ಎಂ.ಎಸ್.ಹಡಪದ, ಮಾರುತಿ ಚಿಟಗಿ, ಯಲ್ಲಪ್ಪ ಕಲ್ಗುಡಿ, ನಾಗಪ್ಪ ಅರಗಂಜಿ, ನಾಗಪ್ಪ ಕೊಟಗಿ, ಲಕ್ಷ್ಮಣ ಕಲ್ಗುಡಿ, ಯಲ್ಲಮ್ಮ ತಿರಕೋಜಿ, ರಾಜವ್ವ ತಿರಕೋಜಿ, ನಿರ್ಮಲಾ ಆರೇರ, ರೇಖವ್ವ ನಿಂಬೋಜಿ, ಗಂಗವ್ವ ಕಲ್ಗುಡಿ, ವೀರೇಶ ನಿಂಬೋಜಿ, ಪರಸಪ್ಪ ನಿಂಬೋಜಿ, ಶೇಖವ್ವ ಕಲ್ಗುಡಿ, ಬರಮೊಜಿ ನಿಂಗೋಜಿ, ತಿಪ್ಪಣ್ಣ ತಿರಕೋಜಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT