ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ 252ಕ್ಕೆ ಸರ್ವ ಪತನ; ತಂಡಕ್ಕೆ ರಾಯುಡು–ಶಂಕರ್‌ ಆಸರೆ

Last Updated 3 ಫೆಬ್ರುವರಿ 2019, 6:35 IST
ಅಕ್ಷರ ಗಾತ್ರ

ವೆಲ್ಲಿಂಗ್ಟನ್‌: ನ್ಯೂಜಿಲೆಂಡ್‌ ವಿರುದ್ಧ ಭಾನುವಾರ ನಡೆಯುತ್ತಿರುವ ಅಂತಿಮ, ಐದನೇ ಏಕದಿನ ಪಂದ್ಯದಲ್ಲಿಯೂ ಭಾರತದ ತಂಡದ ಮೇಲಿನ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಪರದಾಡಿದರು. ಅಂಬಟಿ ರಾಯುಡು ಹಾಗೂ ವಿಜಯ್‌ ಶಂಕರ್‌ ಅವರ ತಾಳ್ಮೆಯ ಜತೆಯಾಟದ ಫಲವಾಗಿ ಭಾರತ ಸಾಧಾರಣ ಸವಾಲಿನ ಮೊತ್ತ ಗಳಿಸಲು ಸಾಧ್ಯವಾಯಿತು.

ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ಕೆ ಮಾಡಿದ ರೋಹಿತ್‌ ಶರ್ಮಾ ಬಳಗ ಆರಂಭದಲ್ಲಿಯೇ ಪ್ರಮುಖ ನಾಲ್ಕು ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಕೇವಲ 18 ರನ್‌ಗಳಿಗೆ 4 ವಿಕೆಟ್‌ ಕಳೆದುಕೊಂಡಿದ್ದ ತಂಡಕ್ಕೆ ವಿಜಯ್‌ ಶಂಕರ್‌(64 ಎಸೆತಗಳಿಗೆ 45) ಮತ್ತು ಅಂಬಟಿ ರಾಯುಡು(113 ಎಸೆತಗಳಲ್ಲಿ 90) ತೋರಿದ ತಾಳ್ಮೆಯ ಹೋರಾಟದಿಂದ ನ್ಯೂಜಿಲೆಂಡ್‌ ಬೌಲರ್‌ಗಳಿಗೆ ಪ್ರತಿರೋಧ ತೋರಿದರೆ. ಐದನೇ ವಿಕೆಟ್‌ನ ಜತೆಯಾಟದಲ್ಲಿ 98 ರನ್‌ ಸೇರಿಸಿದರು. ಎಂಟನೇ ಕ್ರಮಾಂಕದಲ್ಲಿ ಅಂಗಳಕ್ಕಿಳಿದ ಹಾರ್ದಿಕ್‌ ಪಾಂಡ್ಯ(22 ಎಸೆತಗಳಲ್ಲಿ 45) ತೋರಿದ ಬಿರುಸಿನ ಆಟದ ಫಲವಾಗಿ ಭಾರತ 250ರ ಗಡಿ ದಾಟಿತು.

49.5 ಓವರ್‌ಗಳಲ್ಲಿ ಭಾರತ ಎಲ್ಲ ವಿಕೆಟ್‌ ಕಳೆದುಕೊಂಡು 252 ರನ್‌ ಗಳಿಸಿತು. ಜಾಧವ್‌ 34 ರನ್‌ ಗಳಿಸುವ ಮೂಲಕ ತಂಡಕ್ಕೆ ಆಸರೆಯಾದರು.

ನ್ಯೂಜಿಲೆಂಡ್‌ನ ಮ್ಯಾಟ್‌ ಹೆನ್ರಿ 35 ರನ್‌ ನೀಡಿ 4 ವಿಕೆಟ್‌ ಪಡೆದರು. ನಾಲ್ಕನೇ ಏಕದಿನ ಪಂದ್ಯದಲ್ಲಿ ಮಿಂಚಿದ್ದ ಟ್ರೆಂಟ್‌ ಬೌಲ್ಟ್‌ ಈ ಪಂದ್ಯದಲ್ಲಿ 39 ರನ್‌ ನೀಡಿ 3 ವಿಕೆಟ್‌ ನೀಡಿ ಮತ್ತೆ ಸಾಮರ್ಥ್ಯ ತೋರಿದರು.

ಆರಂಭದಲ್ಲಿ ಶಿಖರ್‌ ಧವನ್‌ ಒಂದು ಬೌಂಡರಿ ಸೇರಿ 6 ರನ್‌ಗಳಿಸಿದರೆ, ರೋಹಿತ್ ಶರ್ಮಾ ಕೇವಲ 2ರನ್‌ ಗಳಿಗೆ ವಿಕೆಟ್‌ ಕಳೆದುಕೊಂಡರು.ಯುವ ಆಟಗಾರ ಶುಭಮನ್ ಗಿಲ್ ಸಹ ಒಂದು ಬೌಂಡರಿಯೊಂದಿಗೆ ಒಟ್ಟು 7 ರನ್‌ ಗಳಿಸಿ ಪೆವಿಲಿಯನ್‌ಗೆ ಮರಳಿದರು. ಮಧ್ಯಮ ಕ್ರಮಾಂಕದಲ್ಲಿ ನಿರೀಕ್ಷೆ ಮೂಡಿಸಿದ್ದ ಮಹೇಂದ್ರ ಸಿಂಗ್‌ ದೋನಿ ಬೌಲ್ಟ್‌ ದಾಳಿಗೆ ಬಲಿಯಾದರು. ಆರು ಎಸೆತ ಎದುರಿಸಿದ ದೋನಿ ಕೇವಲ 1ರನ್‌ ಗಳಿಸಿ ನಿರ್ಗಮಿಸಿದರು.

ಈ ಪಂದ್ಯದಲ್ಲಿ ನಾಯಕ ರೋಹಿತ್‌ ಶರ್ಮಾ ತಂಡದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದ್ದರು,ದಿನೇಶ್‌ ಕಾರ್ತಿಕ್‌ ಸ್ಥಾನಕ್ಕೆ ದೋನಿ, ಖಲೀಲ್‌ ಅಹ್ಮದ್ ಮತ್ತು ಕುಲದೀಪ್‌ ಯಾದವ್‌ ಜಾಗದಲ್ಲಿ ಮೊಹಮ್ಮದ್‌ ಶಮಿ ಮತ್ತು ವಿಜಯ್‌ ಶಂಕರ್‌ಗೆ ಅವಕಾಶ ನೀಡಿದ್ದರು.

ಭಾರತದ 253 ರನ್‌ಗಳ ಗುರಿಯ ಬೆನ್ನತ್ತಿರುವ ನ್ಯೂಜಿಲೆಂಡ್‌, 5 ಓವರ್‌ಗಳಲ್ಲಿ 1 ವಿಕೆಟ್‌ ನಷ್ಟಕ್ಕೆ 22 ರನ್‌ಗಳಿಸಿದೆ. ಕ್ಷಣಕ್ಷಣದ ಸ್ಕೋರ್ ವಿವರಕ್ಕಾಗಿ ಕ್ಲಿಕ್ಕಿಸಿ:https://bit.ly/2TyOyMB

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT