ಬೆಂಗಳೂರು: ಅಪಾರ ಅಭಿಮಾನಿಗಳನ್ನು ಹೊಂದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಹಾಗೂ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ತಂಡಗಳ ನಡುವಣ ಐಪಿಎಲ್ ಪಂದ್ಯಕ್ಕೆ ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣ ಭಾನುವಾರ ಸಾಕ್ಷಿಯಾಯಿತು.

ರಾತ್ರಿ 7.30 ಆರಂಭವಾದ ಪಂದ್ಯವನ್ನು ಕಣ್ತುಂಬಿಕೊಳ್ಳಲು ಸಾವಿರಾರು ಅಭಿಮಾನಿಗಳು ಮಧ್ಯಾಹ್ನದಿಂದಲೇ ಕ್ರೀಡಾಂಗಣದತ್ತ ಜಮಾಯಿಸಲಾರಂಭಿಸಿದ್ದರು.

ಕ್ರೀಡಾಂಗಣದ ಸುತ್ತಲೂ ಜೆರ್ಸಿ, ಧ್ವಜ ಮಾರುವವರ ಸಂಖ್ಯೆ ಏನೂ ಕಡಿಮೆ ಇರಲಿಲ್ಲ. ಕೆಲವರು ಮನೆಗಳಿಂದಲೇ ತಮ್ಮ ನೆಚ್ಚಿನ ತಂಡದ ಜೆರ್ಸಿ ತೊಟ್ಟು ಬಂದರೆ, ಹಲವರು ಸ್ಥಳದಲ್ಲೇ ಖರೀದಿಸಿ, ಅಲ್ಲೇ ತೊಟ್ಟು ಅಭಿಮಾನ ಮೆರೆದರು.

ನೋಡ ನೋಡುತ್ತಿದ್ದಂತೆ ಇಡೀ ಕ್ರೀಡಾಂಗಣ 'ಕೆಂಪೇರಿತು'. ಆರ್ಸಿಬಿ ಹಾಗೂ ಸಿಎಸ್ಕೆ ನಡುವಣ ಪಂದ್ಯವೇ ಐಪಿಎಲ್ನ ಅತಿದೊಡ್ಡ ಹಣಾಹಣಿ ಎನ್ನುವಂತಾಗಿದೆ. ಹಾಗಾಗಿ, ಪಂದ್ಯ ಆರಂಭಕ್ಕೂ ಮೊದಲೇ 'ಆರ್ಸಿಬಿ.. ಆರ್ಸಿಬಿ..', 'ಸಿಎಸ್ಕೆ.. ಸಿಎಸ್ಕೆ..' ಕೂಗು ಮುಗಿಲು ಮುಟ್ಟಿತ್ತು.

'ದೂರ' ಅನ್ನೋದು ದೂರದ ಮಾತು
'ಪಂದ್ಯವನ್ನು ನೋಡಬೇಕೆಂದು ಬೆಳಿಗ್ಗೆಯೇ ಬೆಂಗಳೂರಿಗೆ ಬಂದೆವು. ಆರ್ಸಿಬಿ vs ಸಿಎಸ್ಕೆ ಹಣಾಹಣಿ ಎಂದರೆ ಊರು ದೂರ ಎಂಬ ಪ್ರಶ್ನೆಯೇ ಬರುವುದಿಲ್ಲ. ಪಂದ್ಯದ ಕಾವು, ಪ್ರಭೆ ಹೇಗಿರುತ್ತದೆ ಎಂಬುದನ್ನು ಅನುಭವಿಸಲು ಕ್ರೀಡಾಂಗಣದ ಒಳಗೆ ಹೋಗಲು ಮಧ್ಯಾಹ್ನ 2ರಿಂದ ಕಾಯುತ್ತಿದ್ದೇವೆ'

ಪಂದ್ಯವನ್ನು ಕ್ರೀಡಾಂಗಣದಲ್ಲೇ ನೋಡಬೇಕೆಂದು 300 ಕಿ.ಮೀ. ದೂರದಿಂದ (ಹಾವೇರಿಯ ರಾಣೆಬೆನ್ನೂರಿನಿಂದ) ಬೆಂಗಳೂರಿಗೆ ಬಂದಿದ್ದ ಮಂಜುನಾಥ ಗೌಡ ಎಂಬವರು, ಹೈವೋಲ್ಟೇಜ್ ಹಣಾಹಣಿಯ ಬಗ್ಗೆ ಮಾತನಾಡಿದ್ದು ಹೀಗೆ.

ಗೇಟ್ನಿಂದ ಹೊರಗಷ್ಟೇ ನಾವು ಸ್ನೇಹಿತರು
ಚೆನ್ನೈನಿಂದ ಬಂದಿದ್ದ ಕಾರ್ತಿಕ್ ರಾಜಾ ಎಂಬವರು, 'ನಮ್ಮ ಮೇಲೆ ಯಾವುದೇ ಒತ್ತಡವಿಲ್ಲ. ಸಿಎಸ್ಕೆ ಹಲವು ವರ್ಷಗಳಿಂದ ಸ್ಥಿರ ಪ್ರದರ್ಶನ ನೀಡುತ್ತಾ ಬಂದಿದೆ. ನಮಗ್ಯಾವ ಚಿಂತೆಯೂ ಇಲ್ಲ. ನಾವು ಇಂದು ಇಲ್ಲಿ ಇರುವುದೇ ಗೆಲ್ಲಲಿಕ್ಕೆ' ಎಂದು ಹೇಳಿದರು. ಆದರೆ, ಅವರ ಜೊತೆಗೇ ಇದ್ದ ಅವರ ಆರ್ಸಿಬಿ ಅಭಿಮಾನಿ, ಆತ್ಮೀಯ ಗೆಳೆಯ ಹಾಗೂ ಸ್ಥಳೀಯ ನಿವಾಸಿ ರಾಹುಲ್ ಶೆಟ್ಟಿ, 'ನಾವಿಬ್ಬರೂ ಸ್ನೇಹಿತರು. ಆದರೆ, ಆರ್ಸಿಬಿ–ಸಿಎಸ್ಕೆ ಪಂದ್ಯವಿದ್ದಾಗ ನಮ್ಮ ಸ್ನೇಹ ಗೇಟ್ನಿಂದ ಹೊರಗಷ್ಟೇ' ಎಂದರು.
.RCB vs CSK: ಬೆಂಗಳೂರು ಭರಾಟೆಗೆ ಬಸವಳಿದ ಚೆನ್ನೈ.IPL 2026: ನಾಲ್ಕೇ ನಿಮಿಷಗಳಲ್ಲಿ ಆರ್ಸಿಬಿ ಟಿಕೆಟ್ ಮಾರಾಟ.
ಸಾವಿರಾರು ಅಭಿಮಾನಿಗಳು ನೂಕು ನುಗ್ಗಲಿನಲ್ಲೇ ಕ್ರೀಡಾಂಗಣದ ಒಳಗೆ ಪ್ರವೇಶಿಸಿದರು. ಪ್ರಯಾಸ ಪಡುವಂತಾದರೂ, ಕ್ರಿಕೆಟ್ ಮೇಲಿನ ಅಭಿಮಾನ ಅದನ್ನು ಮರೆಮಾಡುವಂತಿತ್ತು.

ಪಂದ್ಯ ವೀಕ್ಷಿಸಲು ಟಿಕೆಟ್ ಸಿಗದವರು ಬೇಸರಗೊಂಡಿದ್ದು ಸುಳ್ಳಲ್ಲ. ಪಂದ್ಯದ ಟಿಕೆಟ್ಗಳು ಆನ್ಲೈನ್ನಲ್ಲಿ ಕೇವಲ ನಾಲ್ಕೇ ನಿಮಿಷಗಳಲ್ಲಿ ಮಾರಾಟವಾಗಿದ್ದವು. ಟಿಕೆಟ್ ಖರೀದಿಸಲು ಸಾಧ್ಯವಾಗದವರು, ಸಾಮಾಜಿಕ ಮಾಧ್ಯಮಗಳಲ್ಲಿ ಟೀಕೆ ಮಾಡಿದ್ದರು.

ಪಂದ್ಯದ ದಿನ ಕ್ರೀಡಾಂಗಣದ ಬಳಿ ಹಾಕಿದ್ದ ಬ್ಯಾರಿಕೇಡ್ ಹತ್ತಿರ ಫಲಕ ಹಿಡಿದು ನಿಂತಿದ್ದ ಯುವಕನೊಬ್ಬ, ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಉದ್ದೇಶಿಸಿ ವಿಶೇಷ ಬೇಡಿಕೆಯೊಂದನ್ನು ಇಟ್ಟಿದ್ದ.

