ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವೇಗಿ, ಯಶ್ ದಯಾಳ್ ಅವರು ಉತ್ತರ ಪ್ರದೇಶದ ನೋಯ್ಡಾದಲ್ಲಿ ವ್ಲಾಗರ್ ಶ್ವೇತಾ ಪುಂಡಿರ್ ಅವರನ್ನು ವರಿಸಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಬೌಲರ್ಗಳಲ್ಲಿ ಒಬ್ಬರಾದ ಯಶ್ ದಯಾಳ್ ಗೋಪ್ಯವಾಗಿ ವಿವಾಹವಾಗಿದ್ದಾರೆ ಎನ್ನಲಾಗಿದೆ. ಆದರೆ ವಿವಾಹದ ಕುರಿತು ದಯಾಳ್ ಅವರಾಗಲೀ, ಅವರ ಕುಟುಂಬದವರಾಗಲೀ ಖಚಿತಪಡಿಸಿಲ್ಲ.

ಸದ್ಯ ಸಾಮಾಜಿಕ ಮಾಧ್ಯಮದಲ್ಲಿ ಯಶ್ ದಯಾಳ್ ಅವರ ಮದುವೆಯ ಫೋಟೊಗಳು ಹರಿದಾಡುತ್ತಿವೆ. ದಯಾಳ್ ಹಾಗೂ ಶ್ವೇತಾ ಕುಟುಂಬಸ್ಥರ ಸಮ್ಮುಖದಲ್ಲಿ ಫೆಬ್ರುವರಿ 4ರಂದು ವಿವಾಹವಾಗಿದ್ದಾರೆ.

ದಯಾಳ್ ಅವರು ಐಪಿಎಲ್ನಲ್ಲಿ ಆಡುವ ಆರ್ಸಿಬಿ ತಂಡವು, 2025ರಲ್ಲಿ ಚಾಂಪಿಯನ್ ಪಟ್ಟಕೇರಿತ್ತು. ಆರ್ಸಿಬಿ ಗೆಲುವಿನಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ಆದರೆ, ಆರ್ಸಿಬಿ ಪ್ರಶಸ್ತಿ ಗೆದ್ದ ಸ್ವಲ್ಪ ದಿನಗಳಲ್ಲೇ ದಯಾಳ್ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಕೇಳಿ ಬಂದಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ದಯಾಳ್ ಅವರ ಬಂಧನಕ್ಕೆ ಅಲಹಾಬಾದ್ ಹೈಕೋರ್ಟ್ ತಡೆ ನೀಡಿದೆ.

ಶ್ವೇತಾ ಪುಂಡಿರ್ ಯಾರು?

ಮಾಧ್ಯಮಗಳ ವರದಿ ಪ್ರಕಾರ ಶ್ವೇತಾ ಪುಂಡಿರ್, ದೆಹಲಿ ಮೂಲದ ಸಾಮಾಜಿಕ ಮಾಧ್ಯಮ ಇನ್ಫ್ಲುಯೆನ್ಸರ್ ಆಗಿದ್ದಾರೆ. ಇನ್ಸ್ಟಾಗ್ರಾಂನಲ್ಲಿ 5 ಲಕ್ಷಕ್ಕೂ ಹೆಚ್ಚಿನ ಅನುಯಾಯಿಗಳಿದ್ದಾರೆ. ಇವರು ಇಂಟರ್ನ್ಯಾಷನಲ್ ಲೆಜೆಂಡ್ಸ್ ಲೀಗ್ನ ನಿರೂಪಕಿಯಾಗಿಯೂ ಕೆಲಸ ಮಾಡುತ್ತಿದ್ದಾರೆ.

ಇದೇ ಮಾರ್ಚ್ 28ರಿಂದ ಐಪಿಎಲ್ ಪಂದ್ಯ ಆರಂಭವಾಗಲಿದೆ. ತವರಿನಲ್ಲಿ ನಡೆಯುವ ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸನ್ರೈಸರ್ಸ್ ಹೈದರಾಬಾದ್ ಪಡೆಯನ್ನು ಎದುರಿಸಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.