ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ 2026ರ ಬಲಿಷ್ಠ ತಂಡವಾಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಆಡಿರುವ ಎರಡು ಪಂದ್ಯಗಳಲ್ಲೂ ಅಮೋಘ ಗೆಲುವು ದಾಖಲಿಸಿದೆ. ಆದರೆ, ಮುಂದಿನ ಪಂದ್ಯಗಳಲ್ಲಿ ಆರ್ಸಿಬಿ ತಂಡಕ್ಕೆ ಕಠಿಣ ಸವಾಲು ಎದುರಾಗುವ ಸಾಧ್ಯತೆ ಇದೆ.

ಆರ್ಸಿಬಿ ತಂಡವು ಈಗಾಗಲೇ ಸನ್ರೈಸರ್ಸ್ ಹೈದರಾಬಾದ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳನ್ನು ಮಣಿಸಿದೆ. ಆದರೆ, ಗುವಾಹಟಿಯಲ್ಲಿ ಏಪ್ರಿಲ್ 10ರಂದು ನಡೆಯಲಿರುವ ಪಂದ್ಯದಲ್ಲಿ ಈಗಾಗಲೆ ಮೂರಕ್ಕೆ ಮೂರೂ ಪಂದ್ಯಗಳನ್ನು ಗೆದ್ದು ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ರಾಜಸ್ಥಾನ ರಾಯಲ್ಸ್ ತಂಡವನ್ನು ಎದುರಿಸಲಿದೆ.

ಬಲಿಷ್ಠವಾಗಿದೆ ರಾಜಸ್ಥಾನ

ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗಳಲ್ಲೂ ಬಲಿಷ್ಠವಾಗಿರುವ ರಾಜಸ್ಥಾನ ತಂಡಕ್ಕೆ ಆರಂಭಿಕ ಬ್ಯಾಟರ್ಗಳಾದ ವೈಭವ್ ಸೂರ್ಯವಂಶಿ, ಯಶಸ್ವಿ ಜೈಸ್ವಾಲ್, ನಾಯಕ ರಿಯಾನ್ ಪರಾಗ್ ಹಾಗೂ ಉತ್ತಮ ಲಯದಲ್ಲಿರುವ ಧ್ರುವ್ ಜುರೆಲ್ ತಂಡದ ಬ್ಯಾಟಿಂಗ್ ಬಲ ಹೆಚ್ಚಿಸಿದ್ದಾರೆ.

ಇನ್ನೂ ನಿನ್ನೆ (ಏಪ್ರಿಲ್ 7) ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡದ ಜಸ್ಪ್ರೀತ್ ಬೂಮ್ರಾ ವಿರುದ್ಧ 2 ಸಿಕ್ಸರ್ ಬಾರಿಸಿ, ಕೇವಲ 14 ಎಸೆತಗಳಲ್ಲಿ 39 ರನ್ ಬಾರಿಸಿದ ಯುವ ಆಟಗಾರ ವೈಭವ್ ಸೂರ್ಯವಂಶಿ ಅವರನ್ನು ಆರ್ಸಿಬಿಯ ಅನುಭವಿ ವೇಗಿ ಭುವನೇಶ್ವರ್ ಕುಮಾರ್ ಯಾವ ರೀತಿ ಕಟ್ಟಿಹಾಕುತ್ತಾರೆ ಎಂಬುದು ಕೂಡ ಕುತೂಹಲ ಮೂಡಿಸಿದೆ.

ಇದರ ಜೊತೆಗೆ ರಾಜಸ್ಥಾನ ತಂಡಕ್ಕೆ ಜೋಫ್ರಾ ಆರ್ಚರ್ ಬೌಲಿಂಗ್ ವಿಭಾಗದ ಶಕ್ತಿಯಾಗಿದ್ದಾರೆ. ತುಷಾರ ದೇಶಪಾಂಡೆ, ರವಿ ಬಿಷ್ಣೋಯಿ, ನಾಂಡ್ರೆ ಬರ್ಜರ್, ಸಂದೀಪ್ ಶರ್ಮಾರಂತಹ ಬೌಲರ್ಗಳು ತಂಡದಲ್ಲಿದ್ದು, ಎದುರಾಳಿ ತಂಡದ ಬ್ಯಾಟರ್ಗಳ ಮೇಲೆ ಒತ್ತಡ ಹೇರುತ್ತಿದ್ದಾರೆ.

ಇದರ ಜೊತೆಗೆ ಈ ಬಾರಿಯ ಆರೆಂಜ್ ಹಾಗೂ ಪರ್ಪಲ್ ಎರಡೂ ಕ್ಯಾಪ್ಗಳು ರಾಜಸ್ಥಾನ ತಂಡದಲ್ಲೇ ಇರುವುದು ವಿಶೇಷವಾಗಿದೆ. ಆಡಿರುವ 3 ಪಂದ್ಯಗಳಲ್ಲಿ 170 ರನ್ ಗಳಿಸಿರುವ ಜೈಸ್ವಾಲ್ ಆರೆಂಜ್ ಕ್ಯಾಪ್ ಹೊಂದಿದ್ದರೆ, 3 ಪಂದ್ಯಗಳಲ್ಲಿ 7 ವಿಕೆಟ್ ಪಡೆದಿರುವ ರವಿ ಬಿಷ್ಣೋಯಿ ಪರ್ಪಲ್ ಕ್ಯಾಪ್ ಹೊಂದಿದ್ದಾರೆ. ಮಾತ್ರವಲ್ಲ, 5 ವಿಕೆಟ್ ಪಡೆದಿರುವ ನಾಂಡ್ರೆ ಬರ್ಜರ್ ಕೂಡ ಪರ್ಪಲ್ ಕ್ಯಾಪ್ ಓಟದಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.

ಎರಡು ಪಂದ್ಯಗಳನ್ನು ಗೆದ್ದಿರುವ ಆರ್ಸಿಬಿ ತಂಡಕ್ಕೆ ಮೂರಕ್ಕೆ ಮೂರನ್ನೂ ಗೆದ್ದಿರುವ ರಾಜಸ್ಥಾನ ತಂಡವು ಆತ್ಮವಿಶ್ವಾಸದ ಜೊತೆಗೆ ಬಲಿಷ್ಠ ಆಟಗಾರರನ್ನು ಹೊಂದಿರುವುದರಿಂದ ಪ್ರಬಲ ಪೈಪೋಟಿ ನೀಡುವ ಸಾಧ್ಯತೆ ಇದೆ.

ಐಪಿಎಲ್ ಇತಿಹಾಸದಲ್ಲಿ ಉಭಯ ತಂಡಗಳು 34 ಬಾರಿ ಮುಖಾಮುಖಿಯಾಗಿದ್ದು, ಇದರಲ್ಲಿ ಆರ್ಸಿಬಿ 17 ಪಂದ್ಯಗಳಲ್ಲಿ ಗೆದ್ದರೆ, 14 ಬಾರಿ ಆರ್ಆರ್ ಗೆಲುವು ದಾಖಲಿಸಿದೆ. ಇನ್ನೂ 3 ಪಂದ್ಯಗಳು ರದ್ದಾಗಿವೆ.

ಏಪ್ರಿಲ್ 12ಕ್ಕೆ ಮುಂಬೈ ಸವಾಲು

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ರಾಜಸ್ಥಾನ ರಾಯಲ್ಸ್ ಸವಾಲಿನ ಬಳಿಕ ಏಪ್ರಿಲ್ 12ರಂದು ಬಲಿಷ್ಠ ಮುಂಬೈ ಇಂಡಿಯನ್ಸ್ ತಂಡವನ್ನು ವಾಂಖೆಡೆ ಮೈದಾನದಲ್ಲಿ ಎದುರಿಸಲಿದೆ. ಸದ್ಯ, ಆಡಿರುವ 3 ಪಂದ್ಯಗಳಲ್ಲಿ 2 ಸೋಲು ಮತ್ತು 1 ಗೆಲುವು ಸಾಧಿಸಿರುವ ಮುಂಬೈ ಇಂಡಿಯನ್ಸ್ ತಂಡವು ಮುಂದಿನ ಪಂದ್ಯದಲ್ಲಿ ಗೆಲ್ಲಲೇಬೇಕಾದ ಒತ್ತಡದಲ್ಲಿದೆ.

ಮೇಲ್ನೋಟಕ್ಕೆ ಬಲಿಷ್ಠವಾಗಿರುವ ಮುಂಬೈ ಇಂಡಿಯನ್ಸ್ ತಂಡವು ಬ್ಯಾಟಿಂಗ್ನಲ್ಲಿ ರೋಹಿತ್ ಶರ್ಮಾ, ರಿಯಾನ್ ರಿಕಲ್ಟನ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯರಂತಹ ತಾರಾ ಆಟಗಾರರದಿಂದ ಕೂಡಿದೆ.
.ಬೂಮ್ರಾ ಮೊದಲ ಎಸೆತಕ್ಕೆ 6: IPLನಲ್ಲಿ ಸಿಕ್ಸರ್ ಮೂಲಕವೇ ಹೊಸ ದಾಖಲೆ ಬರೆದ ವೈಭವ್.ಕಷ್ಟದ ಸಂದರ್ಭದಲ್ಲಿ ‘ಕೆಪಿ’ ಕಡೆ ನೋಡುತ್ತೇನೆ: ಆಲ್ರೌಂಡರ್ ಹೊಗಳಿದ RCB ನಾಯಕ.
ಬೌಲಿಂಗ್ ವಿಭಾಗದಲ್ಲಿ ವಿಶ್ವಶ್ರೇಷ್ಠ ಬೌಲರ್ಗಳಾದ ಜಸ್ಪ್ರೀತ್ ಬೂಮ್ರಾ, ಟ್ರೆಂಟ್ ಬೌಲ್ಟ್ ಹಾಗೂ ದೀಪಕ್ ಚಹಾರ್ರಂತಹ ವೇಗಿಗಳಿದ್ದಾರೆ.

ಜೊತೆಗೆ ಎರಡು ಪಂದ್ಯಗಳನ್ನು ಸೋತಿರುವುದರಿಂದ ಮುಂಬೈ ಇಂಡಿಯನ್ಸ್ ತಂಡವು ಸೆಮಿಫೈನಲ್ ಪ್ರವೇಶ ಪಡೆಯಲು ಮುಂಬರುವ ಪಂದ್ಯಗಳಲ್ಲಿ ಗೆಲ್ಲಲೇಬೇಕಾದ ಒತ್ತಡದಲ್ಲಿಯೂ ಇರುವುದರಿಂದ ಬೆಂಗಳೂರು ತಂಡಕ್ಕೆ ಸವಾಲು ಎಸೆಯುವ ಸಾಧ್ಯತೆ ಇದೆ.

ಐಪಿಎಲ್ ಇತಿಹಾಸದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು 34 ಬಾರಿ ಮುಖಾಮುಖಿಯಾಗಿದ್ದು, ಇದರಲ್ಲಿ ಮುಂಬೈ ತಂಡ 19 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದರೆ, ಬೆಂಗಳೂರು ತಂಡವು 15 ಪಂದ್ಯಗಳಲ್ಲಿ ಗೆಲುವು ದಾಖಲಿಸಿದೆ.

ಒಟ್ಟಾರೆ ಎರಡು ಪಂದ್ಯಗಳಲ್ಲಿ ಗೆದ್ದು ಅಜೇಯವಾಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಮುಂದಿನ ಎರಡು ಪಂದ್ಯಗಳಲ್ಲಿ ಪ್ರಬಲ ಪೈಪೋಟಿ ಎದುರಾಗಲಿದ್ದು, ಯಾವ ರೀತಿ ಎದುರಿಸಲಿದೆ ಎಂಬುದನ್ನು ಕಾದುನೋಡಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.