ಇಂಗ್ಲೆಂಡ್‌ ಕ್ರಿಕೆಟ್‌ ಸರಣಿಯಲ್ಲಿ ವೈಫಲ್ಯ: ರವಿಶಾಸ್ತ್ರಿ ಜೊತೆ ಸಿಒಎ ಚರ್ಚೆ?

7

ಇಂಗ್ಲೆಂಡ್‌ ಕ್ರಿಕೆಟ್‌ ಸರಣಿಯಲ್ಲಿ ವೈಫಲ್ಯ: ರವಿಶಾಸ್ತ್ರಿ ಜೊತೆ ಸಿಒಎ ಚರ್ಚೆ?

Published:
Updated:

ನವದೆಹಲಿ: ಭಾರತ ತಂಡ ಇಂಗ್ಲೆಂಡ್‌ ಎದುರಿನ ಕ್ರಿಕೆಟ್‌ ಸರಣಿಗಳಲ್ಲಿ ವೈಫಲ್ಯ ಕಂಡಿರುವ ಬಗ್ಗೆ ಬಿಸಿಸಿಐ ಆಡಳಿತಾಧಿಕಾರಿಗಳ ಸಮಿತಿಯು (ಸಿಒಎ) ಶೀಘ್ರವೇ ಮುಖ್ಯ ಕೋಚ್‌ ರವಿಶಾಸ್ತ್ರಿಯೊಂದಿಗೆ ಚರ್ಚಿಸುವ ಸಾಧ್ಯತೆ ಇದೆ.

ವಿರಾಟ್‌ ಕೊಹ್ಲಿ ಬಳಗ ಏಕದಿನ ಮತ್ತು ಟೆಸ್ಟ್‌ ಸರಣಿಗಳಲ್ಲಿ ಸೋಲು ಕಂಡಿತ್ತು. ಈ ಕುರಿತು ಶಾಸ್ತ್ರಿ ಅವರಿಂದ ವಿವರಣೆ ಪಡೆಯುವ ಸಂಭವ ಇದೆ.

‘ಸೆಪ್ಟೆಂಬರ್‌ 11ರಂದು ಮುಂಬೈಯಲ್ಲಿ ಸಿಒಎ ಸಭೆ ನಡೆಯಲಿದ್ದು ಇದರಲ್ಲಿ ಭಾರತ ತಂಡದ ವೈಫಲ್ಯದ ಬಗ್ಗೆ ಚರ್ಚಿಸಲು ತೀರ್ಮಾನಿಸಲಾಗಿದೆ. ಈ ವೇಳೆ ಆಯ್ಕೆ ಸಮಿತಿ ಮುಖ್ಯಸ್ಥ ಎಂ.ಎಸ್‌.ಕೆ. ಪ್ರಸಾದ್‌ ಅವರಿಂದಲೂ ವಿವರಣೆ ಪಡೆಯಲಾಗುತ್ತದೆ’ ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !