ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಪಾಲಿಗೆ 2026 ಅದೃಷ್ಟದ ವರ್ಷವಾಗಿದೆ. ಈ ವರ್ಷದ ಆರಂಭದಲ್ಲಿ ಮಹಿಳಾ ತಂಡವು ಡಬ್ಲ್ಯುಪಿಎಲ್ ಟ್ರೋಫಿ ಗೆದ್ದರೆ, ಪುರುಷರ ತಂಡವು ಈಗ ಸತತ ಎರಡನೇ ಬಾರಿಗೆ ಐಪಿಎಲ್ ಟ್ರೋಫಿ ಗೆಲ್ಲುವ ಮೂಲಕ ದಾಖಲೆ ಬರೆದಿದೆ.

ಒಂದೇ ವರ್ಷದಲ್ಲಿ ಐಪಿಎಲ್ ಮತ್ತು ಡಬ್ಲ್ಯುಪಿಎಲ್ ಟ್ರೋಫಿ ಜಯಿಸಿದ ಏಕೈಕ ಫ್ರಾಂಚೈಸಿ ಆರ್ಸಿಬಿಯಾಗಿದೆ.

17 ವರ್ಷಗಳ ಕಾಲ ಟ್ರೋಫಿಗಾಗಿ ಕನವರಿಸಿದ್ದ ಮೋಸ್ಟ್ ಸೆಲಬ್ರೇಟೆಡ್ ಐಪಿಎಲ್ ತಂಡವಾದ ಆರ್ಸಿಬಿಗೆ 2025ರಲ್ಲಿ ಮೊದಲ ಬಾರಿಗೆ ಟ್ರೋಫಿಗೆ ಮುತ್ತಿಡುವ ಅವಕಾಶ ಒದಗಿ ಬಂದಿತ್ತು. ರಜತ್ ಪಾಟೀದಾರ್ ಪಡೆ ಎಲ್ಲ ಸವಾಲುಗಳನ್ನು ಮೆಟ್ಟಿ ನಿಂತು ಟ್ರೋಫಿ ಗೆದ್ದು ಸಂಭ್ರಮಿಸಿತ್ತು. ಆ ಸಂತೋಷಕ್ಕೆ ಪಾರವೇ ಇರಲಿಲ್ಲ. ಅಭಿಮಾನಿಗಳ ಸಂಭ್ರಮದ ಕಟ್ಟೆ ಒಡೆದುಹೋಗಿತ್ತು. ಬೆಂಗಳೂರಿನಲ್ಲಿ ನಡೆದ ಸಂಭ್ರಮಾಚರಣೆಯು ವಿಶ್ವದ ಯಾವುದೇ ಕ್ರೀಡೆಗೂ ನಡೆದಿಲ್ಲವೇನೊ ಎಂಬಂತೆ ಭಾಸವಾಗಿತ್ತು. ಸಾಗರೋಪಾದಿಯಲ್ಲಿ ಸೇರಿದ್ದ ಜನರನ್ನು ಕಂಡು ಇಡೀ ಕ್ರೀಡಾ ಜಗತ್ತು ನಿಬ್ಬೆರಗಾಗಿತ್ತು. ಆ ಬಳಿಕ, ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತ ಸಂಭವಿಸಿ ಕೆಲ ಅಭಿಮಾನಿಗಳು ಮೃತಪಟ್ಟರು.

2025ರ ಜಯದ ಗುಂಗಿನಲ್ಲೇ 2026ರ ಅಭಿಯಾನ ಆರಂಭಿಸಿದ್ದ ಆರ್ಸಿಬಿಯು ಹಿರಿಯಣ್ಣ ವಿರಾಟ್ ಕೊಹ್ಲಿ ನೇತೃತ್ವದಲ್ಲಿ ಅತ್ಯಂತ ಧೈರ್ಯಶಾಲಿ ಆಟ ಪ್ರದರ್ಶಿಸಿತ್ತು. ಪ್ರತಿ ಪಂದ್ಯದಲ್ಲೂ ಕೆಚ್ಚೆದೆಯ ಹೋರಾಟ ಮಾಡುತ್ತಿದ್ದ ತಂಡ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನ ಅಲಂಕರಿಸುವ ಮೂಲಕ ಮೊದಲ ತಂಡವಾಗಿ ಪ್ಲೇ ಆಫ್ ತಲುಪಿತ್ತು. ಆಮೇಲೆ ನಡೆದಿದ್ದೇ ಇತಿಹಾಸ. ಮೊದಲ ಕ್ವಾಲಿಫೈಯರ್ನಲ್ಲಿ ಗುಜರಾತ್ ಅನ್ನು ಬಗ್ಗುಬಡಿದಿದ್ದ ಆರ್ಸಿಬಿ, ಫೈನಲ್ನಲ್ಲೂ ಅದೇ ತಂಡವನ್ನು ಮಣಿಸಿ ಟ್ರೋಫಿ ಎತ್ತಿಹಿಡಿಯಿತು.

ಆರ್ಸಿಬಿ ಟ್ರೋಫಿ ಬರ ನೀಗಿಸಿದ್ದ ಮಹಿಳೆಯರ ತಂಡ

ಹಾಗೇ ನೋಡಿದರೆ ಆರ್ಸಿಬಿ ಫ್ರಾಂಚೈಸಿಗೆ ಮೊದಲ ಟ್ರೋಫಿ ತಂದುಕೊಟ್ಟಿದ್ದೇ ಸ್ಮೃತಿ ಮಂಧನಾ ನೇತೃತ್ವದ ಮಹಿಳೆಯರ ತಂಡ. 2024ರಲ್ಲಿ ಕೆಚ್ಚೆದೆಯ ಆಟ ಪ್ರದರ್ಶಿಸಿದ್ದ ಸ್ಮೃತಿ ಮಂಧನಾ, ಎಲಿಸ್ ಪೆರಿ, ರಿಚಾ ಘೋಷ್ ಅವರನ್ನು ಒಳಗೊಂಡ ಬೆಂಗಳೂರು ಮಹಿಳೆಯರ ತಂಡ ಡೆಲ್ಲಿ ಕ್ಯಾಪಿಟಲ್ಸ್ ಅನ್ನು ಮಣಿಸಿ ಡಬ್ಲ್ಯುಪಿಎಲ್ ಟ್ರೋಫಿ ಗೆಲ್ಲುವ ಮೂಲಕ ಪುರುಷರಿಗೆ ಹಲವು ವರ್ಷಗಳಿಂದ ಸಾಧ್ಯವಾಗದ್ದನ್ನು ಸಾಧಿಸಿ ತೋರಿಸಿತ್ತು. 2026ರಲ್ಲಿ ಕೆಲ ಬದಲಾವಣೆಗಳೊಂದಿಗೆ ಕಣಕ್ಕಿಳಿದಿದ್ದ ಸ್ಮೃತಿ ಪಡೆ 2024ರ ವೈಭವವನ್ನು ಮರುಕಳಿಸಿತು.

ಈ ವರ್ಷ ಎರಡೂ ತಂಡಗಳು ಟ್ರೋಫಿ ಗೆಲ್ಲುವ ಮೂಲಕ ಆರ್ಸಿಬಿ ಫ್ರಾಂಚೈಸಿಗೆ ಅವಿಸ್ಮರಣಿಯವೆನಿಸಿದೆ.

ಬೆಂಗಳೂರು ಫ್ರಾಂಚೈಸಿ ಹೊರತುಪಡಿಸಿದರೆ ಬೇರಾವ ಫ್ರಾಂಚೈಸಿಯೂ ಒಂದೇ ವರ್ಷ ಐಪಿಎಲ್, ಡಬ್ಲ್ಯುಪಿಎಲ್ ಟ್ರೋಫಿ ಗೆದ್ದಿಲ್ಲ. ಮುಂಬೈ, ಯುಪಿ, ಡೆಲ್ಲಿ ಮತ್ತು ಗುಜರಾತ್ನಲ್ಲೂ ಮಹಿಳೆಯರ ತಂಡಗಳಿವೆ.
.ಐಪಿಎಲ್ ಫೈನಲ್ ಸೋಲಿನ ಬಳಿಕ ಬಸ್ನ ಬೆಂಕಿ ಅವಘಡದಲ್ಲಿ ಸಿಲುಕಿ ಒದ್ದಾಡಿದ GT.ಫೈನಲ್ನಲ್ಲಿ ವಿರಾಟ್ ಕೊಹ್ಲಿ ಆರ್ಭಟ; ಈ ಸಲವೂ ಕಪ್ ಆರ್ಸಿಬಿಗೇ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.