'ಪ್ರೀತಿಯ ಉಪಮುಖ್ಯಮಂತ್ರಿ ಅವರೇ, ನನಗೆ, ನನ್ನ ಸಹೋದರಿ ಮತ್ತು ಸ್ನೇಹಿತರಿಗೆ ಇಂದಿನ ಪಂದ್ಯದ ಟಿಕೆಟ್ ಸಿಕ್ಕಿಲ್ಲ. ನಿಮ್ಮ ಆಡಳಿತದ ಅವಧಿ ಮುಗಿಯುವ ಮುನ್ನ ಆರ್ಸಿಬಿ ಅಭಿಮಾನಿಗಳಿಗಾಗಿ ದಯವಿಟ್ಟು 1 ಲಕ್ಷ ಆಸನ ಸಾಮರ್ಥ್ಯದ ಕ್ರೀಡಾಂಗಣ ನಿರ್ಮಿಸಿ' ಎಂದು ಮನವಿ ಮಾಡಿಕೊಂಡಿದ್ದ.

ಆ ಯುವಕ ಹಾಗೂ ಫಲಕ, ದೇಶದ ಯುವಜನತೆ ಕ್ರಿಕೆಟ್ ಮೇಲೆ ಹೊಂದಿರುವ ಅತಿಯಾದ ಅಭಿಮಾನವನ್ನೇ ಪ್ರತಿಫಲಿಸಿದಂತಿತ್ತು.

ಚಿನ್ನಸ್ವಾಮಿ ಸಾಮರ್ಥ್ಯ
ಎಂ. ಚಿನ್ನಸ್ವಾಮಿ ಕ್ರೀಡಾಂಗಣವು 32,000 ಆಸನ ಸಾಮರ್ಥ್ಯವನ್ನು ಹೊಂದಿದೆ. ತವರಿನ ಆರ್ಸಿಬಿ ಪಂದ್ಯಗಳನ್ನು ವೀಕ್ಷಿಸಲು ಬೆಂಗಳೂರು ಮಾತ್ರವಲ್ಲದೆ ಕರ್ನಾಟಕದ ಮೂಲೆ ಮೂಲೆಗಳಿಂದ, ದೇಶದ ವಿವಿಧ ಭಾಗಗಳಿಂದ ಜನರು ಬರುತ್ತಾರೆ. ಲಕ್ಷಾಂತರ ಅಭಿಮಾನಿಗಳು ಆರ್ಸಿಬಿ ಪಂದ್ಯಗಳನ್ನು ವೀಕ್ಷಿಸಲು ಹಾತೊರೆಯುತ್ತಾರೆ. ಹೀಗಾಗಿ, ಕ್ರೀಡಾಂಗಣದ ಸಾಮರ್ಥ್ಯವನ್ನು ಹೆಚ್ಚಿಸಬೇಕು. ಇಲ್ಲವೇ ಹೊಸ ಕ್ರೀಡಾಂಗಣ ನಿರ್ಮಿಸಬೇಕು ಎಂಬುದು ಅಭಿಮಾನಿಗಳ ಬೇಡಿಕೆಯಾಗಿದೆ.

'ಪಂದ್ಯದ ಟಿಕೆಟ್ ಖರೀದಿಸಲು ಪ್ರತಿವರ್ಷವೂ ಇದೇ ರೀತಿ ಹೋರಾಟ ನಡೆಸಬೇಕು. ನಾವು ಹಣ ಕೊಡಲು, ಕಾಯಲು ಸಿದ್ಧರಿದ್ದೇವೆ. ಆದರೆ, ಬೆಂಗಳೂರು ತಂಡಕ್ಕೆ ಇರುವ ಅಪಾರ ಅಭಿಮಾನಿ ಬಳಗಕ್ಕೆ ಹೋಲಿಸಿದರೆ, ಈ ಕ್ರೀಡಾಂಗಣ ತುಂಬಾ ಚಿಕ್ಕದು' ಎಂದು ಸಿದ್ಧಾರ್ಥ್ ಎಂ. ಎಂಬವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.